Skip to content
Opens in a new window
Listen to this chapter • 1:02

[1] ಯೆಹೋವ ದೇವರು ನಮ್ಮ ಪರವಾಗಿ ಇರದಿದ್ದರೆ, ಏನಾಗುತ್ತಿತ್ತು ಎಂದು ಇಸ್ರಾಯೇಲರೇ ಹೇಳಲಿ.

[2] ವೈರಿಗಳು ನಮಗೆ ವಿರೋಧವಾಗಿ ಎದ್ದಾಗ ಯೆಹೋವ ದೇವರು ನಮ್ಮ ಪರವಾಗಿ ಇರದಿದ್ದರೆ,

[3] ಅವರು ನಮ್ಮ ಮೇಲೆ ರೋಷಗೊಂಡು ನಮ್ಮನ್ನು ನಾಶಮಾಡಿಬಿಡುತ್ತಿದ್ದರು.

[4] ಆಗ ಪ್ರವಾಹವು ನಮ್ಮನ್ನು ಮುಳುಗಿಸುತ್ತಿತ್ತು; ತೊರೆಯು ನಮ್ಮ ಪ್ರಾಣದ ಮೇಲೆ ಹರಿಯುತ್ತಿತ್ತು.

[5] ರಭಸ ಪ್ರವಾಹ ನಮ್ಮನ್ನು ಕೊಚ್ಚಿಕೊಂಡು ಹೋಗಿಬಿಡುತ್ತಿತ್ತು.

[6] ಆದರೆ ನಮ್ಮನ್ನು ವೈರಿಗಳ ಹಲ್ಲುಗಳಿಗೆ ಬೇಟೆಯಾಗಿ ಕೊಡದೆ ಇದ್ದ ಯೆಹೋವ ದೇವರಿಗೆ ಸ್ತೋತ್ರವಾಗಲಿ.

[7] ನಾವು ಬೇಟೆಗಾರರ ಬಲೆಯಿಂದ ತಪ್ಪಿಸಿಕೊಂಡ ಪಕ್ಷಿಯಂತೆ ಇದ್ದೇವೆ. ನಾವು ಹರಿದುಹೋದ ಬಲೆಯಿಂದ ತಪ್ಪಿಸಿಕೊಂಡೆವು.

[8] ನಮ್ಮ ಸಹಾಯವು ಆಕಾಶವನ್ನೂ, ಭೂಮಿಯನ್ನೂ ಸೃಷ್ಟಿಸಿದ ಯೆಹೋವ ದೇವರ ಹೆಸರಿನಲ್ಲಿ ಒದಗಿ ಬಂತು.

ಕೀರ್ತನೆಗಳು — Chapters