Skip to content
Opens in a new window
Listen to this chapter • 6:51

[1] ಆದಾಮನ ಸಂತಾನದವರು; ಸೇತ್, ಎನೋಷ್,

[2] ಕೇನಾನ್, ಮಹಲಲೇಲ್, ಯೆರೆದ್,

[3] ಹನೋಕ್, ಮೆತೂಷೆಲಹ, ಲೆಮೆಕ್,

[4] ನೋಹ, ಶೇಮ್, ಹಾಮ್, ಯೆಫೆತ್ ಎಂಬವರು.

[5] ಯೆಫೆತನ ಸಂತಾನದವರು ಯಾರೆಂದರೆ; ಗೋಮೆರ್, ಮಾಗೋಗ್, ಮಾದಯ್, ಯಾವಾನ್, ತೂಬಲ್, ಮೆಷೆಕ್ ಮತ್ತು ತೀರಾಸ್ ಎಂಬವರು.

[6] ಗೋಮೆರನ ಸಂತಾನದವರು ಯಾರೆಂದರೆ; ಅಷ್ಕೆನೆಜ್, ರೀಫತ್ ಮತ್ತು ತೋಗರ್ಮ ಎಂಬವರು.

[7] ಯಾವಾನನ ಸಂತಾನದವರು ಯಾರೆಂದರೆ ಎಲೀಷ, ತಾರ್ಷೀಷ್, ಕಿತ್ತೀಮ್, ದೋದಾನೀಮ್ ಎಂಬ ಸ್ಥಳಗಳವರು.

[8] ಹಾಮಾನ ಸಂತಾನದವರು ಯಾರೆಂದರೆ ಕೂಷ್, ಮಿಚ್ರಯಿಮ್, ಪೂಟ್, ಕಾನಾನ್ ಎಂಬವರು.

[9] ಕೂಷನ ಸಂತಾನದವರು: ಸೆಬಾ, ಹವೀಲ, ಸಬ್ತ, ರಮ್ಮ ಸಬ್ತೆಕ ಎಂಬುವರು. ರಮ್ಮನ ಸಂತಾನದವರು: ಶೆಬ ಮತ್ತು ದೆದಾನ್ ಎಂಬವರು.

[10] ಕೂಷನು ನಿಮ್ರೋದನನ್ನು ಪಡೆದನು. ಇವನು ಈ ಭೂಮಿಯ ಮೇಲಿನ ಪ್ರಥಮ ಪರಾಕ್ರಮಶಾಲಿ ರಾಜನೆಂದು ಪ್ರಸಿದ್ಧನಾದನು.

[11] ಮಿಚ್ರಯಿಮ್ಯರಿಂದ ಲೂದ್ಯರೂ, ಅನಾಮ್ಯರೂ, ಲೆಹಾಬ್ಯರೂ, ನಫ್ತುಹ್ಯರೂ,

[12] ಪತ್ರುಸ್ಯರೂ, ಕಸ್ಲುಹ್ಯರೂ, ಕಫ್ತೋರ್ಯರೂ ಹುಟ್ಟಿದರು. ಕಸ್ಲುಹ್ಯರಿಂದ ಫಿಲಿಷ್ಟಿಯರು ಬಂದರು.

[13] ಕಾನಾನ್ ವಂಶದಲ್ಲಿ ಮೊದಲು ಹುಟ್ಟಿದವನು ಸೀದೋನ್, ನಂತರ ಹೇತ್ ಎಂಬವನು ಹುಟ್ಟಿದನು.

[14] ಇದಲ್ಲದೆ ಯೆಬೂಸಿಯರೂ, ಅಮೋರಿಯರೂ, ಗಿರ್ಗಾಷಿಯರೂ,

[15] ಹಿವ್ವಿಯರೂ, ಅರ್ಕಿಯರೂ, ಸೀನಿಯರೂ,

[16] ಅರ್ವಾದಿಯರೂ, ಚೆಮಾರಿಯರೂ ಮತ್ತು ಹಮಾತಿಯರೂ ಕಾನಾನನಿಂದ ಹುಟ್ಟಿದವರು.

[17] ಶೇಮನ ಸಂತಾನದವರು: ಏಲಾಮ್, ಅಶ್ಶೂರ್, ಅರ್ಪಕ್ಷದ್, ಲೂದ್, ಅರಾಮ್, ಊಚ್, ಹೂಲ್, ಗೆತೆರ್ ಮತ್ತು ಮೆಷೆಕ್ ಎಂಬುವರು.

[18] ಅರ್ಪಕ್ಷದನಿಂದ ಶೆಲಹನೂ ಮತ್ತು ಶೆಳಹನಿಂದ ಏಬೆರನೂ ಹುಟ್ಟಿದನು.

