Skip to content
Opens in a new window
Listen to this chapter • 1:41

[1] ಯೆಹೋವ ದೇವರನ್ನು ಸ್ತುತಿಸಿರಿ. ನನ್ನ ಪ್ರಾಣವೇ, ಯೆಹೋವ ದೇವರನ್ನು ಸ್ತುತಿಸು.

[2] ನಾನು ಬದುಕುವವರೆಗೂ ಯೆಹೋವ ದೇವರನ್ನು ಸ್ತುತಿಸುವೆನು; ನಾನು ಇರುವವರೆಗೂ ನನ್ನ ದೇವರನ್ನು ಸ್ತುತಿಸುವೆನು.

[3] ಅಧಿಪತಿಗಳಲ್ಲಿಯೂ ರಕ್ಷಿಸಲಾಗದ ಮಾನವರಲ್ಲಿಯೂ ಭರವಸವಿಡಬೇಡಿರಿ.

[4] ಅವರ ಶ್ವಾಸವು ಹೋಗಲು ಮಣ್ಣಿಗೆ ಸೇರುತ್ತಾರೆ, ಅದೇ ದಿವಸದಲ್ಲಿ ಅವರ ಆಲೋಚನೆಗಳೆಲ್ಲಾ ನಾಶವಾಗುತ್ತವೆ.

[5] ಯಾಕೋಬನ ದೇವರನ್ನು ತಮ್ಮ ಸಹಾಯಕರಾಗಿ ಮಾಡಿಕೊಂಡವನು ಧನ್ಯನು; ಅವನು ತನ್ನ ದೇವರಾದ ಯೆಹೋವ ದೇವರ ಮೇಲೆ ನಿರೀಕ್ಷೆ ಇಡುವನು.

[6] ಆಕಾಶವನ್ನೂ, ಭೂಮಿಯನ್ನೂ, ಸಮುದ್ರವನ್ನೂ, ಅವುಗಳಲ್ಲಿರುವ ಎಲ್ಲವನ್ನೂ ಉಂಟುಮಾಡಿದ ದೇವರೇ ಎಂದೆಂದಿಗೂ ನಂಬಿಗಸ್ತರು.

[7] ಅವರು ದಬ್ಬಾಳಿಕೆಯಾದ ನ್ಯಾಯತೀರಿಸುತ್ತಾರೆ, ಹಸಿದವರಿಗೆ ಆಹಾರವನ್ನು ಕೊಡುತ್ತಾರೆ. ಯೆಹೋವ ದೇವರು ಸೆರೆಯವರನ್ನು ಬಿಡಿಸುತ್ತಾರೆ.

[8] ಯೆಹೋವ ದೇವರು ಕುರುಡರ ಕಣ್ಣುಗಳನ್ನು ತೆರೆಯುತ್ತಾರೆ. ಅವರು ದೀನರನ್ನು ಎತ್ತುತ್ತಾರೆ. ನೀತಿವಂತರನ್ನು ಪ್ರೀತಿಸುತ್ತಾರೆ.

[9] ಯೆಹೋವ ದೇವರು ಪರದೇಶಸ್ಥರನ್ನು ಕಾಪಾಡುತ್ತಾರೆ. ದಿಕ್ಕಿಲ್ಲದವರನ್ನೂ, ವಿಧವೆಯರನ್ನೂ ಉದ್ಧರಿಸುತ್ತಾರೆ. ಆದರೆ ದುಷ್ಟರ ಮಾರ್ಗವನ್ನು ಬೇಸರಪಡಿಸುತ್ತಾರೆ.

[10] ಚೀಯೋನೇ, ನಿಮ್ಮ ದೇವರಾದ ಯೆಹೋವ ದೇವರು ತಲತಲಾಂತರಕ್ಕೂ, ಸರ್ವ ಸಂತತಿಗಳವರೆಗೂ ಆಳಿಕೆ ಮಾಡುತ್ತಾರೆ. ಯೆಹೋವ ದೇವರಿಗೆ ಸ್ತೋತ್ರ.

ಕೀರ್ತನೆಗಳು — Chapters