Skip to content
Opens in a new window
Listen to this chapter • 0:40

[1] ಪರಲೋಕದಲ್ಲಿ ಆಸೀನನಾಗಿರುವಾತನೇ, ನನ್ನ ಕಣ್ಣುಗಳನ್ನು ನಿನ್ನ ಕಡೆಗೆ ಎತ್ತಿದ್ದೇನೆ.

[2] ಯಜಮಾನನ ಕೈಯನ್ನು ದಾಸನ ಕಣ್ಣುಗಳು, ಯಜಮಾನಿಯ ಕೈಯನ್ನು ದಾಸಿಯ ಕಣ್ಣುಗಳು ನೋಡುವ ಪ್ರಕಾರವೇ, ನಮ್ಮ ಕಣ್ಣುಗಳು ನಮ್ಮ ಯೆಹೋವ ದೇವರನ್ನು ನೋಡುತ್ತಾ, ಆತನ ಕಟಾಕ್ಷವನ್ನು ನಿರೀಕ್ಷಿಸಿಕೊಂಡಿವೆ.

[3] ಯೆಹೋವನೇ, ನಮ್ಮನ್ನು ಕಟಾಕ್ಷಿಸು, ಕಟಾಕ್ಷಿಸು. ಅವಮಾನ ಹೊಂದಿ ಹೊಂದಿ ನಮಗೆ ಸಾಕಾಯಿತು;

[4] ಲೋಕಭೋಗಿಗಳ ಹಾಸ್ಯದಿಂದಲೂ, ಗರ್ವಿಷ್ಠರ ನಿಂದೆಯಿಂದಲೂ ನಮ್ಮ ಮನಸ್ಸು ಬೇಸತ್ತು ಹೋಯಿತು.

ಕೀರ್ತನೆಗಳು — Chapters