[19] ಏಬೆರನಿಗೆ ಇಬ್ಬರು ಮಕ್ಕಳು ಹುಟ್ಟಿದರು. ಒಬ್ಬನಿಗೆ ಪೆಲೆಗ್ (ವಿಂಗಡನೆ) ಎಂಬ ಹೆಸರು. ಇವನ ಕಾಲದಲ್ಲಿ ಭೂಮಿಯ ಜನರು ವಿಂಗಡಿಸಲ್ಪಟ್ಟರು. ಇವನ ತಮ್ಮನ ಹೆಸರು ಯೊಕ್ತಾನ್.

[20] ಯೋಕ್ತಾನನ ಸಂತಾನದವರು: ಅಲ್ಮೋದಾದ್, ಶೆಲೆಫ್, ಹಚರ್ಮಾವೆತ್, ಯೆರಹ,

[21] ಹದೋರಾಮ್, ಊಜಾಲ್, ದಿಕ್ಲ,

[22] ಎಬಾಲ್, ಅಬೀಮಾಯೇಲ್, ಶೆಬಾ,

[23] ಓಫೀರ್, ಹವೀಲಾ ಮತ್ತು ಯೋಬಾಬ್ ಎಂಬುವರು.

[24] ಶೇಮನ ಸಂತಾನದವರು: ಅರ್ಪಕ್ಷದ್, ಶೆಲಹ,

[25] ಏಬೆರ್, ಪೆಲೆಗ್, ರೆಯೂ,

[26] ಸೆರೂಗ್, ನಾಹೋರ್, ತೆರಹ,

[27] ಅಬ್ರಾಮ್ ಎಂಬ ಹೆಸರು ಹೊಂದಿದ ಅಬ್ರಹಾಮ ಎಂಬುವರು.

[28] ಅಬ್ರಹಾಮನ ಮಕ್ಕಳು: ಇಸಾಕ ಮತ್ತು ಇಷ್ಮಾಯೇಲ್.

[29] ಇಷ್ಮಾಯೇಲರ ವಂಶಾವಳಿ: ಇಷ್ಮಾಯೇಲನಿಗೆ ಮೊದಲು ಹುಟ್ಟಿದವನು ನೆಬಾಯೋತ್, ಆ ಮೇಲೆ ಹುಟ್ಟಿದವರು ಕೇದಾರ್, ಅದ್ಬೆಯೇಲ್, ಮಿಬ್ಸಾಮ್,

[30] ಮಿಷ್ಮ, ದೂಮಾ, ಮಸ್ಸ, ಹದದ್, ತೇಮ,

[31] ಯೆಟೂರ್, ನಾಫೀಷ್ ಮತ್ತು ಕೇದೆಮ್ ಎಂಬುವರು.

[32] ಅಬ್ರಹಾಮನ ಉಪಪತ್ನಿಯಾದ ಕೆಟೂರಳ ಸಂತಾನದವರು: ಜಿಮ್ರಾನ್, ಯೊಕ್ಷಾನ್, ಮೆದಾನ್, ಮಿದ್ಯಾನ್, ಇಷ್ಬಾಕ್ ಮತ್ತು ಶೂಹ ಎಂಬವರು. ಯೊಕ್ಷಾನನು ಶೆಬಾ ಮತ್ತು ದೆದಾನ್ ಎಂಬವರನ್ನು ಪಡೆದನು.

[33] ಏಫ, ಏಫೆರ್, ಹನೋಕ್, ಅಬೀದ, ಎಲ್ದಾಯ ಎಂಬವರು ಮಿದ್ಯಾನನಿಂದ ಹುಟ್ಟಿದವರು. ಇವರೆಲ್ಲರೂ ಕೆಟೂರಳ ಸಂತತಿಯವರು.

[34] ಅಬ್ರಹಾಮನು ಸಾರಳಿಂದ ಇಸಾಕನನ್ನು ಪಡೆದನು. ಏಸಾವ ಮತ್ತು ಇಸ್ರಾಯೇಲ್ ಇಸಾಕನ ಮಕ್ಕಳು.

[35] ಏಸಾವನ ವಂಶಸ್ಥರು ಯಾರೆಂದರೆ ಎಲೀಫಜ್, ರೆಯೂವೇಲ್, ಯೆಯೂಷ್, ಯಳಾಮ್ ಮತ್ತು ಕೋರಹ ಇವರೇ.

[36] ಎಲೀಫಜನ ಮಕ್ಕಳು: ತೇಮಾನ್, ಓಮಾರ್, ಜೆಫೀ, ಗತಾಮ್, ಕೆನಜ್; ತಿಮ್ನ ಮತ್ತು ಅಮಾಲೇಕ್ ಎಂಬವರು.

[37] ರೆಯೂವೇಲನ ಮಕ್ಕಳು: ನಹತ್, ಜೆರಹ, ಶಮ್ಮ ಮತ್ತು ಮಿಜ್ಜ.

[38] ಸೇಯೀರನಿಂದ ಹುಟ್ಟಿದವರು ಲೋಟಾನ್, ಶೋಬಾಲ್, ಚಿಬ್ಬೋನ್, ಅನಾಹ, ದೀಶೋನ್, ಏಚೆರ್ ಮತ್ತು ದೀಶಾನ್ ಸೇಯೀರನ ಮಕ್ಕಳು.

