[1] ಮೋಶೆಯು ದೇವದರ್ಶನ ಗುಡಾರವನ್ನು ನಿಲ್ಲಿಸಿ, ಅಭಿಷೇಕಿಸಿ ಪರಿಶುದ್ಧ ಮಾಡಿದ ದಿನದಲ್ಲಿ ಅದರ ಎಲ್ಲಾ ಸಲಕರಣೆಗಳನ್ನೂ, ಬಲಿಪೀಠವನ್ನೂ, ಅದರ ಎಲ್ಲಾ ಸಾಮಗ್ರಿಗಳನ್ನೂ ಅಭಿಷೇಕಿಸಿ ಪರಿಶುದ್ಧ ಮಾಡಿದನು. ಅನಂತರ,
[2] ಇಸ್ರಾಯೇಲರ ಪ್ರಧಾನರು ಎಂದರೆ ಗೋತ್ರದ ಪ್ರಮುಖರು, ಕುಲಾಧಿಪತಿಗಳು ಜನಗಣತಿಯ ನೇತೃತ್ವವನ್ನು ವಹಿಸಿಕೊಂಡಿದ್ದವರು ಕಾಣಿಕೆಗಳನ್ನು ತಂದು ಸಮರ್ಪಿಸಿದರು.
[3] ಅವರು ಯೆಹೋವ ದೇವರ ಎದುರಿನಲ್ಲಿ ತಂದ ಅರ್ಪಣೆ ಏನೆಂದರೆ ಆರು ಕಮಾನುಬಂಡಿಗಳು, ಹನ್ನೆರಡು ಎತ್ತುಗಳು, ಪ್ರಧಾನರಲ್ಲಿ ಇಬ್ಬರಿಗೆ ಒಂದು ಬಂಡಿಯಂತೆ, ಒಬ್ಬೊಬ್ಬನಿಗೆ ಒಂದೊಂದು ಎತ್ತುಗಳನ್ನು ಅವರು ದೇವದರ್ಶನ ಗುಡಾರದ ಮುಂದೆ ತಂದರು.
[4] ಯೆಹೋವ ದೇವರು ಮಾತನಾಡಿ ಮೋಶೆಗೆ ಹೇಳಿದ್ದೇನೆಂದರೆ,
[5] “ಅವುಗಳನ್ನು ಅವರಿಂದ ತೆಗೆದುಕೋ, ಅವು ದೇವದರ್ಶನ ಗುಡಾರದ ಸೇವೆಮಾಡುವುದಕ್ಕೋಸ್ಕರ ಇರಬೇಕು. ಅವುಗಳನ್ನು ಲೇವಿಯರಿಗೆ ಅವನವನ ಕೆಲಸಕ್ಕೆ ತಕ್ಕಂತೆ ಕೊಡಬೇಕು,” ಎಂದರು.
[6] ಆಗ ಮೋಶೆಯು ಆ ಬಂಡಿಗಳನ್ನೂ, ಎತ್ತುಗಳನ್ನೂ ತೆಗೆದುಕೊಂಡು ಅವುಗಳನ್ನು ಲೇವಿಯರಿಗೆ ಕೊಟ್ಟನು.
[7] ಎರಡು ಬಂಡಿಗಳನ್ನೂ, ನಾಲ್ಕು ಎತ್ತುಗಳನ್ನೂ, ಗೇರ್ಷೋನನ ಪುತ್ರರಿಗೆ ಅವರ ಕೆಲಸಕ್ಕೆ ತಕ್ಕ ಪ್ರಕಾರ ಕೊಟ್ಟನು.
[8] ಯಾಜಕನಾದ ಆರೋನನ ಮಗ ಈತಾಮಾರನ ಕೈಕೆಳಗಿರುವ ನಾಲ್ಕು ಬಂಡಿಗಳನ್ನೂ, ಎಂಟು ಎತ್ತುಗಳನ್ನೂ ಮೆರಾರೀಯ ಪುತ್ರರಿಗೆ ಅವರ ಕೆಲಸಕ್ಕೆ ತಕ್ಕಂತೆ ಕೊಟ್ಟನು.
[9] ಆದರೆ ಕೊಹಾತ್ಯರಿಗೆ ಯಾವುದನ್ನೂ ಕೊಡಲಿಲ್ಲ. ಏಕೆಂದರೆ ಅವರು ತಮ್ಮ ಹೆಗಲುಗಳ ಮೇಲೆ ಪರಿಶುದ್ಧಸ್ಥಳದ ವಸ್ತುಗಳನ್ನು ಹೊತ್ತುಕೊಂಡು ಹೋಗುವುದೇ ಅವರಿಗೆ ಸೇವೆಯಾಗಿತ್ತು.
