Skip to content
Opens in a new window
Listen to this chapter • 0:52

[1] ಯೆಹೋವ ದೇವರಲ್ಲಿ ಭರವಸವಿಡುವವರು ಚೀಯೋನ್ ಪರ್ವತದ ಹಾಗಿದ್ದಾರೆ; ಆ ಪರ್ವತವು ಯುಗಯುಗಕ್ಕೂ ಕದಲದೆ ಇರುವುದು.

[2] ಯೆರೂಸಲೇಮಿನ ಸುತ್ತಲೂ ಬೆಟ್ಟಗಳಿರುವಂತೆ, ಯೆಹೋವ ದೇವರು ಈಗಿನಿಂದ ಯುಗಯುಗಕ್ಕೂ ತಮ್ಮ ಜನರ ಸುತ್ತಲೂ ಇದ್ದಾರೆ.

[3] ನೀತಿವಂತರು ತಮ್ಮ ಕೈಗಳನ್ನು ಅನ್ಯಾಯಕ್ಕೆ ಚಾಚದ ಹಾಗೆ, ದುಷ್ಟನ ಕೋಲು ನೀತಿವಂತರ ಸ್ವಾಸ್ತ್ಯದ ಮೇಲೆ ನೆಲೆಯಾಗಿರುವುದಿಲ್ಲ.

[4] ಯೆಹೋವ ದೇವರೇ, ಒಳ್ಳೆಯವರಿಗೂ, ಯಥಾರ್ಥ ಹೃದಯವುಳ್ಳವರಿಗೂ ಒಳ್ಳೆಯದನ್ನು ಮಾಡುತ್ತಾರೆ.

[5] ಆದರೆ ಡೊಂಕು ಮಾರ್ಗಗಳಲ್ಲಿ ತಿರುಗುವವರನ್ನು, ದುಷ್ಟರ ಸಂಗಡ ದೇವರು ತೊಲಗಿಸಲಿ. ಇಸ್ರಾಯೇಲರ ಮೇಲೆ ಸಮಾಧಾನವಿರಲಿ.

ಕೀರ್ತನೆಗಳು — Chapters