Skip to content
Opens in a new window
Listen to this chapter • 1:16

[1] ಯೆಹೋವ ದೇವರೇ, ಅಂತರಾಳದಿಂದ ನಿಮಗೆ ಮೊರೆಯಿಡುತ್ತೇನೆ.

[2] ಯೆಹೋವ ದೇವರೇ, ನನ್ನ ಧ್ವನಿಯನ್ನು ಕೇಳಿರಿ. ನನ್ನ ಕೂಗಿಗೆ ಕರುಣೆ ತೋರಿಸಿ, ನಿಮ್ಮ ಕಿವಿಗಳು ನನ್ನ ವಿಜ್ಞಾಪನೆಗಳನ್ನು ಆಲೈಸಲಿ.

[3] ಯೆಹೋವ ದೇವರೇ, ನೀವು ಪಾಪಗಳನ್ನು ಎಣಿಸಿದರೆ, ನಿಮ್ಮ ಮುಂದೆ ಯಾರು ನಿಲ್ಲುವರು?

[4] ಆದರೆ ನಿಮ್ಮಲ್ಲಿ ಕ್ಷಮಾಪಣೆ ಉಂಟು. ನಾವು ನಿಮ್ಮನ್ನು ಭಯಭಕ್ತಿಯಿಂದ ಸೇವೆಮಾಡುವಂತೆ ನಿಮ್ಮ ಕ್ಷಮಾಪಣೆಯಿದೆ.

[5] ಯೆಹೋವ ದೇವರನ್ನು ನಿರೀಕ್ಷಿಸುತ್ತೇನೆ, ನನ್ನ ಅಂತರಾಳವು ಸಹ ನಿರೀಕ್ಷಿಸುತ್ತದೆ; ನಾನು ದೇವರ ವಾಕ್ಯದಲ್ಲಿ ನಿರೀಕ್ಷೆ ಇಟ್ಟಿದ್ದೇನೆ.

[6] ಉದಯಕ್ಕಾಗಿ ಕಾವಲುಗಾರ ಕಾದಿರುತ್ತಾರೆ. ನಾನು ಆ ಕಾವಲುಗಾರರು ಕಾದಿರುವುದಕ್ಕಿಂತ ಹೆಚ್ಚಾಗಿಯೇ ಯೆಹೋವ ದೇವರಿಗಾಗಿ ನಿರೀಕ್ಷಿಸುತ್ತಿದ್ದೇನೆ.

[7] ಇಸ್ರಾಯೇಲು ಯೆಹೋವ ದೇವರಲ್ಲಿ ನಿರೀಕ್ಷಿಸಲಿ, ಏಕೆಂದರೆ ಯೆಹೋವ ದೇವರ ಬಳಿಯಲ್ಲಿ ಒಂಡಬಡಿಕೆಯ ಪ್ರೀತಿ ಇರುತ್ತದೆ, ಸಂಪೂರ್ಣ ವಿಮೋಚನೆಯೂ ಇರುತ್ತದೆ.

[8] ದೇವರು ಇಸ್ರಾಯೇಲನ್ನು ಅವರ ಎಲ್ಲಾ ಅಕ್ರಮಗಳಿಂದ ವಿಮೋಚಿಸುವರು.

ಕೀರ್ತನೆಗಳು — Chapters