[1] ಆಮೇಲೆ ದಾವೀದನು ಮತ್ತು ಗುಡಾರದ ಸೇವೆ ಸಲ್ಲಿಸುತ್ತಿದ್ದ ಪ್ರಧಾನರು ಆಸಾಫ್ಯ, ಹೇಮಾನ್ಯ ಮತ್ತು ಯೆದುತೂನ್ಯರ ಮಕ್ಕಳನ್ನು ಸೇವೆ ಮಾಡುವುದಕ್ಕೋಸ್ಕರ ಆಯ್ಕೆಮಾಡಿದರು. ಇವರು ಕಿನ್ನರಿ, ಸ್ವರಮಂಡಲ, ತಾಳ, ಇವುಗಳನ್ನು ನುಡಿಸುತ್ತಾ, ಪ್ರವಾದಿಸುತ್ತ, ಗಾಯನಮಾಡುತ್ತಿದ್ದರು. ಆ ಸೇವೆಯನ್ನು ಮಾಡತಕ್ಕ ಪುರುಷರ ಪಟ್ಟಿ,
[2] ಆಸಾಫ್ಯರಲ್ಲಿ ಜಕ್ಕೂರ್, ಯೋಸೇಫ್, ನೆತನ್ಯ, ಅಶರೇಲ ಎಂಬವರು. ಇವರು ಅರಮನೆಯ ಗಾಯಕನಾದ ಆಸಾಫನ ಸಹಾಯಕರು.
[3] ಯೆದುತೂನ್ಯರಲ್ಲಿ ಗೆದಲ್ಯ, ಚೆರೀ, ಯೆಶಾಯ, ಶಿಮ್ಮೀ, ಹಷಬ್ಯ, ಮತ್ತಿತ್ಯ ಇವರೇ. ಕಿನ್ನರಿಯನ್ನು ನುಡಿಸುತ್ತಾ ಪರವಶರಾಗಿ ಯೆಹೋವನ ಕೀರ್ತನೆ ಮಾಡುವ ತಮ್ಮ ತಂದೆಯಾದ ಯೆದುತೂನ್ಯನಿಗೆ ಈ ಆರು ಜನರೂ ಸಹಾಯಕರಾಗಿದ್ದರು.
[4] ಹೇಮಾನ್ಯರಲ್ಲಿ ಬುಕ್ಕೀಯ, ಮತ್ತನ್ಯ, ಉಜ್ಜೀಯೇಲ್, ಶೆಬೂವೇಲ್, ಯೆರೀಮೋತ್, ಹನನ್ಯ, ಹನಾನೀ, ಎಲೀಯಾತ, ಗಿದ್ದಲ್ತಿ, ರೋಮಮ್ತಿಯೆಜೆರ್, ಯೊಷ್ಬೆಕಾಷ, ಮಲ್ಲೋತಿ, ಹೋತೀರ್ ಮತ್ತು ಮಹಜೀಯೋತ್.
[5] ಇವರೆಲ್ಲರು ಅರಸನ ದರ್ಶಿಯಾದ ಹೇಮಾನನ ಮಕ್ಕಳು. ದೇವರು ಹೇಮಾನನಿಗೆ, “ನೀನು ಅಭಿವೃದ್ಧಿ ಹೊಂದುವಹಾಗೆ ಮಾಡುವೆನು” ಎಂಬುದಾಗಿ ವಾಗ್ದಾನ ಮಾಡಿದ್ದನು. ಅದರಂತೆಯೇ ಆತನು ಅವನಿಗೆ ಹದಿನಾಲ್ಕು ಗಂಡುಮಕ್ಕಳನ್ನೂ, ಮೂರು ಹೆಣ್ಣುಮಕ್ಕಳನ್ನೂ ದಯಪಾಲಿಸಿದನು.
[6] ದೇವರಾದ ಯೆಹೋವನ ಆಲಯದಲ್ಲಿ ಆರಾಧನೆ ನಡೆಯುತ್ತಿರುವಾಗ ಇವರೆಲ್ಲರೂ ತಮ್ಮ ತಂದೆಯ ಕೈಕೆಳಗಿದ್ದುಕೊಂಡು ತಾಳ, ಸ್ವರಮಂಡಲ, ಕಿನ್ನರಿ ಇವುಗಳಿಂದ ಗಾಯನ ಮಾಡುತ್ತಿದ್ದರು. ಆಸಾಫ ಯೆದುತೂನ್ ಹೇಮಾನರು ಅರಸನ ಸೇವೆಯಲ್ಲಿದ್ದರು.
