Skip to content
Opens in a new window
Listen to this chapter • 1:03

[1] ಯೆಹೋವ ದೇವರು ಆಳಿಕೆ ಮಾಡುತ್ತಿದ್ದಾರೆ. ಘನತೆಯನ್ನು ಹೊದ್ದುಕೊಂಡಿದ್ದಾರೆ. ಬಲದಿಂದ ತಮ್ಮ ನಡುವನ್ನು ಕಟ್ಟಿಕೊಂಡಿದ್ದಾರೆ. ಆದುದರಿಂದ ಲೋಕವು ಸಹ ಸ್ಥಿರವಾಗಿದೆ, ಕದಲುವುದಿಲ್ಲ.

[2] ದೇವರೇ, ನಿಮ್ಮ ಸಿಂಹಾಸನವು ಪೂರ್ವಕಾಲದಿಂದ ಸ್ಥಿರವಾಗಿದೆ. ಯುಗಯುಗದಿಂದ ನೀವು ಇದ್ದೀರಿ.

[3] ಯೆಹೋವ ದೇವರೇ, ಸಮುದ್ರಗಳಲ್ಲಿ ಪ್ರವಾಹಗಳು ಮೊರೆಯುತ್ತಿವೆ. ಸಮುದ್ರಗಳು ತಮ್ಮ ಧ್ವನಿಯನ್ನು ಎತ್ತಿವೆ. ಸಮುದ್ರಗಳು ತಮ್ಮ ಅಲೆಗಳ ಘೋಷವನ್ನು ಎತ್ತಿವೆ.

[4] ಮಹಾಸಾಗರದ ಶಬ್ದಕ್ಕಿಂತಲೂ, ಸಮುದ್ರದ ಬಲವಾದ ಅಲೆಗಳಿಗಿಂತಲೂ ಉನ್ನತದಲ್ಲಿರುವ ಯೆಹೋವ ದೇವರು ಬಲಿಷ್ಠರಾಗಿದ್ದಾರೆ.

[5] ದೇವರೇ, ನಿಮ್ಮ ಶಾಸನಗಳು ಬಹಳ ನಿಶ್ಚಯವಾದವುಗಳು. ಯೆಹೋವ ದೇವರೇ, ಪರಿಶುದ್ಧತೆಯು ಸದಾಕಾಲ ನಿಮ್ಮ ಆಲಯವನ್ನು ಅಲಂಕರಿಸುತ್ತದೆ.

ಕೀರ್ತನೆಗಳು — Chapters