[1] ಎಲ್ಲಾ ಇಸ್ರಾಯೇಲರನ್ನು ಅವರ ಕುಟುಂಬಗಳಿಗೆ ಅನುಗುಣವಾಗಿ ವಂಶಾವಳಿಯಲ್ಲಿ ಉಲ್ಲೇಖಿಸಲಾಗಿದೆ. ಅವರ ಹೆಸರುಗಳು ಇಸ್ರಾಯೇಲರ ಅರಸರ ಪುಸ್ತಕದಲ್ಲಿ ದಾಖಲಾಗಿದೆ. ಯೆಹೂದ್ಯರು ದೇವದ್ರೋಹಿಗಳಾದುದರಿಂದ ಬಾಬಿಲೋನಿಗೆ ಸೆರೆಯವರಾಗಿ ಹೋಗಬೇಕಾಯಿತು.
[2] ಆಗ ಅವರ ಪಟ್ಟಣಗಳನ್ನೂ, ಸ್ವಾಸ್ತ್ಯವನ್ನೂ ಮೊದಲು ಸ್ವಾಧೀನಮಾಡಿಕೊಂಡವರು ಇಸ್ರಾಯೇಲ್ಯರು, ಯಾಜಕರು ಲೇವಿಯರು ಮತ್ತು ದೇವಾಲಯದ ಸೇವಕರು ಇವರೇ.
[3] ಯೆಹೂದ್ಯರು, ಬೆನ್ಯಾಮೀನ್ಯರು ಎಫ್ರಾಯೀಮ್ಯರು, ಮನಸ್ಸೆಯರು ಯೆರೂಸಲೇಮಿನಲ್ಲಿ ವಾಸವಾಗಿದ್ದವರು.
[4] ಯೆಹೂದ ಕುಲದ ಊತೈ ಅಮ್ಮೀಹೂದನ ಮಗ. ಅಮ್ಮಿಹೂದನು ಒಮ್ರಿಯ ಮಗ. ಇವನು ಇಮ್ರಿಯ, ಮಗ. ಇವನು ಬಾನಿಯ ಮಗ. ಇವನು ಯೆಹೂದನ ಮಗನಾದ ಪೆರೆಚನ ಸಂತಾನದವನು.
[5] ಶೇಲಾಹನ ಸಂತಾನದ ಚೊಚ್ಚಲು ಮಗನಾದ ಅಸಾಯ ಮತ್ತು ಅವನ ಮಕ್ಕಳು.
[6] ಯೆಯೂವೇಲ್ ಜೆರಹನ ಸಂತಾನದವನು. ಇವನೂ ಇವನ ಸಹೋದರರೂ ಒಟ್ಟು ಆರುನೂರ ತೊಂಬತ್ತು ಜನರು.
[7] ಬೆನ್ಯಾಮೀನ್ಯ ಕುಲದವರಲ್ಲಿ ಮೆಷುಲ್ಲಾಮನ ಮಗನೂ, ಹೋದವ್ಯನ ಮೊಮ್ಮಗನೂ, ಹಸ್ಸೆನುವಾಹನ ಮರಿಮಗನೂ ಆಗಿರುವ ಸಲ್ಲು ಪ್ರಮುಖನಾದವನು.
[8] ಯೆರೋಹಾಮನ ಮಗನಾದ ಇಬ್ನೆಯಾಹ; ಉಜ್ಜಿಯನ ಮಗನೂ ಮಿಕ್ರೀರಿಯ ಮೊಮ್ಮಗನೂ ಆದ ಏಲಾ, ಶೆಫಟ್ಯನ ಮಗನೂ ರೆಯೂವೇಲನ ಮೊಮ್ಮಗನೂ ಇಬ್ನಿಯನ ಮರಿಮಗನೂ ಆದ ಮೆಷುಲ್ಲಾಮ್ ಇವರೂ ಮತ್ತು ಇವರ ಸಹೋದರರೂ,
[9] ಒಟ್ಟಿಗೆ ಒಂಬೈನೂರ ಐವತ್ತಾರು ಜನರು. ಇವರೆಲ್ಲರೂ ತಮ್ಮ ಗೋತ್ರಗಳಲ್ಲಿ ಪ್ರಧಾನಪುರುಷರು.
