Skip to content
Opens in a new window
Listen to this chapter • 1:08

[1] ದೇವರು ಮಹಾಸಭೆಯಲ್ಲಿ ಅಧ್ಯಕ್ಷತೆವಹಿಸಿ, ದೇವರುಗಳ ಮಧ್ಯದಲ್ಲಿ ನ್ಯಾಯತೀರಿಸುತ್ತಾರೆ.

[2] “ಎಷ್ಟರವರೆಗೆ ಅನ್ಯಾಯವಾಗಿ ತೀರ್ಪು ನೀಡುವಿರಿ. ಎಲ್ಲಿಯತನಕ ದುಷ್ಟರಿಗೆ ಮುಖದಾಕ್ಷಿಣ್ಯ ಮಾಡುವಿರಿ?

[3] ದರಿದ್ರನನ್ನೂ ದಿಕ್ಕಿಲ್ಲದವನನ್ನೂ ಕಾಪಾಡಿರಿ. ದೀನನಿಗೂ, ಬಡವನಿಗೂ ನ್ಯಾಯವನ್ನು ಕೊಡಿರಿ.

[4] ದರಿದ್ರನನ್ನೂ, ಬಡವನನ್ನೂ ತಪ್ಪಿಸಿರಿ. ಅವರನ್ನು ದುಷ್ಟರ ಕೈಯೊಳಗಿಂದ ಬಿಡಿಸಿರಿ.

[5] “ದೇವರುಗಳು ಅರಿಯರು ಏನೂ, ಅವರು ಗ್ರಹಿಸುವುದಿಲ್ಲ ಏನೂ. ಅವರು ಕತ್ತಲೆಯಲ್ಲಿ ನಡೆದುಕೊಳ್ಳುತ್ತಾರೆ. ಭೂಮಿಯ ಅಸ್ತಿವಾರಗಳೆಲ್ಲಾ ಕದಲುತ್ತಿದೆ.

[6] “ನಾನು ಮುಂದುವರೆಸಿ ಅವರಿಗೆ ಹೇಳಿದ್ದು, ‘ನೀವು ದೇವರುಗಳು, ನೀವೆಲ್ಲರು ಮಹೋನ್ನತ ದೇವರ ಮಕ್ಕಳು,’ ಎಂದು ಹೇಳಿದೆನು.

[7] ಆದರೂ ಕೇವಲ ಮನುಷ್ಯರ ಹಾಗೆ ನೀವು ಸಾಯುವಿರಿ. ಇತರ ನಾಯಕರಂತೆಯೇ ಬಿದ್ದು ಹೋಗುವಿರಿ.”

[8] ದೇವರೇ, ಬನ್ನಿರಿ ಭೂಮಿಗೆ ನ್ಯಾಯತೀರಿಸಿರಿ. ಏಕೆಂದರೆ ಜನಾಂಗಗಳೆಲ್ಲಾ ನಿಮಗೇ ಸೇರಿರುತ್ತವೆ.

ಕೀರ್ತನೆಗಳು — Chapters