Listen to this chapter • 1:01
[1] ಯೆಹೋವನೇ, ಪಾತಾಳದಲ್ಲಿದ್ದು ನಿನ್ನನ್ನು ಕೂಗಿಕೊಳ್ಳುತ್ತೇನೆ.
[2] ಕರ್ತನೇ, ನನ್ನ ಮೊರೆಯನ್ನು ಕೇಳು; ನನ್ನ ವಿಜ್ಞಾಪನೆಯ ಶಬ್ದಕ್ಕೆ ಕಿವಿದೆರೆ.
[3] ಕರ್ತನೇ, ಯೆಹೋವನೇ, ನೀನು ಪಾಪಗಳನ್ನು ಲೆಕ್ಕಿಸುವುದಾದರೆ ನಿನ್ನ ಮುಂದೆ ಯಾರು ನಿಲ್ಲಲು ಸಾಧ್ಯ?
[4] ನೀನು ಪಾಪವನ್ನು ಕ್ಷಮಿಸುವವನಾದುದರಿಂದ, ಮನುಷ್ಯರ ಭಯಭಕ್ತಿಗೆ ನೀನೇ ಪಾತ್ರನು.
[5] ನಾನು ಯೆಹೋವನನ್ನು ಎದುರುನೋಡುತ್ತೇನೆ; ನನ್ನ ಪ್ರಾಣವು ಆತನನ್ನು ಕಾದುಕೊಂಡಿದೆ; ಆತನ ನುಡಿಯನ್ನು ನಿರೀಕ್ಷಿಸಿಕೊಂಡಿದ್ದೇನೆ.
[6] ಕಾವಲುಗಾರರು ಬೆಳಗಾಗುವುದನ್ನು ಮುನ್ನೋಡುತ್ತಾರಲ್ಲಾ; ಕಾವಲುಗಾರರು ಬೆಳಗಾಗುವುದನ್ನು ಮುನ್ನೋಡುವುದಕ್ಕಿಂತ ವಿಶೇಷವಾಗಿ, ನನ್ನ ಅಂತರಾತ್ಮವು ಕರ್ತನನ್ನು ಮುನ್ನೋಡುತ್ತದೆ.
[7] ಇಸ್ರಾಯೇಲೇ, ಯೆಹೋವನನ್ನು ಎದುರುನೋಡುತ್ತಿರು; ಯೆಹೋವನು ಕೃಪಾಸಂಪನ್ನನು; ಪೂರ್ಣವಿಮೋಚನೆಯು ಆತನಿಂದಲೇ ದೊರಕುವುದು.
[8] ಆತನೇ ಇಸ್ರಾಯೇಲನ್ನು ಅದರ ಸಕಲ ಪಾಪಗಳಿಂದ ವಿಮೋಚಿಸುವನು.
ಕೀರ್ತನೆಗಳು — Chapters
10:5621:4131:1741:3852:0661:3372:3381:3192:53102:47111:10121:22131:02141:20150:52161:40172:14186:24192:22201:27211:59224:09230:56241:27252:43261:28272:23281:43291:32301:54313:42321:52332:34342:46354:07361:46374:59382:39392:12403:03411:59422:20430:59443:12452:49461:48471:20481:52492:44503:13512:48521:33531:23541:15553:07561:57572:00581:35592:47602:05611:19621:53631:40641:27652:17662:31671:08685:34694:46701:04713:15722:42733:20743:14751:35761:40772:38788:26792:01802:42812:08821:02832:16841:58851:41862:24871:00882:21896:10902:17911:55921:42930:48942:25951:26961:50971:37981:19991:271000:511011:081023:121032:421043:581054:531065:041074:481081:511093:501101:081111:221121:181130:571140:561151:551161:581170:221182:5511920:161200:491210:521221:061230:401240:551250:471260:531270:551280:511290:581301:011310:381322:131330:371340:271352:391362:421371:121381:161393:121401:511411:361421:101431:531442:081452:251461:231472:201481:481491:031500:50