Skip to content
Opens in a new window
Listen to this chapter • 0:49

[1] ನನ್ನ ಇಕ್ಕಟ್ಟಿನಲ್ಲಿ ಯೆಹೋವನಿಗೆ ಮೊರೆಯಿಟ್ಟೆನು; ಆತನು ಸದುತ್ತರವನ್ನು ದಯಪಾಲಿಸಿದನು.

[2] ಯೆಹೋವನೇ, ಸುಳ್ಳು ಬಾಯಿಯೂ, ವಂಚಿಸುವ ನಾಲಿಗೆ ಉಳ್ಳವರಿಂದ ನನ್ನನ್ನು ಬಿಡಿಸು.

[3] ವಂಚಿಸುವ ನಾಲಿಗೆಯೇ, ದೇವರು ನಿನಗೇನು ಕೊಡಬೇಕು? ಯಾವ ಹೆಚ್ಚಿನ ಶಿಕ್ಷೆಯನ್ನು ಒದಗಿಸಬೇಕು?

[4] ಶೂರನ ಹದವಾದ ಬಾಣಗಳನ್ನೂ, ಜಾಲಿಯ ಕೆಂಡಗಳನ್ನೂ ನಿನಗೆ ಕೊಡುವರು.

[5] ಅಯ್ಯೋ, ನಾನು ಮೇಷೆಕಿನವರಲ್ಲಿ ತಂಗಬೇಕಲ್ಲಾ! ಕೇದಾರಿನವರ ಪಾಳೆಯಗಳಲ್ಲಿ ವಾಸಿಸಬೇಕಾಯಿತಲ್ಲಾ!

[6] ಸಮಾಧಾನವನ್ನು ದ್ವೇಷಿಸುವವರೊಳಗೆ, ಇದ್ದು ಇದ್ದು ಸಾಕಾಯಿತು.

[7] ನಾನು ಸಮಾಧಾನಪ್ರಿಯನು; ಅವರೋ, ನಾನು ಮಾತನಾಡಿದರೆ ಯುದ್ಧಕ್ಕೆ ಬರುತ್ತಾರೆ.

ಕೀರ್ತನೆಗಳು — Chapters