[10] ಯಾಜಕರಲ್ಲಿ ಯೆದಾಯ, ಯೆಹೋಯಾರೀಬ್, ಯಾಕೀನ್;
[11] ಅಹೀಟೂಬನ ಸಂತಾನದವನಾದ ಮೆರಾಯೋತನಿಂದ ಹುಟ್ಟಿದ ಚಾದೋಕನ ಮರಿಮಗನೂ ಮೆಷುಲ್ಲಾಮನ ಮೊಮ್ಮಗನೂ, ಹಿಲ್ಕೀಯನ ಮಗನೂ ದೇವಾಲಯದ ಅಧಿಪತಿಯಾಗಿದ್ದವನೂ ಆಗಿದ್ದ ಅಜರ್ಯ.
[12] ಯೆರೋಹಾಮನ ಮಗನಾದ ಅದಾಯ ಇವನೂ ಮತ್ತು ಇವನ ಸಹೋದರರೂ ಯೆರೋಹಾಮನು, ಪಶ್ಹೂರನ ಮಗ; ಇವನು ಮಲ್ಕೀಯನ ಮಗ, ಇವನು ಮಾಸೈಯನ ಮಗ. ಇವನು ಅದೀಯೇಲನ ಮಗ. ಇವನು ಯಹ್ಜೇರನ ಮಗ. ಇವನು ಮೆಷುಲ್ಲಾಮನ ಮಗ. ಇವನು ಮೆಷಿಲ್ಲೋಮೋತನ ಮಗ. ಇವನು ಇಮ್ಮೇರನ ಮಗ.
[13] ಗೋತ್ರ ಪ್ರಧಾನರು ದೇವಾಲಯ ಸೇವೆಯಲ್ಲಿ ಗಟ್ಟಿಗರೂ ಆಗಿದ್ದ ಇವರೂ, ಇವರ ಸಹೋದರರೂ ಒಟ್ಟು ಸಾವಿರದ ಏಳು ನೂರ ಅರವತ್ತು ಜನರು.
[14] ಲೇವಿಯರಲ್ಲಿ ಹಷಬ್ಯನ ಮಗನೂ, ಅಜ್ರೀಕಾಮನ ಮೊಮ್ಮಗನೂ, ಹಷಬ್ಯನ ಮರಿಮಗನೂ, ಮೆರಾರೀ ಗೋತ್ರದವನೂ ಆದ ಶೆಮಾಯ
[15] ಬಕ್ಬಕ್ಕರ್, ಹೆರೆಷ್, ಗಾಲಾಲ್, ಮೀಕನ ಮಗನೂ ಜಿಕ್ರೀಯ ಮೊಮ್ಮಗನೂ ಆಸಾಫನ ಮರಿಮಗನೂ ಆದ ಮತ್ತನ್ಯನು.
[16] ಶೆಮಾಯನ ಮಗನೂ ಯೆದೂತೂನನ ಮರಿಮಗನೂ ಆದ ಓಬದ್ಯ. ನೆಟೋಫಾತ್ಯರ ಗ್ರಾಮಗಳಲ್ಲಿ ವಾಸವಾಗಿದ್ದ ಎಲ್ಕಾನನ ಮೊಮ್ಮಗನೂ ಆಸನ ಮಗನೂ ಆದ ಬೆರೆಕ್ಯ ಇವರೇ.
[17] ದ್ವಾರಪಾಲಕರಲ್ಲಿ ಶಲ್ಲೂಮ್, ಅಕ್ಕೂಬ್, ಟಲ್ಮೋನ್, ಅಹೀಮಾನ್, ಇವರೂ ಮತ್ತು ಇವರ ಸಹೋದರರು. ಇವರಲ್ಲಿ ಶಲ್ಲೂಮನು ಪ್ರಮುಖನಾಗಿದ್ದನು.
