[1] “ ‘ಏಳನೆಯ ತಿಂಗಳಿನ ಮೊದಲನೆಯ ದಿವಸದಲ್ಲಿ ನೀವು ಪರಿಶುದ್ಧ ಸಭೆಯಾಗಿ ಕೂಡಿಬರಬೇಕು. ದೈನಂದಿನ ಉದ್ಯೋಗವನ್ನು ನೀವು ಮಾಡಬಾರದು. ಅದು ನಿಮಗೆ ತುತೂರಿಗಳನ್ನು ಊದುವ ದಿವಸವಾಗಿರುವುದು.
[2] ನೀವು ಯೆಹೋವ ದೇವರಿಗೆ ಸುವಾಸನೆಗಾಗಿ ದೋಷವಿಲ್ಲದ ಒಂದು ಎಳೆಯ ಹೋರಿಯನ್ನೂ ಒಂದು ಟಗರನ್ನೂ ಒಂದು ವರ್ಷದ ಏಳು ಕುರಿಮರಿಗಳನ್ನೂ ದಹನಬಲಿಯಾಗಿ ಅರ್ಪಿಸಬೇಕು.
[3] ಅವುಗಳಿಗೆ ಧಾನ್ಯ ಸಮರ್ಪಣೆಯಾಗಿ ಎಣ್ಣೆಯಿಂದ ಕಲಸಿದ ಹಿಟ್ಟನ್ನು ಹೋರಿಗೆ ಎಫಾದ ಹತ್ತನೇ ಮೂರು ಭಾಗ, ಟಗರಿಗೆ ಹತ್ತನೇ ಎರಡು ಭಾಗ,
[4] ಆ ಏಳು ಕುರಿಮರಿಗಳಲ್ಲಿ ಒಂದೊಂದಕ್ಕೆ ಹತ್ತನೇ ಒಂದು ಭಾಗ,
[5] ನಿಮಗೋಸ್ಕರ ಪ್ರಾಯಶ್ಚಿತ್ತ ಮಾಡುವುದಕ್ಕೆ ಪಾಪ ಪರಿಹಾರಕ ಬಲಿಗಾಗಿ ಒಂದು ಹೋತವನ್ನು ಸಮರ್ಪಿಸಬೇಕು.
[6] ಇದಲ್ಲದೆ ಪ್ರತಿ ತಿಂಗಳಿನ ಮತ್ತು ನಿತ್ಯವಾದ ದಹನಬಲಿಗಳಿಗೆ ಹೆಚ್ಚುವರಿಯಾಗಿ ಅವುಗಳ ಧಾನ್ಯ ಅರ್ಪಣೆಯನ್ನು ಮತ್ತು ಪಾನ ಅರ್ಪಣೆಗಳನ್ನು ನಿರ್ದಿಷ್ಟಪಡಿಸಿದಂತೆ ಸಮರ್ಪಣೆಯಾಗಬೇಕು, ಅವು ಯೆಹೋವ ದೇವರಿಗೆ ಸುವಾಸನೆಗಾಗಿ ಅರ್ಪಿಸುವ ದಹನಬಲಿಯಾಗಿರುವುವು.
[7] “ ‘ಏಳನೆಯ ತಿಂಗಳಿನ ಹತ್ತನೆಯ ದಿವಸದಲ್ಲಿ ನೀವು ಪರಿಶುದ್ಧ ಸಭೆಯನ್ನು ಕೂಡಿಸಬೇಕು. ನೀವು ಎಲ್ಲವನ್ನು ವರ್ಜಿಸಿ, ಯಾವ ಕೆಲಸವನ್ನೂ ಮಾಡಬಾರದು.
