Skip to content
Opens in a new window
Listen to this chapter • 0:58

[1] ನನ್ನ ಇಕ್ಕಟ್ಟಿನಲ್ಲಿ ನಾನು ಯೆಹೋವ ದೇವರಿಗೆ ಕೂಗಿದೆನು; ಅವರು ನನಗೆ ಉತ್ತರಕೊಟ್ಟರು.

[2] ಯೆಹೋವ ದೇವರೇ, ನನ್ನ ಪ್ರಾಣವನ್ನು ಸುಳ್ಳು ತುಟಿಯಿಂದಲೂ, ಮೋಸದ ನಾಲಿಗೆಯಿಂದಲೂ ಬಿಡಿಸಿರಿ.

[3] ಮೋಸದ ನಾಲಿಗೆಯೇ, ದೇವರು ನಿನಗೆ ಏನು ಕೊಡಬೇಕು? ಯಾವ ಹೆಚ್ಚಿನ ಶಿಕ್ಷೆಯನ್ನು ಒದಗಿಸಬೇಕು?

[4] ಪರಾಕ್ರಮಶಾಲಿಯ ಹದವಾದ ಬಾಣಗಳು ಮತ್ತು ಜಾಲಿ ಮರದ ಕೆಂಡಗಳಿಂದ ನಿನಗೆ ಶಿಕ್ಷೆಯಾಗುವುದು.

[5] ಅಯ್ಯೋ, ನಾನು ಮೆಷೆಕಿನಲ್ಲಿ ತಂಗಬೇಕಲ್ಲಾ! ಕೇದಾರಿನ ಗುಡಾರಗಳ ಬಳಿ ವಾಸಮಾಡುತ್ತೇನೆ.

[6] ನಾನು ಸಮಾಧಾನವನ್ನು ವಿರೋಧಿಸುವವರ ಮಧ್ಯದಲ್ಲಿ ಬಹುಕಾಲ ಜೀವಿಸಬೇಕಾಯಿತು.

[7] ನಾನು ಶಾಂತಿ ಪ್ರಿಯನು; ಆದರೆ ನಾನು ಮಾತಾಡಿದರೆ ಅವರು ಯುದ್ಧಕ್ಕೆ ಬರುತ್ತಾರೆ.

ಕೀರ್ತನೆಗಳು — Chapters