Listen to this chapter • 1:08
[1] ಯೆಹೋವನು ನನ್ನ ಒಡೆಯನಿಗೆ, “ನಾನು ನಿನ್ನ ವಿರೋಧಿಗಳನ್ನು ನಿನ್ನ ಪಾದಪೀಠವಾಗುವಂತೆ ಮಾಡುವ ತನಕ, ನನ್ನ ಬಲಗಡೆಯಲ್ಲಿ ಕುಳಿತುಕೊಂಡಿರು” ಎಂದು ನುಡಿದನು.
[2] ಯೆಹೋವನು ನಿನ್ನ ರಾಜದಂಡದ ಆಳ್ವಿಕೆಯನ್ನು ಚೀಯೋನಿನ ಹೊರಗೂ ಹಬ್ಬಿಸುವನು; ನಿನ್ನ ವೈರಿಗಳ ಮಧ್ಯದಲ್ಲಿ ದೊರೆತನ ಮಾಡು.
[3] ನೀನು ಸೈನ್ಯವನ್ನು ಕೂಡಿಸುವ ದಿನದಲ್ಲಿ, ನಿನ್ನ ಪ್ರಜೆಗಳು ಸಂತೋಷದಿಂದ ತಾವಾಗಿಯೇ ಸೇರಿಕೊಳ್ಳುವರು. ಪರಿಶುದ್ಧ ವಸ್ತ್ರಭೂಷಿತರಾದ ನಿನ್ನ ಯುವ ಸೈನಿಕರು, ಉದಯಕಾಲದ ಇಬ್ಬನಿಯಂತಿರುವರು.
[4] “ನೀನು ಸದಾಕಾಲವೂ ಮೆಲ್ಕಿಜೆದೇಕನ ತರಹ ಯಾಜಕನಾಗಿರುವೆ” ಎಂದು ಯೆಹೋವನು ಆಣೆಯಿಟ್ಟು ನುಡಿದಿದ್ದಾನೆ; ಪಶ್ಚಾತ್ತಾಪಡುವುದಿಲ್ಲ.
[5] ನಿನ್ನ ಬಲಗಡೆಯಲ್ಲಿರುವ ಕರ್ತನು ತನ್ನ ಕೋಪದ ದಿನದಲ್ಲಿ ರಾಜರನ್ನು ಖಂಡಿಸುವನು.
[6] ಆತನು ಜನಾಂಗಗಳಲ್ಲಿ ನ್ಯಾಯಸ್ಥಾಪಿಸುವಾಗ, ವಿಸ್ತಾರವಾದ ರಣರಂಗದಲ್ಲಿ ಶತ್ರುಗಳ ಶಿರಸ್ಸನ್ನು ಛೇದಿಸಿ, ಹೆಣಗಳಿಂದ ಅದನ್ನು ತುಂಬಿಸುವನು.
[7] ಒಡೆಯನು ದಾರಿಯಲ್ಲಿ ಹಳ್ಳದ ನೀರನ್ನು ಕುಡಿದು ತಲೆಯೆತ್ತುವನು.
ಕೀರ್ತನೆಗಳು — Chapters
10:5621:4131:1741:3852:0661:3372:3381:3192:53102:47111:10121:22131:02141:20150:52161:40172:14186:24192:22201:27211:59224:09230:56241:27252:43261:28272:23281:43291:32301:54313:42321:52332:34342:46354:07361:46374:59382:39392:12403:03411:59422:20430:59443:12452:49461:48471:20481:52492:44503:13512:48521:33531:23541:15553:07561:57572:00581:35592:47602:05611:19621:53631:40641:27652:17662:31671:08685:34694:46701:04713:15722:42733:20743:14751:35761:40772:38788:26792:01802:42812:08821:02832:16841:58851:41862:24871:00882:21896:10902:17911:55921:42930:48942:25951:26961:50971:37981:19991:271000:511011:081023:121032:421043:581054:531065:041074:481081:511093:501101:081111:221121:181130:571140:561151:551161:581170:221182:5511920:161200:491210:521221:061230:401240:551250:471260:531270:551280:511290:581301:011310:381322:131330:371340:271352:391362:421371:121381:161393:121401:511411:361421:101431:531442:081452:251461:231472:201481:481491:031500:50