[8] ಆದರೆ ಯೆಹೋವ ದೇವರಿಗೆ ಸುವಾಸನೆಯಾದ ದಹನಬಲಿಗಾಗಿ ದೋಷವಿಲ್ಲದ ಒಂದು ಎಳೆಯ ಹೋರಿಯನ್ನೂ ಒಂದು ಟಗರನ್ನೂ ಒಂದು ವರ್ಷದ ಏಳು ಕುರಿಮರಿಗಳನ್ನೂ,
[9] ಅವುಗಳ ಧಾನ್ಯ ಸಮರ್ಪಣೆಗಾಗಿ ಎಣ್ಣೆ ಕಲಸಿದ ಹಿಟ್ಟನ್ನು, ಹೋರಿಗೆ ಎಫಾದ ಹತ್ತನೇ ಮೂರು ಭಾಗ, ಟಗರಿಗೆ ಎಫಾದ ಹತ್ತನೇ ಎರಡು ಭಾಗ,
[10] ಏಳು ಕುರಿಮರಿಗಳಲ್ಲಿ ಒಂದೊಂದಕ್ಕೆ ಹತ್ತನೇ ಒಂದು ಭಾಗ,
[11] ಪಾಪ ಪರಿಹಾರಕ ಬಲಿಗಾಗಿ ಒಂದು ಹೋತನ್ನು ಅರ್ಪಿಸುವದರ ಜೊತೆಗೆ ಪ್ರಾಯಶ್ಚಿತ್ತದ ಪಾಪ ಪರಿಹಾರಕ ಬಲಿಯನ್ನೂ ನಿತ್ಯ ದಹನಬಲಿಯನ್ನೂ ಅದರ ಧಾನ್ಯ ಸಮರ್ಪಣೆಯನ್ನೂ ಅವುಗಳಿಗೆ ತಕ್ಕ ಪಾನದ ಅರ್ಪಣೆಗಳನ್ನೂ ಸಮರ್ಪಿಸಬೇಕು.
[12] “ ‘ಏಳನೆಯ ತಿಂಗಳಿನ ಹದಿನೈದನೆಯ ದಿವಸದಲ್ಲಿ ನೀವು ಪರಿಶುದ್ಧ ಸಭೆಯಾಗಿ ಕೂಡಿಬರಬೇಕು. ದೈನಂದಿನ ಉದ್ಯೋಗವನ್ನು ಮಾಡಬಾರದು. ಯೆಹೋವ ದೇವರಿಗೆ ಏಳು ದಿವಸ ಹಬ್ಬವನ್ನು ಮಾಡಬೇಕು.
[13] ಯೆಹೋವ ದೇವರಿಗೆ ಸುವಾಸನೆಯ ಬೆಂಕಿಯಿಂದ ಮಾಡಿದ ದಹನಬಲಿಯಾಗಿ ಬಲಿಯನ್ನು ಅರ್ಪಿಸಬೇಕು. ಏನೆಂದರೆ, ದೋಷವಿಲ್ಲದ ಹದಿಮೂರು ಎಳೆಯ ಹೋರಿಗಳನ್ನೂ ಎರಡು ಟಗರುಗಳನ್ನೂ ಒಂದು ವರ್ಷದ ಹದಿನಾಲ್ಕು ಕುರಿಮರಿಗಳನ್ನೂ,
[14] ಅವುಗಳ ಧಾನ್ಯ ಸಮರ್ಪಣೆಗಾಗಿ ಎಣ್ಣೆ ಕಲಸಿದ ಹಿಟ್ಟನ್ನು ಹದಿಮೂರು ಹೋರಿಗಳಲ್ಲಿ ಒಂದೊಂದಕ್ಕೆ ಎಫಾದ ಹತ್ತನೇ ಮೂರು ಭಾಗ, ಎರಡು ಟಗರುಗಳಲ್ಲಿ ಒಂದೊಂದಕ್ಕೆ ಎಫಾದ ಹತ್ತನೇ ಎರಡು ಭಾಗ,
[15] ಹದಿನಾಲ್ಕು ಕುರಿಮರಿಗಳಲ್ಲಿ ಒಂದೊಂದಕ್ಕೆ ಎಫಾದ ಹತ್ತನೇ ಒಂದು ಭಾಗ,
[16] ಪಾಪ ಪರಿಹಾರಕ ಬಲಿಯಾಗಿ ಒಂದು ಹೋತವನ್ನೂ ಇದಲ್ಲದೆ ನಿತ್ಯ ದಹನಬಲಿಯನ್ನೂ ಅದರ ಧಾನ್ಯ ಸಮರ್ಪಣೆ ಮತ್ತು ಪಾನದ ಅರ್ಪಣೆಯನ್ನೂ ಸಮರ್ಪಿಸಬೇಕು.