[18] ಶಲ್ಲೂಮರು ಇಂದಿನವರೆಗೂ ಪೂರ್ವದಿಕ್ಕಿನಲ್ಲಿರುವ ಅರಸನ ಬಾಗಿಲನ್ನು ಕಾಯುತ್ತಿರುತ್ತಾರೆ. ಇವರು ಲೇವಿಯರ ಪಾಳೆಯಗಳ ದ್ವಾರಪಾಲಕರು.
[19] ಕೋರೇಯನ ಮಗನೂ ಎಬ್ಯಾಸಾಫನ ಮೊಮ್ಮಗನೂ ಕೋರಹನ ಮರಿಮಗನೂ ಆದ ಶಲ್ಲೂಮನೂ, ಅವನ ಗೋತ್ರ ಬಂಧುಗಳಾದ ಮಿಕ್ಕ ಕೋರಹಿಯರೂ ಗುಡಾರದ ದ್ವಾರಪಾಲಕ ಸೇವೆಗೆ ನೇಮಿಸಲ್ಪಟ್ಟರು. ಇವರ ಪೂರ್ವಿಕರು ಯೆಹೋವನ ಪಾಳೆಯದ ಪ್ರವೇಶ ದ್ವಾರವನ್ನು ಕಾಯುವವರಾಗಿದ್ದರು.
[20] ಆಗ ಎಲ್ಲಾಜಾರನ ಮಗನಾದ ಫೀನೆಹಾಸನು ಅವರ ನಾಯಕನಾಗಿದ್ದನು. ಯೆಹೋವನು ಇವನ ಸಂಗಡ ಇದ್ದನು.
[21] ಮೆಷೆಲೆಮ್ಯನ ಮಗನಾದ ಜೆಕರೀಯನು ದೇವದರ್ಶನದ ಗುಡಾರ ದ್ವಾರಪಾಲಕನಾಗಿದ್ದನು.
[22] ದ್ವಾರಪಾಲಕ ಸೇವೆಗೆ ಪ್ರತ್ಯೇಕಿಸಲ್ಪಟ್ಟವರು ಒಟ್ಟಿಗೆ ಇನ್ನೂರ ಹನ್ನೆರಡು ಜನರು. ಅವರ ಹೆಸರುಗಳು ಅವರವರ ಗ್ರಾಮಗಳ ಪಟ್ಟಿಯಲ್ಲಿ ದಾಖಲಾಗಿದ್ದವು. ದಾವೀದನೂ, ದರ್ಶಿಯಾದ ಸಮುವೇಲನೂ ಅವರನ್ನು ಈ ಉದ್ಯೊಗಕ್ಕೆ ನೇಮಿಸಿದರು.
[23] ಅವರೂ ಅವರ ಮಕ್ಕಳೂ ಯೆಹೋವನ ಆಲಯದ, ಗುಡಾರದ ಬಾಗಿಲುಗಳನ್ನು ಕಾಯುತ್ತಿದ್ದರು.
[24] ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಈ ದಿಕ್ಕುಗಳಲ್ಲಿರುವ ದೇವಾಲಯದ ಬಾಗಿಲುಗಳನ್ನು ಕಾಯುವವರಾಗಿದ್ದರು.
[25] ಗ್ರಾಮಗಳಲ್ಲಿ ಇದ್ದ ಅವರ ಗೋತ್ರ ಬಂಧುಗಳು ಅವರ ಸಂಗಡ ಕೆಲಸ ಮಾಡುವುದಕ್ಕೊಸ್ಕರ ಸರದಿಯಂತೆ ಕ್ರಮದ ಪ್ರಕಾರವಾಗಿ ಮೇಲೆ ಏಳೇಳು ದಿನಗಳು ಬರಬೇಕಾಯಿತು.
