Skip to content
Opens in a new window
Listen to this chapter • 1:36

[1] ಯೆಹೋವ ದೇವರೇ, ರಕ್ಷಿಸಿರಿ, ಏಕೆಂದರೆ ದೇವಭಕ್ತರು ಮುಗಿದು ಹೋಗುತ್ತಿದ್ದಾರೆ; ಜನರಲ್ಲಿ ನಂಬಿಗಸ್ತರು ಇಲ್ಲದೆ ಹೋಗುತ್ತಿದ್ದಾರೆ.

[2] ಪ್ರತಿಯೊಬ್ಬರು ತಮ್ಮ ನೆರೆಯವರ ಸಂಗಡ ಸುಳ್ಳಾಡುತ್ತಾರೆ; ಅವರು ತಮ್ಮ ತುಟಿಯಿಂದ ಹೊಗಳಿ, ಹೃದಯದಲ್ಲಿ ವಂಚನೆಯನ್ನು ಮಾತನಾಡುತ್ತಾರೆ.

[3] ಹೊಗಳಿಕೆಯ ಎಲ್ಲಾ ತುಟಿಗಳನ್ನೂ ಗರ್ವ ಮಾತನಾಡುವ ಎಲ್ಲಾ ನಾಲಿಗೆಯನ್ನೂ ಯೆಹೋವ ದೇವರು ಮೌನವಾಗಿರಿಸಲಿ.

[4] ಅವರು ಹೀಗೆನ್ನುತ್ತಾರೆ, “ನಾವು ನಮ್ಮ ನಾಲಿಗೆಯಿಂದ ಜಯಿಸುವೆವು; ನಮ್ಮ ತುಟಿಗಳೇ ನಮಗೆ ಸಂರಕ್ಷಣೆ ನಮ್ಮ ಮೇಲೆ ಒಡೆಯನು ಯಾರು?”

[5] “ಬಡವರು ಹಿಂಸೆಗೆ ಒಳಗಾಗಿರುವುದರಿಂದಲೂ ಗತಿಯಿಲ್ಲದವರು ನರಳಾಡುವುದರಿಂದಲೂ ನಾನು ಈಗಲೇ ಏಳುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ. “ಪೀಡಿಸುವವರಿಂದ ನಾನು ಬಡವರನ್ನು ಕಾಪಾಡುವೆನು.”

[6] ಯೆಹೋವ ದೇವರ ವಾಕ್ಯಗಳು ದೋಷವಿಲ್ಲದ್ದು. ಅವು ಮಣ್ಣಿನ ಕುಲುಮೆಯಲ್ಲಿ ಶುದ್ಧೀಕರಿಸಿದ ಬೆಳ್ಳಿಯಂತೆಯೂ ಏಳು ಸಾರಿ ಪುಟಕ್ಕೆ ಹಾಕಿದ ಬಂಗಾರದಂತೆಯೂ ಇವೆ.

[7] ಯೆಹೋವ ದೇವರೇ, ನೀವು ಗತಿಯಿಲ್ಲದವರನ್ನು ದುಷ್ಟರಿಂದ ಯಾವಾಗಲೂ ಕಾಪಾಡಿ ಸಂರಕ್ಷಿಸುತ್ತೀರಿ,

[8] ಮನುಷ್ಯರು ಅಸಹ್ಯವಾದದ್ದನ್ನು ಗೌರವಿಸುವಾಗ, ಆ ದುಷ್ಟರು ಎಲ್ಲಾ ಕಡೆಗಳಲ್ಲಿಯೂ ಸ್ವತಂತ್ರವಾಗಿ ಅಲೆದಾಡುತ್ತಿರುವರು.

ಕೀರ್ತನೆಗಳು — Chapters