[10] ಬಲಿಪೀಠವನ್ನು ಅಭಿಷೇಕಿಸಿದ ದಿನದಂದು ಪ್ರತಿಷ್ಠೆಗಾಗಿ ಅದರ ಮುಂದೆ ಬಂದು, ಪ್ರಧಾನರು ತಮ್ಮ ಕಾಣಿಕೆಗಳನ್ನು ಅರ್ಪಿಸಿದರು.
[11] ಯೆಹೋವ ದೇವರು ಮೋಶೆಗೆ ಹೇಳಿದ್ದೇನೆಂದರೆ, “ಒಬ್ಬೊಬ್ಬ ಪ್ರಧಾನನು ತನ್ನ ತನ್ನ ದಿವಸದಲ್ಲಿ ಬಲಿಪೀಠದ ಪ್ರತಿಷ್ಠೆಗಾಗಿ ತಮ್ಮ ಕಾಣಿಕೆಯನ್ನು ಅರ್ಪಿಸಬೇಕು.”
[12] ಮೊದಲನೆಯ ದಿವಸದಲ್ಲಿ ತನ್ನ ಕಾಣಿಕೆಯನ್ನು ಅರ್ಪಿಸಿದವನು ಯೆಹೂದ ಗೋತ್ರದ ಅಮ್ಮೀನಾದಾಬನ ಮಗ ನಹಶೋನನು.
[13] ಅವನ ಅರ್ಪಣೆ ಏನೆಂದರೆ: ಪರಿಶುದ್ಧಸ್ಥಳದ ಸಮರ್ಪಣೆ ಮಾಡಬೇಕಾದ ತೂಕ ನೇಮಕವಾದ ಪ್ರಕಾರ, 130 ಶೆಕೆಲ್ ತೂಕದ ಚೊಕ್ಕ ಬೆಳ್ಳಿಯ ಒಂದು ತಟ್ಟೆ ಮತ್ತು 70 ಶೆಕೆಲ್ ತೂಕದ ಬೆಳ್ಳಿಯ ಬಟ್ಟಲು, ಧಾನ್ಯ ಸಮರ್ಪಣೆಗಾಗಿ ಇವೆರಡು ಎಣ್ಣೆ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು.
[14] ಧೂಪದಿಂದ ತುಂಬಿದ್ದ 10 ಶೆಕೆಲ್ ತೂಕದ ಬಂಗಾರದ ಒಂದು ಚಮಚ,
[15] ದಹನಬಲಿಗಾಗಿ ಒಂದು ಎಳೆಯ ಹೋರಿ, ಒಂದು ಟಗರು, ಒಂದು ವರ್ಷದ ಒಂದು ಕುರಿಮರಿ,
[16] ದೋಷಪರಿಹಾರಕ ಬಲಿಗಾಗಿ ಒಂದು ಹೋತ,
[17] ಎರಡು ಎತ್ತುಗಳೂ, ಐದು ಟಗರುಗಳೂ, ಐದು ಹೋತಗಳೂ, ಒಂದು ವರುಷದ ಐದು ಕುರಿಮರಿಗಳೂ ಸಮಾಧಾನದ ಬಲಿಗಾಗಿ ಸಮರ್ಪಿಸಬೇಕು. ಇದು ಅಮ್ಮೀನಾದಾಬನ ಮಗ ನಹಶೋನನ ಅರ್ಪಣೆಯು.
[18] ಎರಡನೆಯ ದಿವಸದಲ್ಲಿ ಇಸ್ಸಾಕಾರನ ಗೋತ್ರದ ಪ್ರಧಾನನಾಗಿರುವ ಚೂವಾರನ ಮಗ ನೆತನೆಯೇಲ್ ಅರ್ಪಿಸಿದನು.
[19] ಅವನ ಅರ್ಪಣೆ ಏನೆಂದರೆ: ಪರಿಶುದ್ಧಸ್ಥಳದ ಸಮರ್ಪಣೆ ಮಾಡಬೇಕಾದ ತೂಕ ನೇಮಕವಾದ ಪ್ರಕಾರ, 130 ಶೆಕೆಲ್ ತೂಕದ ಒಂದು ಬೆಳಿಯ್ಳ ತಟ್ಟೆ, 70 ಶೆಕೆಲ್ ತೂಕದ ಬೆಳ್ಳಿಯ ಒಂದು ಬಟ್ಟಲು, ಧಾನ್ಯ ಸಮರ್ಪಣೆಗಾಗಿ ಈ ಎರಡೂ ಎಣ್ಣೆ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು.
