Listen to this chapter • 1:02
[1] ದೇವರು ತನ್ನ ಸಭೆಯಲ್ಲಿ ನಿಂತುಕೊಂಡವನಾಗಿ, ದೇವರುಗಳೆಂದು ಕರೆಯಲ್ಪಡುವವರೊಳಗೆ ನ್ಯಾಯವಿಧಿಸುತ್ತಾನೆ.
[2] “ನೀವು ಅನ್ಯಾಯವಾಗಿ ತೀರ್ಪುಕೊಡುವುದೂ, ದುಷ್ಟರಿಗೆ ಮುಖದಾಕ್ಷಿಣ್ಯ ತೋರಿಸುವುದೂ ಇನ್ನೆಷ್ಟರವರೆಗೆ? ಸೆಲಾ.
[3] ಕುಗ್ಗಿದವರ ಮತ್ತು ಅನಾಥರ ನ್ಯಾಯವನ್ನು ಸ್ಥಾಪಿಸಿರಿ, ದುಃಖಿತರ ಮತ್ತು ದರಿದ್ರರ ನೀತಿಯನ್ನು ಉಳಿಸಿರಿ.
[4] ಕುಗ್ಗಿದವರನ್ನು, ಬಡವರನ್ನು ದುಷ್ಟರ ಕೈಯಿಂದ ಬಿಡಿಸಿ ರಕ್ಷಿಸಿರಿ.”
[5] ಇವರು ಬುದ್ಧಿಹೀನರೂ, ವಿವೇಕಶೂನ್ಯರೂ ಆಗಿ ಅಂಧಕಾರದಲ್ಲಿ ಅಲೆಯುತ್ತಾರೆ. ಭೂಮಿಯ ಅಸ್ತಿವಾರಗಳೆಲ್ಲಾ ಕದಲುತ್ತವೆ.
[6] “ನೀವು ದೇವರುಗಳು, ಎಲ್ಲರೂ ಪರಾತ್ಪರನಾದ ದೇವರ ಮಕ್ಕಳು,
[7] ಆದರೂ ನರರಂತೆ ಸತ್ತೇ ಹೋಗುವಿರಿ, ಪ್ರತಿಯೊಬ್ಬ ಪ್ರಭುವಿನಂತೆ ನೀವೆಲ್ಲರೂ ಬಿದ್ದು ಹೋಗುವಿರಿ” ಎಂದು ನಾನು ಹೇಳಿದೆನು.
[8] ದೇವರೇ, ಏಳು; ಭೂಲೋಕದಲ್ಲಿ ನ್ಯಾಯವನ್ನು ಸ್ಥಾಪಿಸು. ನೀನು ಎಲ್ಲಾ ಜನಾಂಗಗಳ ಒಡೆಯನು ಅಲ್ಲವೋ?
ಕೀರ್ತನೆಗಳು — Chapters
10:5621:4131:1741:3852:0661:3372:3381:3192:53102:47111:10121:22131:02141:20150:52161:40172:14186:24192:22201:27211:59224:09230:56241:27252:43261:28272:23281:43291:32301:54313:42321:52332:34342:46354:07361:46374:59382:39392:12403:03411:59422:20430:59443:12452:49461:48471:20481:52492:44503:13512:48521:33531:23541:15553:07561:57572:00581:35592:47602:05611:19621:53631:40641:27652:17662:31671:08685:34694:46701:04713:15722:42733:20743:14751:35761:40772:38788:26792:01802:42812:08821:02832:16841:58851:41862:24871:00882:21896:10902:17911:55921:42930:48942:25951:26961:50971:37981:19991:271000:511011:081023:121032:421043:581054:531065:041074:481081:511093:501101:081111:221121:181130:571140:561151:551161:581170:221182:5511920:161200:491210:521221:061230:401240:551250:471260:531270:551280:511290:581301:011310:381322:131330:371340:271352:391362:421371:121381:161393:121401:511411:361421:101431:531442:081452:251461:231472:201481:481491:031500:50