[17] “ ‘ಎರಡನೆಯ ದಿವಸದಲ್ಲಿ ಕಳಂಕವಿಲ್ಲದ ಹನ್ನೆರಡು ಎಳೆಯ ಹೋರಿಗಳನ್ನೂ ಎರಡು ಟಗರುಗಳನ್ನೂ ಒಂದು ವರ್ಷದ ಹದಿನಾಲ್ಕು ಕುರಿಮರಿಗಳನ್ನೂ,
[18] ಹೋರಿಗಳಿಗೆ, ಟಗರುಗಳಿಗೆ ಮತ್ತು ಕುರಿಮರಿಗಳಿಗೆ ಲೆಕ್ಕದ ಪದ್ಧತಿಯ ಪ್ರಕಾರ ಅವುಗಳ ಧಾನ್ಯ ಪಾನಗಳ ಅರ್ಪಣೆಗಳನ್ನೂ,
[19] ದೋಷಪರಿಹಾರಕ ಬಲಿಯಾಗಿ ಒಂದು ಹೋತನ್ನಲ್ಲದೆ ನಿತ್ಯ ದಹನಬಲಿಯನ್ನೂ ಅದರ ಧಾನ್ಯಪಾನ ಅರ್ಪಣೆಗಳನ್ನೂ ಸಮರ್ಪಿಸಬೇಕು.
[20] “ ‘ಮೂರನೆಯ ದಿವಸದಲ್ಲಿ ದೋಷವಿಲ್ಲದ ಹನ್ನೊಂದು ಹೋರಿಗಳನ್ನೂ ಎರಡು ಟಗರುಗಳನ್ನೂ ಒಂದು ವರ್ಷದ ಹದಿನಾಲ್ಕು ಕುರಿಮರಿಗಳನ್ನೂ,
[21] ಹೋರಿಗಳಿಗೆ, ಟಗರುಗಳಿಗೆ ಮತ್ತು ಕುರಿಮರಿಗಳಿಗೆ ಅವುಗಳ ಲೆಕ್ಕದ ಪದ್ಧತಿಯ ಪ್ರಕಾರ ಅವುಗಳ ಧಾನ್ಯ ಪಾನಗಳ ಅರ್ಪಣೆಗಳನ್ನೂ,
[22] ಪಾಪ ಪರಿಹಾರಕ ಬಲಿಯಾಗಿ ಒಂದು ಹೋತನ್ನಲ್ಲದೆ ನಿತ್ಯ ದಹನಬಲಿಯನ್ನೂ ಅದರ ಧಾನ್ಯಪಾನ ಅರ್ಪಣೆಗಳನ್ನೂ ಸಮರ್ಪಿಸಬೇಕು.
