Listen to this chapter • 0:50
[1] ಶೂಹ್ಯನಾದ ಬಿಲ್ದದನು ಉತ್ತರಕೊಟ್ಟು ಹೇಳಿದ್ದೇನೆಂದರೆ:
[2] “ಅಧಿಕಾರ ಮತ್ತು ವಿಸ್ಮಯ ದೇವರಿಗೆ ಸೇರಿದೆ; ಉನ್ನತಲೋಕದಲ್ಲಿ ಸಮಾಧಾನವನ್ನು ಸ್ಥಾಪಿಸಿದವರು ದೇವರೇ.
[3] ದೇವರ ಸೈನ್ಯಗಳಿಗೆ ಲೆಕ್ಕ ಉಂಟೋ? ಯಾರ ಮೇಲೆ ದೇವರ ಬೆಳಕು ಮೂಡುವುದಿಲ್ಲ?
[4] ಮನುಷ್ಯನು ದೇವರ ಮುಂದೆ ನೀತಿವಂತನಾಗುವುದು ಹೇಗೆ? ಸ್ತ್ರೀಯಿಂದ ಹುಟ್ಟಿದವನು ಪರಿಶುದ್ಧನಾಗಿರುವುದು ಹೇಗೆ?
[5] ಇಗೋ, ಚಂದ್ರನೂ ಪ್ರಕಾಶಮಾನವಾಗಿರುವದಿಲ್ಲ; ನಕ್ಷತ್ರಗಳಾದರೂ ದೇವರ ದೃಷ್ಟಿಗೆ ಶುದ್ಧವಾದವುಗಳಲ್ಲ.
[6] ಹೀಗಿರುವಲ್ಲಿ ಹುಳುವಿನಂಥ ಮನುಷ್ಯನು ದೇವರ ದೃಷ್ಟಿಯಲ್ಲಿ ಎಷ್ಟೋ ಕಡಿಮೆ! ಕ್ರಿಮಿಯಂಥ ಮನವರು ಎಷ್ಟೋ ಅಲ್ಪರು!”