[20] ಧೂಪದಿಂದ ತುಂಬಿದ್ದ ಹತ್ತು ಶೆಕೆಲ್ ತೂಕದ ಬಂಗಾರದ ಒಂದು ಚಮಚ,
[21] ದಹನಬಲಿಗಾಗಿ ಒಂದು ಎಳೆಯ ಹೋರಿ, ಒಂದು ಟಗರು, ಒಂದು ವರ್ಷದ ಕುರಿಮರಿ,
[22] ಪಾಪ ಪರಿಹಾರದ ಬಲಿಗಾಗಿ ಒಂದು ಹೋತ,
[23] ಸಮಾಧಾನದ ಬಲಿಗಳ ಬಲಿಗಾಗಿ ಎರಡು ಎತ್ತುಗಳೂ, ಐದು ಟಗರುಗಳೂ, ಐದು ಹೋತಗಳೂ, ಒಂದು ವರ್ಷದ ಐದು ಕುರಿಮರಿಗಳು. ಇದು ಚೂವಾರನ ಮಗ ನೆತನೆಯೇಲ್ ಇವನ ಅರ್ಪಣೆಯು.
[24] ಮೂರನೆಯ ದಿವಸದಲ್ಲಿ ಜೆಬುಲೂನ್ ಮಕ್ಕಳಿಗೆ ಪ್ರಧಾನನಾಗಿರುವ ಹೇಲೋನನ ಮಗ ಎಲೀಯಾಬನು ಅರ್ಪಿಸಿದ್ದು.
[25] ಅವನ ಅರ್ಪಣೆ ಏನೆಂದರೆ: ದೇವರ ಸೇವೆಗೆ ನೇಮಕವಾದ ಪ್ರಕಾರ, 130 ಶೆಕೆಲ್ ತೂಕದ ಬೆಳ್ಳಿಯ ಒಂದು ತಟ್ಟೆ, 70 ಶೆಕೆಲ್ ತೂಕದ ಬೆಳ್ಳಿಯ ಒಂದು ಬಟ್ಟಲು, ಧಾನ್ಯ ಸಮರ್ಪಣೆಗಾಗಿ ಈ ಎರಡೂ ಎಣ್ಣೆ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು.
[26] ಧೂಪದಿಂದ ತುಂಬಿದ್ದ 10 ಶೆಕೆಲ್ ತೂಕದ ಬಂಗಾರದ ಒಂದು ಚಮಚ,
[27] ದಹನಬಲಿಗಾಗಿ ಒಂದು ಎಳೆಯ ಹೋರಿ, ಒಂದು ಟಗರು, ಒಂದು ವರ್ಷದ ಕುರಿಮರಿ,
[28] ದೋಷಪರಿಹಾರಕ ಬಲಿಗಾಗಿ ಒಂದು ಹೋತವನ್ನೂ,
[29] ಮತ್ತು ಸಮಾಧಾನದ ಬಲಿಗಾಗಿ ಎರಡು ಎತ್ತುಗಳೂ, ಐದು ಟಗರುಗಳೂ, ಐದು ಹೋತಗಳೂ, ಒಂದು ವರ್ಷದ ಐದು ಕುರಿಮರಿಗಳು. ಇದು ಹೇಲೋನನ ಮಗ ಎಲೀಯಾಬನ ಸಮರ್ಪಣೆಯು.
[30] ನಾಲ್ಕನೆಯ ದಿನದಲ್ಲಿ ರೂಬೇನನ ಮಕ್ಕಳಿಗೆ ಪ್ರಧಾನನಾಗಿರುವ ಶೆದೇಯೂರನ ಮಗ ಎಲೀಚೂರನು ಅರ್ಪಿಸಿದನು.
[31] ಅವನ ಅರ್ಪಣೆಯು ಏನೆಂದರೆ: ಪರಿಶುದ್ಧಸ್ಥಳದ ಸಮರ್ಪಣೆ ಮಾಡಬೇಕಾದ ತೂಕ ನೇಮಕವಾದ ಪ್ರಕಾರ, 130 ಶೆಕೆಲ್ ತೂಕದ ಒಂದು ಬೆಳ್ಳಿಯ ತಟ್ಟೆ, 70 ಶೆಕೆಲ್ ತೂಕದ ಬೆಳ್ಳಿಯ ಒಂದು ಬಟ್ಟಲು, ಧಾನ್ಯ ಸಮರ್ಪಣೆಗಾಗಿ ಈ ಎರಡೂ ಎಣ್ಣೆ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು.