[7] ಇವರು ಯೆಹೋವನ ಕೀರ್ತನೆಗಳನ್ನು ಕಲಿತ ಇವರ ಸಹೋದರರು ಒಟ್ಟು ಇನ್ನೂರ ಎಂಭತ್ತೆಂಟು ಜನರು. ಇವರೆಲ್ಲರೂ ಗಾಯಕ ಪ್ರವೀಣರಾಗಿದ್ದರು.
[8] ಇವರಲ್ಲಿ ಹಿರಿಯರು, ಕಿರಿಯರು, ಗುರುಶಿಷ್ಯರೂ ಕೂಡಿಕೊಂಡು ಚೀಟಿನಿಂದ ತಮ್ಮ ಸೇವಾ ಕ್ರಮವನ್ನು ಗೊತ್ತುಮಾಡಿಕೊಂಡರು.
[9] ಚೀಟಿನ ಪ್ರಕಾರವಾಗಿ, ಮೊದಲನೆಯದಾಗಿ ಆಸಾಫ್ಯನಾದ ಯೋಸೇಫನು. ಎರಡನೆಯವನು ಗೆದಲ್ಯ. ಇವನೂ ಇವನ ಸಹೋದರರೂ, ಮಕ್ಕಳು ಒಟ್ಟು ಹನ್ನೆರಡು ಜನರು.
[10] ಮೂರನೆಯವನು ಜಕ್ಕೂರ್. ಇವನೂ, ಇವನ ಸಹೋದರರೂ ಮತ್ತು ಮಕ್ಕಳು ಒಟ್ಟು ಹನ್ನೆರಡು ಜನರು.
[11] ನಾಲ್ಕನೆಯವನು ಇಚ್ರೀ. ಇವನೂ, ಇವನ ಸಹೋದರರೂ ಮತ್ತು ಮಕ್ಕಳು ಒಟ್ಟು ಹನ್ನೆರಡು ಜನರು.
[12] ಐದನೆಯವನು ನೆತನ್ಯ. ಇವನೂ, ಇವನ ಸಹೋದರರೂ ಮತ್ತು ಮಕ್ಕಳು ಒಟ್ಟು ಹನ್ನೆರಡು ಜನರು.
[13] ಆರನೆಯವನು ಬುಕ್ಕೀಯ. ಇವನೂ, ಇವನ ಸಹೋದರರೂ ಮತ್ತು ಮಕ್ಕಳು ಒಟ್ಟು ಹನ್ನೆರಡು ಜನರು.
[14] ಏಳನೇಯವನು ಯೆಸರೇಲ. ಇವನೂ, ಇವನ ಸಹೋದರರೂ ಮತ್ತು ಮಕ್ಕಳು ಒಟ್ಟು ಹನ್ನೆರಡು ಜನರು.
[15] ಎಂಟನೆಯವನು ಯೆಶಾಯ. ಇವನೂ, ಇವನ ಸಹೋದರರೂ ಮತ್ತು ಮಕ್ಕಳು ಒಟ್ಟು ಹನ್ನೆರಡು ಜನರು.
[16] ಒಂಬತ್ತನೆಯದು ಮತ್ತನ್ಯ. ಇವನೂ, ಇವನ ಸಹೋದರರೂ ಮತ್ತು ಮಕ್ಕಳು ಒಟ್ಟು ಹನ್ನೆರಡು ಜನರು.
[17] ಹತ್ತನೆಯವನು ಶಿಮ್ಮೀ. ಇವನೂ, ಇವನ ಸಹೋದರರೂ ಮತ್ತು ಮಕ್ಕಳು ಒಟ್ಟು ಹನ್ನೆರಡು ಜನರು.
[18] ಹನ್ನೊಂದನೆಯವನು ಅಜರೇಲ್. ಇವನೂ, ಇವನ ಸಹೋದರರೂ ಮತ್ತು ಮಕ್ಕಳು ಒಟ್ಟು ಹನ್ನೆರಡು ಜನರು.
