Listen to this chapter • 1:10
[1] ನಾನು ಯೆಹೋವನಿಗೆ ಮೊರೆಯಿಡುವೆನು, ಯೆಹೋವನಿಗೆ ಕೂಗಿ ಬಿನ್ನೈಸುವೆನು.
[2] ನನ್ನ ಚಿಂತೆಗಳನ್ನು ಆತನ ಮುಂದೆ ಬಿಚ್ಚುವೆನು, ನನ್ನ ಕಷ್ಟವನ್ನು ಆತನಿಗೆ ಅರಿಕೆಮಾಡುವೆನು.
[3] ನನ್ನ ಆತ್ಮವು ಕುಂದಿಹೋದಾಗ, ನೀನು ನನ್ನ ಮಾರ್ಗವನ್ನು ಬಲ್ಲವನಾಗಿರುತ್ತಿ, ನಾನು ಹೋಗಬೇಕಾದ ದಾರಿಯಲ್ಲಿ ಅವರು ಉರುಲನ್ನೊಡ್ಡಿದ್ದಾರೆ.
[4] ನಾನು ನನ್ನ ಬಲಗಡೆಗೆ ನೋಡಲು, ಅಲ್ಲಿ ಸಹಾಯಕರು ಯಾರೂ ಇಲ್ಲ, ಆಶ್ರಯವೂ ನಾಶವಾಯಿತು, ನನ್ನ ಪ್ರಾಣಕ್ಕೆ ಹಿತಚಿಂತಕರು ಒಬ್ಬರೂ ಇಲ್ಲ.
[5] ಯೆಹೋವನೇ, ನಾನು ನಿನಗೆ, “ನೀನೇ ನನ್ನ ಶರಣನೂ, ಜೀವಲೋಕದಲ್ಲಿ ನನ್ನ ಪಾಲೂ ಆಗಿದ್ದಿ” ಎಂದು ಕೂಗಿ ಮೊರೆಯಿಟ್ಟಿದ್ದೇನೆ.
[6] ನನ್ನ ಕೂಗನ್ನು ಲಾಲಿಸು, ಬಲು ಕುಗ್ಗಿಹೋಗಿದ್ದೇನೆ. ಹಿಂಸಕರ ಕೈಯಿಂದ ನನ್ನನ್ನು ತಪ್ಪಿಸು, ಅವರು ನನಗಿಂತ ಬಲಿಷ್ಠರಾಗಿದ್ದಾರಲ್ಲಾ.
[7] ಸೆರೆಯಿಂದ ನನ್ನನ್ನು ಬಿಡಿಸು, ನಿನ್ನ ನಾಮವನ್ನು ಕೀರ್ತಿಸುವೆನು. ನೀತಿವಂತರು ನಿನ್ನ ಮಹೋಪಕಾರಕ್ಕಾಗಿ, ನನ್ನನ್ನು ಸುತ್ತಿಕೊಂಡು ಉತ್ಸಾಹಗೊಳ್ಳುವರು.
ಕೀರ್ತನೆಗಳು — Chapters
10:5621:4131:1741:3852:0661:3372:3381:3192:53102:47111:10121:22131:02141:20150:52161:40172:14186:24192:22201:27211:59224:09230:56241:27252:43261:28272:23281:43291:32301:54313:42321:52332:34342:46354:07361:46374:59382:39392:12403:03411:59422:20430:59443:12452:49461:48471:20481:52492:44503:13512:48521:33531:23541:15553:07561:57572:00581:35592:47602:05611:19621:53631:40641:27652:17662:31671:08685:34694:46701:04713:15722:42733:20743:14751:35761:40772:38788:26792:01802:42812:08821:02832:16841:58851:41862:24871:00882:21896:10902:17911:55921:42930:48942:25951:26961:50971:37981:19991:271000:511011:081023:121032:421043:581054:531065:041074:481081:511093:501101:081111:221121:181130:571140:561151:551161:581170:221182:5511920:161200:491210:521221:061230:401240:551250:471260:531270:551280:511290:581301:011310:381322:131330:371340:271352:391362:421371:121381:161393:121401:511411:361421:101431:531442:081452:251461:231472:201481:481491:031500:50