Skip to content
Opens in a new window
Listen to this chapter • 3:11

[1] ಯೆಹೋವ ದೇವರಿಗೆ ಉಪಕಾರ ಸಲ್ಲಿಸಿರಿ; ಅವರು ಒಳ್ಳೆಯವರು; ದೇವರ ಪ್ರೀತಿಯು ಎಂದೆಂದಿಗೂ ಇರುವುದು.

[2] ದೇವಾಧಿ ದೇವರಿಗೆ ಕೃತಜ್ಞತಾಸ್ತುತಿ ಸಲ್ಲಿಸಿರಿ; ದೇವರ ಪ್ರೀತಿಯು ಎಂದೆಂದಿಗೂ ಇರುವುದು.

[3] ಪ್ರಭುಗಳ ಪ್ರಭುವಿಗೆ ಕೃತಜ್ಞತಾಸ್ತುತಿ ಸಲ್ಲಿಸಿರಿ; ದೇವರ ಪ್ರೀತಿಯು ಎಂದೆಂದಿಗೂ ಇರುವುದು.

[4] ಅವರೊಬ್ಬರೇ ಮಹಾ ಅದ್ಭುತಗಳನ್ನು ಮಾಡುತ್ತಾರೆ; ದೇವರ ಪ್ರೀತಿಯು ಎಂದೆಂದಿಗೂ ಇರುವುದು.

[5] ತಮ್ಮ ಜ್ಞಾನದಿಂದ ಪರಲೋಕಗಳನ್ನು ನಿರ್ಮಿಸಿದರು; ದೇವರ ಪ್ರೀತಿಯು ಎಂದೆಂದಿಗೂ ಇರುವುದು.

[6] ನೀರಿನ ಮೇಲೆ ಭೂಮಿಯನ್ನು ವಿಸ್ತರಿಸಿದರು; ದೇವರ ಪ್ರೀತಿಯು ಎಂದೆಂದಿಗೂ ಇರುವುದು.

[7] ದೊಡ್ಡ ಬೆಳಕುಗಳನ್ನು ನಿರ್ಮಿಸಿದರು; ದೇವರ ಪ್ರೀತಿಯು ಎಂದೆಂದಿಗೂ ಇರುವುದು.

[8] ಸೂರ್ಯನು ಹಗಲನ್ನಾಳುವಂತೆ ಮಾಡಿದರು; ದೇವರ ಪ್ರೀತಿಯು ಎಂದೆಂದಿಗೂ ಇರುವುದು.

[9] ರಾತ್ರಿಯನ್ನಾಳಲು ಚಂದ್ರನನ್ನೂ, ನಕ್ಷತ್ರಗಳನ್ನೂ ಇಟ್ಟರು; ದೇವರ ಪ್ರೀತಿಯು ಎಂದೆಂದಿಗೂ ಇರುವುದು.

[10] ಈಜಿಪ್ಟಿನವರ ಚೊಚ್ಚಲ ಮಕ್ಕಳನ್ನು ದಂಡಿಸಿದರು; ದೇವರ ಪ್ರೀತಿಯು ಎಂದೆಂದಿಗೂ ಇರುವುದು.

[11] ಇಸ್ರಾಯೇಲರನ್ನು ಈಜಪ್ಟಿನಿಂದ ಹೊರಗೆ ಬರಮಾಡಿದವರನ್ನು ಕೊಂಡಾಡಿರಿ; ದೇವರ ಪ್ರೀತಿಯು ಎಂದೆಂದಿಗೂ ಇರುವುದು.

[12] ಬಲವಾದ ಕೈಯಿಂದಲೂ, ಚಾಚಿದ ತೋಳಿನಿಂದಲೂ ಅವರನ್ನು ಹೊರತಂದರು; ದೇವರ ಪ್ರೀತಿಯು ಎಂದೆಂದಿಗೂ ಇರುವುದು.