[32] ಧೂಪದಿಂದ ತುಂಬಿದ್ದ ಹತ್ತು ಶೆಕೆಲ್ ತೂಕದ ಬಂಗಾರದ ಒಂದು ಚಮಚ,
[33] ದಹನಬಲಿಗಾಗಿ ಒಂದು ಎಳೆಯ ಹೋರಿ, ಒಂದು ಟಗರು, ಒಂದು ವರ್ಷದ ಕುರಿಮರಿ,
[34] ಪಾಪ ಪರಿಹಾರದ ಬಲಿಗಾಗಿ ಒಂದು ಹೋತವನ್ನೂ,
[35] ಸಮಾಧಾನದ ಬಲಿಗಾಗಿ ಎರಡು ಹೋರಿಗಳೂ, ಐದು ಟಗರುಗಳೂ, ಐದು ಹೋತಗಳೂ, ಒಂದು ವರ್ಷದ ಐದು ಕುರಿಮರಿಗಳು. ಇದು ಶೆದೇಯೂರನ ಮಗ ಎಲೀಚೂರನ ಅರ್ಪಣೆಯು.
[36] ಐದನೆಯ ದಿನದಲ್ಲಿ ಸಿಮೆಯೋನನ ಗೋತ್ರದ ಪ್ರಧಾನನಾಗಿರುವ ಚುರೀಷದ್ದೈಯನ ಮಗ ಶೆಲುಮೀಯೇಲನು ಅರ್ಪಿಸಿದನು.
[37] ಅವನ ಅರ್ಪಣೆಯು ಏನೆಂದರೆ: ಪರಿಶುದ್ಧಸ್ಥಳದ ಸಮರ್ಪಣೆ ಮಾಡಬೇಕಾದ ತೂಕ ನೇಮಕವಾದ ಪ್ರಕಾರ, 130 ಶೆಕೆಲ್ ತೂಕದ ಒಂದು ಬೆಳಿಯ್ಳ ತಟ್ಟೆ, 70 ಶೆಕೆಲ್ ತೂಕದ ಬೆಳ್ಳಿಯ ಒಂದು ಬಟ್ಟಲು, ಧಾನ್ಯ ಸಮರ್ಪಣೆಗಾಗಿ ಈ ಎರಡೂ ಎಣ್ಣೆ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು.
[38] ಧೂಪದಿಂದ ತುಂಬಿದ್ದ ಹತ್ತು ಶೆಕೆಲ್ ತೂಕದ ಬಂಗಾರದ ಒಂದು ಚಮಚ,
[39] ದಹನಬಲಿಗಾಗಿ ಒಂದು ಎಳೆಯ ಹೋರಿ, ಒಂದು ಟಗರು, ಒಂದು ವರ್ಷದ ಕುರಿಮರಿ,
[40] ಪಾಪ ಪರಿಹಾರದ ಬಲಿಗಾಗಿ ಒಂದು ಹೋತವನ್ನೂ,
[41] ಸಮಾಧಾನದ ಬಲಿಗಾಗಿ ಎರಡು ಹೋರಿಗಳೂ, ಐದು ಟಗರುಗಳೂ, ಐದು ಹೋತಗಳೂ, ಒಂದು ವರ್ಷದ ಐದು ಕುರಿಮರಿಗಳು. ಇದು ಚುರೀಷದ್ದೈಯನ ಮಗ ಶೆಲುಮೀಯೇಲನ ಅರ್ಪಣೆಯು.
[42] ಆರನೆಯ ದಿನದಲ್ಲಿ ಗಾದನ ಗೋತ್ರದ ಪ್ರಧಾನನಾಗಿರುವ ದೆವುಯೇಲನ ಮಗ ಎಲ್ಯಾಸಾಫನು ಅರ್ಪಿಸಿದನು.
[43] ಅವನ ಅರ್ಪಣೆಯು ಏನೆಂದರೆ: ಪರಿಶುದ್ಧಸ್ಥಳದ ಸಮರ್ಪಣೆ ಮಾಡಬೇಕಾದ ತೂಕ ನೇಮಕವಾದ ಪ್ರಕಾರ, 130 ಶೆಕೆಲ್ ತೂಕದ ಬೆಳ್ಳಿಯ ತಟ್ಟೆ, 70 ಶೆಕೆಲ್ ತೂಕದ ಬೆಳ್ಳಿಯ ಒಂದು ಬಟ್ಟಲು, ಧಾನ್ಯ ಸಮರ್ಪಣೆಗಾಗಿ ಈ ಎರಡೂ ಎಣ್ಣೆ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು.