[26] ಲೇವಿಯರಾದ ಮೇಲ್ಕಂಡ ನಾಲ್ಕು ಜನರು ದ್ವಾರಪಾಲಕರ ಮುಖ್ಯಸ್ಥರಾಗಿ ದೇವಾಲಯದ ಕೋಣೆಗಳನ್ನೂ ಮತ್ತು ಭಂಡಾರಗಳನ್ನೂ ನೋಡಿಕೊಳ್ಳುವ ಜವಾಬ್ದಾರರಾಗಿದ್ದರು.
[27] ಅವರು ರಾತ್ರಿಯಲ್ಲಿ ದೇವಾಲಯದ ಸುತ್ತಲೂ ಕಾವಲು ಕಾಯುತ್ತಿದ್ದರು. ಪ್ರತಿದಿನ ಬೆಳಿಗ್ಗೆ ದೇವಾಲಯದ ಬಾಗಿಲು ತೆರೆಯುತ್ತಿದ್ದರು.
[28] ಇದಲ್ಲದೆ ಅವರಲ್ಲಿ ಕೆಲವರು ಪೂಜಾ ಸಾಮಗ್ರಿಗಳನ್ನು ನೋಡಿಕೊಳ್ಳುವವರಾಗಿದ್ದರು. ಅವುಗಳನ್ನು ಕೊಡುವಾಗಲೂ ತಿರುಗಿ ತೆಗೆದುಕೊಳ್ಳುವಾಗಲೂ ಲೆಕ್ಕವಿರಿಸಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದರು.
[29] ಇನ್ನು ಕೆಲವರು ದೇವಾಲಯದ ಎಲ್ಲಾ ವಸ್ತುಗಳ ಮೇಲ್ವಿಚಾರಕರೂ, ಗೋದಿಹಿಟ್ಟು, ದ್ರಾಕ್ಷಾರಸ, ಎಣ್ಣೆ, ಧೂಪ, ಪರಿಮಳದ್ರವ್ಯ ಇವುಗಳ ಪಾರುಪತ್ಯಗಾರರು ಆಗಿದ್ದರು.
[30] ಯಾಜಕ ಸಂತಾನದವರಲ್ಲಿ ಕೆಲವರು ಪರಿಮಳದ್ರವ್ಯಗಳಿಂದ ತೈಲವನ್ನು ಮಾಡುತ್ತಿದ್ದರು.
[31] ಲೇವಿಯರಲ್ಲಿ ಕೋರಹಿಯನಾದ ಶಲ್ಲೂಮನ ಚೊಚ್ಚಲ ಮಗನಾದ ಮತ್ತಿತ್ಯನು ರೊಟ್ಟಿ ಸುಡುವ ಕೆಲಸದ ಮೇಲ್ವಿಚಾರಕನು.
[32] ಅವನ ಸಹೋದರರಾದ ಮಿಕ್ಕ ಕೆಹಾತ್ಯರಲ್ಲಿ ಕೆಲವರು ಪ್ರತಿ ಸಬ್ಬತ್ತಿನಲ್ಲಿ ನೈವೇದ್ಯದ ರೊಟ್ಟಿಗಳನ್ನು ತಯಾರಿಸುವ ಕೆಲಸವಿತ್ತು.
[33] ಇನ್ನೂ ಕೆಲವರು ವಾದ್ಯಗಾರರಾಗಿ ಸಂಗೀತ ಸೇವೆಮಾಡುವ ಜವಾಬ್ದಾರಿಯಿತ್ತು. ಇವರು ಲೇವಿಯ ಗೋತ್ರಗಳಲ್ಲಿ ಪ್ರಧಾನರೂ ದೇವಾಲಯದ ಕೋಣೆಗಳಲ್ಲಿ ವಾಸಿಸುವವರೂ ಆಗಿದ್ದರು. ಅವರು ಹಗಲಿರುಳು ಕೆಲಸದಲ್ಲಿ ಇರುತ್ತಿದ್ದರಿಂದ ಇತರ ಸೇವೆಯಿಂದ ಬಿಡುಗಡೆ ಹೊಂದಿದ್ದರು.