[13] ಕೆಂಪು ಸಮುದ್ರವನ್ನು ವಿಭಾಗಿಸಿದರು; ದೇವರ ಪ್ರೀತಿಯು ಎಂದೆಂದಿಗೂ ಇರುವುದು.

[14] ಇಸ್ರಾಯೇಲನ್ನು ಅದರ ನಡುವೆ ದಾಟಿಸಿದರು; ದೇವರ ಪ್ರೀತಿಯು ಎಂದೆಂದಿಗೂ ಇರುವುದು.

[15] ಫರೋಹನನ್ನೂ, ಅವನ ಸೈನ್ಯವನ್ನೂ ಕೆಂಪು ಸಮುದ್ರದಲ್ಲಿ ಕೆಡವಿದರು; ದೇವರ ಪ್ರೀತಿಯು ಎಂದೆಂದಿಗೂ ಇರುವುದು.

[16] ತಮ್ಮ ಜನರನ್ನು ಮರುಭೂಮಿಯಲ್ಲಿ ನಡೆಸಿದರು; ದೇವರ ಪ್ರೀತಿಯು ಎಂದೆಂದಿಗೂ ಇರುವುದು.

[17] ದೊಡ್ಡ ಅರಸರನ್ನು ದಂಡಿಸಿದರು; ದೇವರ ಪ್ರೀತಿಯು ಎಂದೆಂದಿಗೂ ಇರುವುದು.

[18] ಶ್ರೇಷ್ಠ ಅರಸರನ್ನು ಸಹ ದಂಡಿಸಿದರು; ದೇವರ ಪ್ರೀತಿಯು ಎಂದೆಂದಿಗೂ ಇರುವುದು.

[19] ಅಮೋರಿಯರ ಅರಸನಾದ ಸೀಹೋನನು ದಂಡನೆಹೊಂದಿದನು; ದೇವರ ಪ್ರೀತಿಯು ಎಂದೆಂದಿಗೂ ಇರುವುದು.

[20] ಬಾಷಾನಿನ ಅರಸನಾದ ಓಗನು ಸಂಹಾರವಾದ ಮತ್ತೊಬ್ಬನು; ದೇವರ ಪ್ರೀತಿಯು ಎಂದೆಂದಿಗೂ ಇರುವುದು.

[21] ಅವರ ದೇಶವನ್ನು ಬಾಧ್ಯತೆಯಾಗಿ ದೇವರು ಕೊಟ್ಟರು; ದೇವರ ಪ್ರೀತಿಯು ಎಂದೆಂದಿಗೂ ಇರುವುದು.

[22] ತಮ್ಮ ಸೇವಕ ಇಸ್ರಾಯೇಲನಿಗೆ ಅದು ಸೊತ್ತಾಯಿತು; ದೇವರ ಪ್ರೀತಿಯು ಎಂದೆಂದಿಗೂ ಇರುವುದು.

[23] ನಾವು ಹೀನ ಸ್ಥಿತಿಯಲ್ಲಿದ್ದಾಗ ನಮ್ಮನ್ನು ನೆನಪಿಸಿಕೊಂಡರು; ದೇವರ ಪ್ರೀತಿಯು ಎಂದೆಂದಿಗೂ ಇರುವುದು.

[24] ನಮ್ಮ ವೈರಿಗಳಿಂದ ನಮ್ಮನ್ನು ಬಿಡಿಸಿದರು; ದೇವರ ಪ್ರೀತಿಯು ಎಂದೆಂದಿಗೂ ಇರುವುದು.

[25] ಸಕಲ ಜೀವಿಗಳಿಗೂ ಆಹಾರವನ್ನು ಕೊಡುತ್ತಾರೆ; ದೇವರ ಪ್ರೀತಿಯು ಎಂದೆಂದಿಗೂ ಇರುವುದು.

[26] ಪರಲೋಕದ ದೇವರನ್ನು ಕೊಂಡಾಡಿರಿ; ದೇವರ ಪ್ರೀತಿಯು ಎಂದೆಂದಿಗೂ ಇರುವುದು.

ಕೀರ್ತನೆಗಳು — Chapters