[39] ಲೋಟಾನನ ಮಕ್ಕಳು ಹೋರೀ ಮತ್ತು ಹೋಮಾಮ್. ಲೋಟಾನನ ತಂಗಿ ತಿಮ್ನ.

[40] ಶೋಬಾಲನ ಮಕ್ಕಳು ಅಲ್ಯಾನ್, ಮಾನಹತ್, ಏಬಾಲ್, ಶೆಫೀ ಮತ್ತು ಓನಾಮ್. ಚಿಬ್ಬೋನನ ಮಕ್ಕಳು ಅಯ್ಯಾಹ ಮತ್ತು ಅನಾಹ.

[41] ಅನಾಹನ ಮಗನು ದೀಶೋನ್. ದೀಶೋನನ ಮಕ್ಕಳು ಹಮ್ರಾನ್, ಎಷ್ಬಾನ್, ಇತ್ರಾನ್ ಮತ್ತು ಕೆರಾನ್.

[42] ಏಚೆರನ ಮಕ್ಕಳು ಬಿಲ್ಹಾನ್, ಜಾವಾನ್ ಮತ್ತು ಯಾಕಾನ್. ದೀಶಾನನ ಮಕ್ಕಳು ಊಚ್ ಮತ್ತು ಅರಾನ್.

[43] ಇಸ್ರಾಯೇಲರ ಅರಸರು ಆಳ್ವಿಕೆ ಮಾಡುವುದಕ್ಕಿಂತ ಮೊದಲು ಎದೋಮ್ ದೇಶದಲ್ಲಿ ಅರಸರು ಆಳುತ್ತಿದ್ದರು. ಇವರಲ್ಲಿ ಬೆಯೋರನ ಮಗನಾದ ಬೆಳನು ಮೊದಲನೆಯವನು. ಅವನ ರಾಜಧಾನಿ ಹೆಸರು ದಿನ್ಹಾಬಾ.

[44] ಬೆಳನು ಸತ್ತ ನಂತರ ಬೊಚ್ರದವನಾದ ಜೆರಹನ ಮಗ ಯೋಬಾಬನು ಅಧಿಪತ್ಯಕ್ಕೆ ಬಂದನು.

[45] ಯೋಬಾಬನು ಸತ್ತ ಮೇಲೆ ತೇಮಾನೀಯರ ದೇಶದವನಾದ ಹುಷಾಮನು ಆಳ್ವಿಕೆ ಮಾಡಿದನು.

[46] ಹುಷಾಮನು ಸತ್ತ ಮೇಲೆ ಮೋವಾಬ್ಯರ ಬೈಲಿನಲ್ಲಿ ಮಿದ್ಯಾನರನ್ನು ಸೋಲಿಸಿದ ಬೆದದನ ಮಗನಾದ ಹದದನು ಅರಸನಾದನು. ಅವನ ರಾಜಧಾನಿಯ ಹೆಸರು ಅವೀತ್.

[47] ಹದದನು ಸತ್ತ ಮೇಲೆ ಮಸ್ರೇಕದವನಾದ ಸಮ್ಲಾಹನು ಪಟ್ಟಕ್ಕೆ ಬಂದನು.

[48] ಸಮ್ಲಾಹನು ಸತ್ತ ಮೇಲೆ ಯೂಫ್ರೆಟಿಸ್ ನದಿ ತೀರದಲ್ಲಿರುವ ರೆಹೋಬೋತ್ ಊರಿನ ಸೌಲನು ಅರಸನಾದನು.

[49] ಸೌಲನು ಸತ್ತ ಮೇಲೆ ಅಕ್ಬೋರನ ಮಗನಾದ ಬಾಳ್ಹಾನಾನು ಅರಸನಾದನು.

[50] ಬಾಳ್ಹಾನಾನ್ ಸತ್ತ ಮೇಲೆ ಹದದನು ಅರಸನಾದನು. ಅವನ ರಾಜಧಾನಿಯ ಹೆಸರು ಪಾಗೀ. ಅವನ ಹೆಂಡತಿಯ ಹೆಸರು ಮೆಹೇಟಬೇಲ್; ಆಕೆ ಮೇಜಾಹಾಬನ ಮಗಳಾದ ಮಟ್ರೇದಳ ಮಗಳು,

[51] ಹದದನು ಸತ್ತ ನಂತರ ಎದೋಮ್ಯ ಕುಲಪತಿಗಳಾದವರು ಯಾರೆಂದರೆ, ತಿಮ್ನ, ಅಲ್ಯ, ಯೆತೇತ್,

[52] ಒಹೋಲಿಬಾಮ, ಏಲ, ಪೀನೋನ್,

[53] ಕೆನೆಜ್, ತೇಮಾನ್, ಮಿಬ್ಚಾರ್,

[54] ಮಗ್ದೀಯೇಲ್ ಮತ್ತು ಇರಾಮ್ ಇವರೇ.

1 ಪೂರ್ವಕಾಲವೃತ್ತಾಂತ — Chapters