Skip to content
Opens in a new window
Listen to this chapter • 1:08

[1] ಯೆಹೋವ ದೇವರು ನನ್ನ ಕುರುಬ ಆಗಿದ್ದಾರೆ, ನನಗೆ ಕೊರತೆಯೇ ಇಲ್ಲ.

[2] ಅವರು ಹಸಿರುಗಾವಲುಗಳಲ್ಲಿ ನನ್ನನ್ನು ವಿಶ್ರಮಿಸುವಂತೆ ಮಾಡುತ್ತಾರೆ; ಪ್ರಶಾಂತ ಜಲರಾಶಿಯ ಬಳಿಗೆ ನನ್ನನ್ನು ನಡೆಸುತ್ತಾರೆ.

[3] ಅವರು ನನ್ನ ಪ್ರಾಣವನ್ನು ಚೈತನ್ಯಗೊಳಿಸುತ್ತಾರೆ. ತಮ್ಮ ಹೆಸರಿನ ನಿಮಿತ್ತ ನನ್ನನ್ನು ನೀತಿ ಮಾರ್ಗದಲ್ಲಿ ನಡೆಸುತ್ತಾರೆ.

[4] ನಾನು ಕಾರ್ಗತ್ತಲಿನ ಕಣಿವೆಯಲ್ಲಿ ನಡೆಯುವಾಗಲೂ, ನೀವು ನನ್ನೊಂದಿಗಿರುವುದರಿಂದ ನಾನು ಕೇಡಿಗೆ ಹೆದರೆನು; ನಿಮ್ಮ ದೊಣ್ಣೆಯೂ ನಿಮ್ಮ ಕೋಲೂ ನನ್ನನ್ನು ಸಂತೈಸುತ್ತವೆ.

[5] ನೀವು ನನ್ನ ವೈರಿಗಳ ಮುಂದೆಯೇ ನನಗೊಂದು ಔತಣವನ್ನು ಸಿದ್ಧಮಾಡುತ್ತೀರಿ. ನೀವು ನನ್ನ ತಲೆಗೆ ತೈಲವನ್ನು ಅಭಿಷೇಕಿಸುತ್ತೀರಿ. ನನ್ನ ಪಾತ್ರೆಯು ತುಂಬಿ ಹೊರಸೂಸುತ್ತದೆ.

[6] ನಿಶ್ಚಯವಾಗಿ ಶುಭವೂ ಪ್ರೀತಿಯೂ ನನ್ನ ಜೀವಮಾನವೆಲ್ಲಾ ನನ್ನನ್ನು ಹಿಂಬಾಲಿಸುತ್ತವೆ; ನಾನು ಯೆಹೋವ ದೇವರ ಮನೆಯಲ್ಲಿ ಸದಾಕಾಲವೂ ವಾಸಿಸುವೆನು.

ಕೀರ್ತನೆಗಳು — Chapters