[19] ಹನ್ನೆರಡನೆಯವನು ಹಷಬ್ಯ. ಇವನೂ ಇವನ ಸಹೋದರರೂ ಮಕ್ಕಳು ಒಟ್ಟು ಹನ್ನೆರಡು ಜನರು.
[20] ಹದಿಮೂರನೆಯದು ಶೂಬಾಯೇಲ್. ಇವನೂ, ಇವನ ಸಹೋದರರೂ ಮತ್ತು ಮಕ್ಕಳು ಒಟ್ಟು ಹನ್ನೆರಡು ಜನರು.
[21] ಹದಿನಾಲ್ಕನೆಯವನು ಮತ್ತಿತ್ಯ. ಇವನೂ, ಇವನ ಸಹೋದರರೂ ಮತ್ತು ಮಕ್ಕಳೂ ಒಟ್ಟು ಹನ್ನೆರಡು ಜನರು.
[22] ಹದಿನೈದನೆಯವನು ಯೆರೆಮೋತ್. ಇವನೂ, ಇವನ ಸಹೋದರರೂ ಮತ್ತು ಮಕ್ಕಳು ಒಟ್ಟು ಹನ್ನೆರಡು ಜನರು.
[23] ಹದಿನಾರನೆಯವನು ಹನನ್ಯ. ಇವನೂ, ಇವನ ಸಹೋದರರೂ ಮತ್ತು ಮಕ್ಕಳು ಒಟ್ಟು ಹನ್ನೆರಡು ಜನರು.
[24] ಹದಿನೇಳನೆಯವನು ಯೊಷ್ಬೆಕಾಷ. ಇವನೂ, ಇವನ ಸಹೋದರರೂ ಮತ್ತು ಮಕ್ಕಳು ಒಟ್ಟು ಹನ್ನೆರಡು ಜನರು.
[25] ಹದಿನೆಂಟನೆಯವನು ಹನಾನೀ. ಇವನೂ, ಇವನ ಸಹೋದರರೂ ಮತ್ತು ಮಕ್ಕಳು ಒಟ್ಟು ಹನ್ನೆರಡು ಜನರು.
[26] ಹತ್ತೊಂಬತ್ತನೆಯವನು ಮಲ್ಲೋತಿ. ಇವನೂ, ಇವನ ಸಹೋದರರೂ ಮತ್ತು ಮಕ್ಕಳು ಒಟ್ಟು ಹನ್ನೆರಡು ಜನರು.
[27] ಇಪ್ಪತ್ತನೆಯವನು ಎಲೀಯಾತ. ಇವನೂ, ಇವನ ಸಹೋದರರೂ ಮತ್ತು ಮಕ್ಕಳು ಒಟ್ಟು ಹನ್ನೆರಡು ಜನರು.
[28] ಇಪ್ಪತ್ತೊಂದನೆಯವನು ಹೋತೀರ್. ಇವನೂ, ಇವನ ಸಹೋದರರೂ ಮತ್ತು ಮಕ್ಕಳು ಒಟ್ಟು ಹನ್ನೆರಡು ಜನರು.
[29] ಇಪ್ಪತ್ತೆರಡನೆಯವನು ಗಿದ್ದಲ್ತಿ. ಇವನೂ, ಇವನ ಸಹೋದರರೂ ಮತ್ತು ಮಕ್ಕಳು ಒಟ್ಟು ಹನ್ನೆರಡು ಜನರು.
[30] ಇಪ್ಪತ್ತಮೂರನೆಯವನು ಮಹಜೀಯೋತ್. ಇವನೂ, ಇವನ ಸಹೋದರರೂ ಮತ್ತು ಮಕ್ಕಳು ಒಟ್ಟು ಹನ್ನೆರಡು ಜನರು.
[31] ಇಪ್ಪತ್ತನಾಲ್ಕನೆಯವನು ರೋಮಮ್ತಿಯೆಜೆರ್. ಇವನೂ, ಇವನ ಸಹೋದರರೂ ಮತ್ತು ಮಕ್ಕಳು ಒಟ್ಟು ಹನ್ನೆರಡು ಜನರು.