[44] ಧೂಪದಿಂದ ತುಂಬಿದ್ದ ಹತ್ತು ಶೆಕೆಲ್ ತೂಕದ ಬಂಗಾರದ ಒಂದು ಚಮಚ,
[45] ದಹನಬಲಿಗಾಗಿ ಒಂದು ಎಳೆಯ ಹೋರಿ, ಒಂದು ಟಗರು, ಒಂದು ವರ್ಷದ ಕುರಿಮರಿ,
[46] ದೋಷಪರಿಹಾರಕ ಬಲಿಗಾಗಿ ಒಂದು ಹೋತವನ್ನೂ,
[47] ಸಮಾಧಾನದ ಬಲಿಗಾಗಿ ಎರಡು ಎತ್ತುಗಳೂ, ಐದು ಟಗರುಗಳೂ, ಐದು ಹೋತಗಳೂ, ಒಂದು ವರುಷದ ಐದು ಕುರಿಮರಿಗಳು. ಇದು ದೆವುಯೇಲನ ಮಗ ಎಲ್ಯಾಸಾಫನ ಅರ್ಪಣೆಯು.
[48] ಏಳನೆಯ ದಿನದಲ್ಲಿ ಎಫ್ರಾಯೀಮ್ ಗೋತ್ರದ ಪ್ರಧಾನನಾದ ಅಮ್ಮೀಹೂದನ ಮಗ ಎಲೀಷಾಮನು ಅರ್ಪಿಸಿದನು.
[49] ಅವನ ಅರ್ಪಣೆ ಏನೆಂದರೆ: ಪರಿಶುದ್ಧಸ್ಥಳದ ಸಮರ್ಪಣೆ ಮಾಡಬೇಕಾದ ತೂಕ ನೇಮಕವಾದ ಪ್ರಕಾರ, 130 ಶೆಕೆಲ್ ತೂಕದ ಬೆಳ್ಳಿಯ ತಟ್ಟೆ, ಪರಿಶುದ್ಧಸ್ಥಳದ ಪ್ರಕಾರ 70 ಶೆಕೆಲ್ ತೂಕದ ಬೆಳ್ಳಿಯ ಒಂದು ಬಟ್ಟಲು, ಧಾನ್ಯ ಸಮರ್ಪಣೆಗಾಗಿ ಈ ಎರಡೂ ಎಣ್ಣೆ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು.
[50] ಧೂಪದಿಂದ ತುಂಬಿದ್ದ 10 ಶೆಕೆಲ್ ತೂಕದ ಬಂಗಾರದ ಒಂದು ಚಮಚ,
[51] ದಹನಬಲಿಗಾಗಿ ಒಂದು ಎಳೆಯ ಹೋರಿ, ಒಂದು ಟಗರು, ಒಂದು ವರ್ಷದ ಒಂದು ಕುರಿಮರಿ,
[52] ದೋಷಪರಿಹಾರಕ ಬಲಿಗಾಗಿ ಒಂದು ಹೋತವನ್ನೂ,
[53] ಸಮಾಧಾನದ ಬಲಿಗಾಗಿ ಎರಡು ಎತ್ತುಗಳೂ, ಐದು ಟಗರುಗಳೂ, ಐದು ಹೋತಗಳೂ, ಒಂದು ವರ್ಷದ ಐದು ಕುರಿಮರಿಗಳು. ಇದು ಅಮ್ಮೀಹೂದನ ಮಗ ಎಲೀಷಾಮನ ಅರ್ಪಣೆಯು.
[54] ಎಂಟನೆಯ ದಿನದಲ್ಲಿ ಮನಸ್ಸೆ ಗೋತ್ರದ ಪ್ರಧಾನನಾದ ಪೆದಾಚೂರನ ಮಗ ಗಮಲಿಯೇಲನು ಅರ್ಪಿಸಿದನು.
[55] ಅವನ ಅರ್ಪಣೆಯು ಏನೆಂದರೆ: ಪರಿಶುದ್ಧಸ್ಥಳದ ಸಮರ್ಪಣೆ ಮಾಡಬೇಕಾದ ತೂಕ ನೇಮಕವಾದ ಪ್ರಕಾರ, 130 ಶೆಕೆಲ್ ತೂಕದ ಬೆಳ್ಳಿಯ ಒಂದು ತಟ್ಟೆ, 70 ಶೆಕೆಲ್ ತೂಕದ ಬೆಳ್ಳಿಯ ಒಂದು ಬಟ್ಟಲು, ಧಾನ್ಯ ಸಮರ್ಪಣೆಗಾಗಿ ಈ ಎರಡೂ ಎಣ್ಣೆ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು.