[23] “ ‘ನಾಲ್ಕನೆಯ ದಿವಸದಲ್ಲಿ ದೋಷವಿಲ್ಲದ ಹತ್ತು ಹೋರಿಗಳನ್ನೂ ಎರಡು ಟಗರುಗಳನ್ನೂ ಒಂದು ವರ್ಷದ ಹದಿನಾಲ್ಕು ಕುರಿಮರಿಗಳನ್ನೂ,
[24] ಹೋರಿಗಳಿಗೆ, ಟಗರುಗಳಿಗೆ ಮತ್ತು ಕುರಿಮರಿಗಳಿಗೆ ಅವುಗಳ ಲೆಕ್ಕದ ಪದ್ಧತಿಯ ಪ್ರಕಾರ ಅವುಗಳ ಧಾನ್ಯ ಪಾನಗಳ ಅರ್ಪಣೆಗಳನ್ನೂ
[25] ಪಾಪ ಪರಿಹಾರಕ ಬಲಿಯಾಗಿ ಒಂದು ಹೋತವನ್ನೂ ಇದಲ್ಲದೆ ನಿತ್ಯ ದಹನಬಲಿಯನ್ನೂ ಅದರ ಧಾನ್ಯಪಾನ ಅರ್ಪಣೆಗಳನ್ನೂ ಸಮರ್ಪಿಸಬೇಕು.
[26] “ ‘ಐದನೆಯ ದಿವಸದಲ್ಲಿ ದೋಷವಿಲ್ಲದ ಒಂಬತ್ತು ಹೋರಿಗಳನ್ನೂ ಎರಡು ಟಗರುಗಳನ್ನೂ ಒಂದು ವರ್ಷದ ಹದಿನಾಲ್ಕು ಕುರಿಮರಿಗಳನ್ನೂ,
[27] ಹೋರಿಗಳಿಗೆ, ಟಗರುಗಳಿಗೆ ಮತ್ತು ಕುರಿಮರಿಗಳಿಗೆ ಲೆಕ್ಕದ ಪದ್ಧತಿಯ ಪ್ರಕಾರ ಅವುಗಳ ಧಾನ್ಯಪಾನ ಬಲಿಗಳನ್ನೂ,
[28] ಪಾಪ ಪರಿಹಾರಕ ಬಲಿಯಾಗಿ ಒಂದು ಹೋತನ್ನಲ್ಲದೆ ನಿತ್ಯ ದಹನಬಲಿಯನ್ನೂ ಅದರ ಧಾನ್ಯಪಾನ ಅರ್ಪಣೆಗಳನ್ನೂ ಸಮರ್ಪಿಸಬೇಕು.
[29] “ ‘ಆರನೆಯ ದಿವಸದಲ್ಲಿ ದೋಷವಿಲ್ಲದ ಎಂಟು ಹೋರಿಗಳನ್ನೂ ಎರಡು ಟಗರುಗಳನ್ನೂ ಒಂದು ವರ್ಷದ ಹದಿನಾಲ್ಕು ಕುರಿಮರಿಗಳನ್ನೂ,
[30] ಹೋರಿಗಳಿಗೆ, ಟಗರುಗಳಿಗೆ ಮತ್ತು ಕುರಿಮರಿಗಳಿಗೆ ಲೆಕ್ಕದ ಪದ್ಧತಿಯ ಪ್ರಕಾರ ಅವುಗಳ ಧಾನ್ಯ ಪಾನಗಳ ಅರ್ಪಣೆಗಳನ್ನೂ,
[31] ಪಾಪ ಪರಿಹಾರಕ ಬಲಿಯಾಗಿ ಒಂದು ಹೋತನ್ನಲ್ಲದೆ ನಿತ್ಯ ದಹನಬಲಿಯನ್ನೂ ಅದರ ಧಾನ್ಯಪಾನ ಅರ್ಪಣೆಗಳನ್ನೂ ಸಮರ್ಪಿಸಬೇಕು.