[34] ಇವರು ವಂಶಾವಳಿಯ ಪ್ರಕಾರ ಲೇವಿಗೋತ್ರ ಪ್ರಧಾನರೂ, ಯೆರೂಸಲೇಮಿನಲ್ಲಿ ವಾಸಿಸುವವರೂ ಆಗಿದ್ದರು.
[35] ಗಿಬ್ಯೋನಿನಲ್ಲಿ ಗಿಬ್ಯೋನ್ಯರ ಮೂಲಪುರುಷನಾದ ಯೆಯೂವೇಲನು ವಾಸಿಸುತ್ತಿದ್ದನು. ಅವನ ಹೆಂಡತಿಯ ಹೆಸರು ಮಾಕ.
[36] ಅವನ ಚೊಚ್ಚಲ ಮಗ ಅಬ್ದೋನನು. ತರುವಾಯ ಹುಟ್ಟಿದವರು ಚೂರ್, ಕೀಷ್, ಬಾಳ್, ನೇರ್, ನಾದಾಬ್,
[37] ಗೆದೋರ್, ಅಹ್ಯೋ, ಜೆಕರ್ಯ ಮತ್ತು ಮಿಕ್ಲೋತ್.
[38] ಮಿಕ್ಲೋತನು ಶಿಮಾಮನನ್ನು ಪಡೆದನು. ಇವರು ತಮ್ಮ ಸಹೋದರರಿಂದ ಬೇರೆಯಾಗಿ ಯೆರೂಸಲೇಮಿನಲ್ಲಿರುವ ತಮ್ಮ ಕುಲಸಂಬಂಧಿಕರ ಜೊತೆಯಲ್ಲಿ ವಾಸಿಸುತ್ತಿದ್ದರು.
[39] ನೇರನು ಕೀಷನನ್ನು ಪಡೆದನು; ಕೀಷನು ಸೌಲನನ್ನು ಪಡೆದನು; ಸೌಲನು ಯೋನಾತಾನನನ್ನೂ, ಮಲ್ಕೀಷೂವನನ್ನೂ, ಅಬೀನಾದಾಬನನ್ನೂ, ಎಷ್ಬಾಳನನ್ನು ಪಡೆದನು.
[40] ಯೋನಾತಾನನು ಮೆರೀಬ್ಬಾಳನನ್ನು ಪಡೆದನು. ಮೆರೀಬ್ಬಾಳನು ಮೀಕನನ್ನು ಪಡೆದನು.
[41] ಮೀಕನ ಮಕ್ಕಳು ಪೀತೋನ್, ಮೆಲೆಕ್, ತಹ್ರೇಯ ಮತ್ತು ಅಹಾಜ ಇವರೇ.
[42] ಆಹಾಜನು ಯಗ್ರಾಹನನ್ನು ಪಡೆದನು; ಯಗ್ರಾಹನು ಆಲೆಮೆತ್, ಅಜ್ಮಾವೆತ್, ಜಿಮ್ರಿ ಇವರನ್ನು ಪಡೆದನು; ಜಿಮ್ರಿಯು ಮೋಚನನ್ನು ಪಡೆದನು.
[43] ಮೋಚನು ಬಿನ್ನನನ್ನು ಪಡೆದನು; ಇವನ ಮಗನು ರೆಫಾಯ; ಇವನ ಮಗ ಎಲ್ಲಾಸ; ಇವನ ಮಗ ಅಚೇಲ.
[44] ಅಚೇಲನಿಗೆ ಆರು ಮಕ್ಕಳಿದ್ದರು. ಅವರ ಹೆಸರುಗಳು ಅಜ್ರೀಕಾಮ್, ಬೋಕೆರೂ, ಇಷ್ಮಾಯೇಲ್, ಶೆಯರ್ಯ, ಓಬದ್ಯ ಮತ್ತು ಹಾನಾನ್.