Skip to content
Opens in a new window
Listen to this chapter • 1:13

[1] “ನನ್ನ ಯೌವನದಿಂದ ನನ್ನನ್ನು ಶತ್ರುಗಳು ಬಹಳ ಬಾಧಿಸಿದ್ದಾರೆ,” ಎಂದು ಇಸ್ರಾಯೇಲು ಹೇಳಲಿ.

[2] “ನನ್ನ ಯೌವನದಿಂದ ವೈರಿಗಳು ನನ್ನ ಮೇಲೆ ದಬ್ಬಾಳಿಕೆ ಮಾಡಿದರು; ಆದರೆ ಅವರು ನನ್ನ ಮೇಲೆ ವಿಜಯ ಸಾಧಿಸಲಿಲ್ಲ.

[3] ಊಳುವವರು ನನ್ನ ಬೆನ್ನಿನ ಮೇಲೆ ಉತ್ತಿದರು, ಉದ್ದವಾದ ಗಾಯಗೆರೆಗಳನ್ನು ಮಾಡಿದರು

[4] ಆದರೆ ಯೆಹೋವ ದೇವರು ನೀತಿವಂತರು; ದುಷ್ಟರು ಹಾಕಿದ ಬಂಧಗಳನ್ನು ದೇವರು ಕಡಿದು, ನಮ್ಮನ್ನು ಬಿಡುಗಡೆ ಮಾಡಿದ್ದಾರೆ.”

[5] ಚೀಯೋನನ್ನು ದ್ವೇಷಿಸುವವರೆಲ್ಲರು ನಾಚಿಕೆಪಟ್ಟು ಹಿಂದಿರುಗಲಿ.

[6] ಅವರು ಮಾಳಿಗೆ ಮೇಲಿನ ಹುಲ್ಲಿನಂತೆ ಆಗಲಿ. ಅವು ಬೆಳೆಯುವುದಕ್ಕೆ ಮುಂಚೆ ಒಣಗಿ ಹೋಗುತ್ತದೆ.

[7] ಅದರಿಂದ ಕೊಯ್ಯುವವನು ತನ್ನ ಕೈ ತುಂಬಿಸಿಕೊಳ್ಳನು, ಸಿವುಡು ಕಟ್ಟುವವನು ತನ್ನ ಉಡಿಯನ್ನೂ ತುಂಬಿಸಿಕೊಳ್ಳಲಾರನು.

[8] “ಯೆಹೋವ ದೇವರ ಆಶೀರ್ವಾದವು ನಿಮ್ಮ ಮೇಲೆ ಇರಲಿ; ಯೆಹೋವ ದೇವರು ಹೆಸರಿನಲ್ಲಿ ನಿಮ್ಮನ್ನು ಆಶೀರ್ವದಿಸುತ್ತೇವೆ,” ಎಂದು ಹಾದುಹೋಗುವವರು ಹೇಳದಿರಲಿ.

ಕೀರ್ತನೆಗಳು — Chapters