[56] ಧೂಪದಿಂದ ತುಂಬಿದ್ದ 10 ಶೆಕೆಲ್ ತೂಕದ ಬಂಗಾರದ ಒಂದು ಚಮಚ,
[57] ದಹನಬಲಿಗಾಗಿ ಒಂದು ಎಳೆಯ ಹೋರಿ, ಒಂದು ಟಗರು, ಒಂದು ವರ್ಷದ ಒಂದು ಕುರಿಮರಿ,
[58] ದೋಷಪರಿಹಾರಕ ಬಲಿಗಾಗಿ ಒಂದು ಹೋತವನ್ನೂ,
[59] ಸಮಾಧಾನದ ಬಲಿಗಾಗಿ ಎರಡು ಎತ್ತುಗಳೂ, ಐದು ಟಗರುಗಳೂ, ಐದು ಹೋತಗಳೂ, ಒಂದು ವರುಷದ ಐದು ಕುರಿಮರಿಗಳು. ಇದು ಪೆದಾಚೂರನ ಮಗ ಗಮಲಿಯೇಲನ ಅರ್ಪಣೆಯು.
[60] ಒಂಬತ್ತನೆಯ ದಿನದಲ್ಲಿ ಬೆನ್ಯಾಮೀನನ ಗೋತ್ರದ ಪ್ರಧಾನನಾದ ಗಿದ್ಯೋನಿಯ ಮಗ ಅಬೀದಾನನು ಅರ್ಪಿಸಿದನು.
[61] ಅವನ ಅರ್ಪಣೆಯು ಏನೆಂದರೆ: ಪರಿಶುದ್ಧಸ್ಥಳದ ಸಮರ್ಪಣೆ ಮಾಡಬೇಕಾದ ತೂಕ ನೇಮಕವಾದ ಪ್ರಕಾರ, 130 ಶೆಕೆಲ್ ತೂಕದ ಬೆಳ್ಳಿಯ ತಟ್ಟೆ, 70 ಶೆಕೆಲ್ ತೂಕದ ಬೆಳ್ಳಿಯ ಒಂದು ಬಟ್ಟಲು, ಧಾನ್ಯ ಸಮರ್ಪಣೆಗಾಗಿ ಈ ಎರಡೂ ಎಣ್ಣೆ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು.
[62] ಧೂಪದಿಂದ ತುಂಬಿದ್ದ 10 ಶೆಕೆಲ್ ತೂಕದ ಬಂಗಾರದ ಒಂದು ಚಮಚ,
[63] ದಹನಬಲಿಗಾಗಿ ಒಂದು ಎಳೆಯ ಹೋರಿ, ಒಂದು ಟಗರು, ಒಂದು ವರ್ಷದ ಒಂದು ಕುರಿಮರಿ,
[64] ದೋಷಪರಿಹಾರಕ ಬಲಿಗಾಗಿ ಒಂದು ಹೋತವನ್ನೂ,
[65] ಸಮಾಧಾನದ ಬಲಿಗಾಗಿ ಎರಡು ಎತ್ತುಗಳೂ, ಐದು ಟಗರುಗಳೂ, ಐದು ಹೋತಗಳೂ, ಒಂದು ವರುಷದ ಐದು ಕುರಿಮರಿಗಳು. ಇದು ಗಿದ್ಯೋನಿಯ ಮಗ ಅಬೀದಾನನ ಅರ್ಪಣೆಯು.
[66] ಹತ್ತನೆಯ ದಿನದಲ್ಲಿ ದಾನನ ಗೋತ್ರದ ಪ್ರಧಾನವಾದ ಅಮ್ಮೀಷದ್ದೈಯನ ಮಗ ಅಹೀಗೆಜೆರನು ಅರ್ಪಿಸಿದನು.
[67] ಅವನ ಅರ್ಪಣೆಯು ಏನೆಂದರೆ: ಪರಿಶುದ್ಧಸ್ಥಳದ ಸಮರ್ಪಣೆ ಮಾಡಬೇಕಾದ ತೂಕ ನೇಮಕವಾದ ಪ್ರಕಾರ, 130 ಶೆಕೆಲ್ ತೂಕದ ಬೆಳ್ಳಿಯ ತಟ್ಟೆ, 70 ಶೆಕೆಲ್ ತೂಕದ ಬೆಳ್ಳಿಯ ಒಂದು ಬಟ್ಟಲು, ಧಾನ್ಯ ಸಮರ್ಪಣೆಗಾಗಿ ಈ ಎರಡೂ ಎಣ್ಣೆ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು.