[32] “ ‘ಏಳನೆಯ ದಿವಸದಲ್ಲಿ ದೋಷವಿಲ್ಲದ ಏಳು ಹೋರಿಗಳನ್ನೂ ಎರಡು ಟಗರುಗಳನ್ನೂ ಒಂದು ವರ್ಷದ ಹದಿನಾಲ್ಕು ಕುರಿಮರಿಗಳನ್ನೂ
[33] ಹೋರಿಗಳಿಗೆ, ಟಗರುಗಳಿಗೆ ಮತ್ತು ಕುರಿಮರಿಗಳಿಗೆ ಅವುಗಳ ಲೆಕ್ಕದ ಪದ್ಧತಿಯ ಪ್ರಕಾರ ಅವುಗಳ ಧಾನ್ಯ ಪಾನಗಳ ಅರ್ಪಣೆಗಳನ್ನೂ,
[34] ಪಾಪ ಪರಿಹಾರಕ ಬಲಿಯಾಗಿ ಒಂದು ಹೋತನ್ನಲ್ಲದೆ ನಿತ್ಯ ದಹನಬಲಿಯನ್ನೂ ಅದರ ಧಾನ್ಯಪಾನ ಅರ್ಪಣೆಗಳನ್ನೂ ಸಮರ್ಪಿಸಬೇಕು.
[35] “ ‘ಎಂಟನೆಯ ದಿನದಲ್ಲಿ ನೀವು ಹಬ್ಬದ ಸಭೆಯಾಗಿ ಕೂಡಿಬರಬೇಕು. ದೈನಂದಿನ ಕೆಲಸವನ್ನು ನೀವು ಮಾಡಬಾರದು.
[36] ಯೆಹೋವ ದೇವರಿಗೆ ಸುವಾಸನೆಯ ಬೆಂಕಿಯಿಂದ ಮಾಡಿದ ದಹನಬಲಿಗಾಗಿ ದೋಷವಿಲ್ಲದ ಒಂದು ಹೋರಿಯನ್ನೂ ಒಂದು ಟಗರನ್ನೂ ಒಂದು ವರ್ಷದ ಏಳು ಕುರಿಮರಿಗಳನ್ನೂ
[37] ಹೋರಿಗೆ, ಟಗರಿಗೆ ಮತ್ತು ಕುರಿಮರಿಗಳಿಗೆ ಅವುಗಳ ಲೆಕ್ಕದ ಪದ್ಧತಿಯ ಪ್ರಕಾರ ಅವುಗಳ ಧಾನ್ಯ ಪಾನಗಳ ಅರ್ಪಣೆಗಳನ್ನೂ,
[38] ಪಾಪ ಪರಿಹಾರಕ ಬಲಿಯಾಗಿ ಒಂದು ಹೋತನ್ನಲ್ಲದೆ ನಿತ್ಯ ದಹನಬಲಿಯನ್ನೂ ಅದರ ಧಾನ್ಯಪಾನ ಅರ್ಪಣೆಗಳನ್ನೂ ಸಮರ್ಪಿಸಬೇಕು.
[39] “ ‘ಇದಲ್ಲದೆ ನಿಮ್ಮ ಹರಕೆಯನ್ನೂ ನಿಮ್ಮ ಉಚಿತವಾದ ಬಲಿಗಳನ್ನೂ ನಿಮ್ಮ ದಹನಬಲಿಗಳನ್ನೂ ನಿಮ್ಮ ಧಾನ್ಯಪಾನ ಅರ್ಪಣೆಗಳನ್ನೂ ನಿಮ್ಮ ಸಮಾಧಾನ ಬಲಿಗಳನ್ನೂ ನೀವು ನಿಮ್ಮ ಹಬ್ಬಗಳಲ್ಲಿ ಯೆಹೋವ ದೇವರಿಗೆ ಮಾಡತಕ್ಕೆ ಸಮರ್ಪಣೆಗಳು ಇವೇ.’ ”
[40] ಯೆಹೋವ ದೇವರು ತನಗೆ ಆಜ್ಞಾಪಿಸಿದ್ದೆಲ್ಲದರ ಪ್ರಕಾರ ಮೋಶೆಯು ಇಸ್ರಾಯೇಲರಿಗೆ ಹೇಳಿದನು.