[68] ಧೂಪದಿಂದ ತುಂಬಿದ್ದ 10 ಶೆಕೆಲ್ ತೂಕದ ಬಂಗಾರದ ಒಂದು ಚಮಚ,
[69] ದಹನಬಲಿಗಾಗಿ ಒಂದು ಎಳೆಯ ಹೋರಿ, ಒಂದು ಟಗರು, ಒಂದು ವರ್ಷದ ಕುರಿಮರಿ,
[70] ದೋಷಪರಿಹಾರಕ ಬಲಿಗಾಗಿ ಒಂದು ಹೋತವನ್ನೂ,
[71] ಸಮಾಧಾನದ ಬಲಿಗಾಗಿ ಎರಡು ಎತ್ತುಗಳೂ, ಐದು ಟಗರುಗಳೂ, ಐದು ಹೋತಗಳೂ, ಒಂದು ವರುಷದ ಐದು ಕುರಿಮರಿಗಳು. ಇದು ಅಮ್ಮೀಷದ್ದೈಯನ ಮಗ ಅಹೀಗೆಜೆರನ ಅರ್ಪಣೆಯು.
[72] ಹನ್ನೊಂದನೆಯ ದಿನದಲ್ಲಿ ಆಶೇರನ ಗೋತ್ರದ ಪ್ರಧಾನನಾದ ಒಕ್ರಾನನ ಮಗ ಪಗೀಯೇಲನು ಅರ್ಪಿಸಿದನು.
[73] ಅವನ ಅರ್ಪಣೆಯು ಏನೆಂದರೆ: ಪರಿಶುದ್ಧಸ್ಥಳದ ಸಮರ್ಪಣೆ ಮಾಡಬೇಕಾದ ತೂಕ ನೇಮಕವಾದ ಪ್ರಕಾರ, 130 ಶೆಕೆಲ್ ತೂಕದ ಬೆಳ್ಳಿಯ ತಟ್ಟೆ, ಪರಿಶುದ್ಧಸ್ಥಳದ ಪ್ರಕಾರ 70 ಶೆಕೆಲ್ ತೂಕದ ಬೆಳ್ಳಿಯ ಒಂದು ಬಟ್ಟಲು, ಧಾನ್ಯ ಸಮರ್ಪಣೆಗಾಗಿ ಈ ಎರಡೂ ಎಣ್ಣೆ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು.
[74] ಧೂಪದಿಂದ ತುಂಬಿದ್ದ 10 ಶೆಕೆಲ್ ತೂಕದ ಬಂಗಾರದ ಒಂದು ಚಮಚ,
[75] ದಹನಬಲಿಗಾಗಿ ಒಂದು ಎಳೆಯ ಹೋರಿ, ಒಂದು ಟಗರು, ಒಂದು ವರ್ಷದ ಕುರಿಮರಿ,
[76] ದೋಷಪರಿಹಾರಕ ಬಲಿಗಾಗಿ ಒಂದು ಹೋತ,
[77] ಸಮಾಧಾನದ ಬಲಿಗಾಗಿ ಒಂದು ಎರಡು ಎತ್ತುಗಳೂ, ಐದು ಟಗರುಗಳೂ, ಐದು ಹೋತಗಳೂ, ಒಂದು ವರ್ಷದ ಐದು ಕುರಿಮರಿಗಳು. ಇದು ಒಕ್ರಾನನ ಮಗ ಪಗೀಯೇಲನ ಅರ್ಪಣೆಯು.
[78] ಹನ್ನೆರಡನೆಯ ದಿನದಲ್ಲಿ ನಫ್ತಾಲಿಯ ಗೋತ್ರದ ಪ್ರಧಾನನಾದ ಏನಾನನ ಮಗ ಅಹೀರನು ಅರ್ಪಿಸಿದನು.
[79] ಅವನ ಅರ್ಪಣೆಯು ಏನೆಂದರೆ: ಪರಿಶುದ್ಧಸ್ಥಳದ ಸಮರ್ಪಣೆ ಮಾಡಬೇಕಾದ ತೂಕ ನೇಮಕವಾದ ಪ್ರಕಾರ, 130 ಶೆಕೆಲ್ ತೂಕದ ಬೆಳ್ಳಿಯ ತಟ್ಟೆ, 70 ಶೆಕೆಲ್ ತೂಕದ ಬೆಳ್ಳಿಯ ಒಂದು ಬಟ್ಟಲು, ಧಾನ್ಯ ಸಮರ್ಪಣೆಗಾಗಿ ಈ ಎರಡೂ ಎಣ್ಣೆ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು,
[80] ಧೂಪದಿಂದ ತುಂಬಿದ್ದ 10 ಶೆಕೆಲ್ ತೂಕದ ಬಂಗಾರದ ಒಂದು ಚಮಚ,
[81] ದಹನಬಲಿಗಾಗಿ ಒಂದು ಎಳೆಯ ಹೋರಿ, ಒಂದು ಟಗರು, ಒಂದು ವರ್ಷದ ಕುರಿಮರಿ,
[82] ದೋಷಪರಿಹಾರಕ ಬಲಿಗಾಗಿ ಒಂದು ಹೋತವನ್ನೂ,
[83] ಸಮಾಧಾನದ ಸಮರ್ಪಣೆಯ ಎರಡು ಎತ್ತುಗಳೂ, ಐದು ಟಗರುಗಳೂ, ಐದು ಹೋತಗಳೂ, ಒಂದು ವರ್ಷದ ಐದು ಕುರಿಮರಿಗಳು. ಇದು ಏನಾನನ ಮಗ ಅಹೀರನ ಅರ್ಪಣೆಯು.
[84] ಇದು ಬಲಿಪೀಠದ ಪ್ರತಿಷ್ಠೆಗಾಗಿ ಅದನ್ನು ಅಭಿಷೇಕ ಮಾಡಿದ ದಿನದಲ್ಲಿ ಇಸ್ರಾಯೇಲಿನ ಪ್ರಧಾನರು ಅರ್ಪಿಸಿದ್ದು: ಬೆಳ್ಳಿಯ 12 ತಟ್ಟೆಗಳೂ, ಬೆಳ್ಳಿಯ 12 ಬಟ್ಟಲುಗಳೂ, ಬಂಗಾರದ 12 ಚಮಚಗಳೂ,
[85] ಬೆಳ್ಳಿಯ ಒಂದೊಂದು ತಟ್ಟೆಗಳ ತೂಕವು 130 ಶೆಕೆಲ್, ಒಂದೊಂದು ಬಟ್ಟಲಿನ ತೂಕವು 70 ಶೆಕೆಲ್. ಬೆಳ್ಳಿಯ ಎಲ್ಲಾ ಸಾಮಗ್ರಿಗಳ ತೂಕ ಪರಿಶುದ್ಧಸ್ಥಳದ ನೇಮದ ಪ್ರಕಾರ 2,400 ಶೆಕೆಲ್.
[86] ಧೂಪ ತುಂಬಿದ್ದ 12 ಬಂಗಾರದ ಚಮಚಗಳು, ಪರಿಶುದ್ಧಸ್ಥಳದ ಪ್ರಕಾರ ಒಂದೊಂದಕ್ಕೆ 10 ಚಮಚಗಳ ಬಂಗಾರವೆಲ್ಲಾ 120 ಶೆಕೆಲ್,
[87] ದಹನಬಲಿಗಾಗಿ ಇರುವ ಒಟ್ಟು ಪಶುಗಳು: 12 ಹೋರಿಗಳು, 12 ಟಗರುಗಳು, ಒಂದು ವರ್ಷದ ಕುರಿಮರಿಗಳು 12, ಅವುಗಳೊಂದಿಗೆ ಧಾನ್ಯ ಸಮರ್ಪಣೆ. ದೋಷಪರಿಹಾರಕ ಬಲಿಗಾಗಿ 12 ಹೋತಗಳು,
[88] ಸಮಾಧಾನದ ಬಲಿಗಾಗಿರುವ ಒಟ್ಟು ಪಶುಗಳು: 24 ಹೋರಿಗಳು, 60 ಟಗರುಗಳು, 60 ಹೋತಗಳು, ಒಂದು ವರ್ಷದ ಗಂಡು ಕುರಿಮರಿಗಳು 60. ಅದನ್ನು ಅಭಿಷೇಕಿಸಿದ ತರುವಾಯ ಬಲಿಪೀಠಕ್ಕೆ ಮಾಡಿದ ಪ್ರತಿಷ್ಠೆ ಇದಾಗಿತ್ತು.
[89] ಮೋಶೆಯು ಯೆಹೋವ ದೇವರ ಸಂಗಡ ಮಾತನಾಡುವುದಕ್ಕೆ ದೇವದರ್ಶನದ ಗುಡಾರದೊಳಗೆ ಪ್ರವೇಶಿಸಿದಾಗ, ಅವನು ಒಡಂಬಡಿಕೆಯ ಮಂಜೂಷದ ಮೇಲೆ ಇರುವ ಕರುಣಾಸನದ ಮೇಲಿನಿಂದ ಎರಡು ಕೆರೂಬಿಗಳ ಮಧ್ಯದಿಂದ ತನ್ನ ಸಂಗಡ ಮಾತನಾಡುವ ಧ್ವನಿಯನ್ನು ಮೋಶೆಯು ಕೇಳಿದನು. ಹೀಗೆ ದೇವರು ಅವನ ಸಂಗಡ ಮಾತನಾಡಿದರು.