Skip to content
Opens in a new window
Listen to this chapter • 5:16

[1] ಬೆನ್ಯಾಮೀನನ ಮಕ್ಕಳು: ಚೊಚ್ಚಲಮಗನಾದ ಬೆಳನನ್ನೂ, ಎರಡನೆಯವನಾದ ಅಷ್ಬೇಲನನ್ನೂ, ಮೂರನೆಯವನಾದ ಅಹ್ರಹನನ್ನೂ,

[2] ನಾಲ್ಕನೆಯವನಾದ ನೋಹನನ್ನೂ, ಐದನೆಯವನಾದ ರಾಫನನ್ನೂ ಪಡೆದನು.

[3] ಬೆಳನ ಪುತ್ರರು: ಅದ್ದಾರ್, ಗೇರ, ಅಬೀಹೂದ್,

[4] ಅಬೀಷೂವನು, ನಾಮಾನನು, ಅಹೋಹನು,

[5] ಗೇರನು, ಶೆಫುಫಾನನು, ಹೂರಾಮನು.

[6] ಏಹೂದನ ಪುತ್ರರು: ನಾಮಾನನು, ಅಹೀಯನು, ಗೇರನು. ಇವರೇ ಗಿಬೆಯ ನಿವಾಸಿಗಳ ಕುಟುಂಬಗಳಲ್ಲಿ ಯಜಮಾನರಾಗಿದ್ದರು. ಆದರೆ ಅವರನ್ನು ಮಾನಹತಿಗೆ ತೆಗೆದುಕೊಂಡು ಹೋದರು.

[7] ನಾಮಾನ್, ಅಹೀಯ, ಗೇರನನ್ನು ತೆಗೆದುಕೊಂಡು ಹೋದ ತರುವಾಯ, ಉಜ್ಜನನ್ನೂ, ಅಹೀಹೂದನನ್ನೂ ಪಡೆದನು.

[8] ಇದಲ್ಲದೆ ಅವನು ಅವರನ್ನು ಕಳುಹಿಸಿದ ತರುವಾಯ, ಶಹರಯಿಮನು ಮೋವಾಬಿನ ದೇಶದಲ್ಲಿ ಮಕ್ಕಳನ್ನು ಪಡೆದನು. ಹುಷೀಮಳೂ, ಬಾರಳೂ ಅವನಿಗೆ ಪತ್ನಿಯರಾಗಿದ್ದರು.

[9] ಇದಲ್ಲದೆ ಅವನು ತನ್ನ ಹೆಂಡತಿಯಾದ ಹೋದೆಷಳಿಂದ ಯೋವಾಬನನ್ನೂ, ಚಿಬ್ಯನನ್ನೂ, ಮೇಷನನ್ನೂ, ಮಲ್ಕಾಮನನ್ನೂ,

[10] ಯೆಯೂಚನನ್ನೂ, ಸಾಕ್ಯನನ್ನೂ, ಮಿರ್ಮನನ್ನೂ ಪಡೆದನು. ಅವನ ಮಕ್ಕಳಾದ ಇವರು ಕುಟುಂಬಗಳಲ್ಲಿ ಯಜಮಾನರಾಗಿದ್ದರು.

[11] ಹುಷೀಮಳಿಂದ ಅವನು ಅಬಿಟೂಬನನ್ನೂ, ಎಲ್ಪಾಲನನ್ನೂ ಪಡೆದನು.

[12] ಎಲ್ಪಾಲನ ಪುತ್ರರು: ಏಬೆರ್, ಮಿಷಾಮ್, ಶೆಮೆದ್. ಶೆಮೆದನು ಓನೋ, ಲೋದ್ ಎಂಬ ಪಟ್ಟಣಗಳನ್ನೂ, ಅವುಗಳಿಗೆ ಸೇರಿದ ಗ್ರಾಮಗಳನ್ನೂ ಕಟ್ಟಿಸಿದರು.

[13] ಇದಲ್ಲದೆ ಅವನು ಗತ್‌ನವರನ್ನು ಓಡಿಸಿಬಿಟ್ಟ ಅಯ್ಯಾಲೋನಿನ ನಿವಾಸಿಗಳ ಕುಟುಂಬಗಳಲ್ಲಿ ಬೆರೀಯ, ಶಮ ಯಜಮಾನರಾಗಿದ್ದರು.

[14] ಅಹಿಯೋ, ಶಾಷಕ್, ಯೆರೀಮೋತ್,

[15] ಜೆಬದ್ಯ, ಅರಾದ್, ಏದೆರ್,

[16] ಮೀಕಾಯೇಲ್, ಇಷ್ಪ, ಯೋಹ ಇವರು ಬೆರೀಯನ ಪುತ್ರರು.

[17] ಜೆಬದ್ಯ, ಮೆಷುಲ್ಲಾಮ್, ಹಿಜ್ಕೀ, ಹೆಬೆರ್,

[18] ಇಷ್ಮೆರೈ, ಇಜ್ಲೀಯ, ಯೋಬಾಬ್ ಇವರು ಎಲ್ಪಾಲನ ಪುತ್ರರು.

[19] ಶಿಮ್ಮಿಯ ಕುಮಾರರು: ಯಾಕೀಮ್, ಜಿಕ್ರಿ, ಜಬ್ದೀ,

[20] ಎಲೀಯೆನೈ, ಚಿಲ್ಲೆತೈ, ಎಲೀಯೇಲ್,

[21] ಅದಾಯಾ, ಬೆರಾಯ, ಶಿಮ್ರಾತ್.

[22] ಶಾಷಕನ ಪುತ್ರರು: ಇಷ್ಪಾನ್, ಏಬೆರ್, ಎಲೀಯೇಲ್,

[23] ಅಬ್ದೋನ್, ಜಿಕ್ರಿಯು, ಹಾನಾನ್,

[24] ಹನನ್ಯ, ಏಲಾಮ್, ಅನೆತೋತೀಯ,

[25] ಇಫ್ದೆಯಾಹ, ಪೆನೂಯೇಲ್.

[26] ಶಂಷೆರೈ, ಶೆಹರ್ಯ, ಅತಲ್ಯ,

[27] ಯಾರೆಷ್ಯ, ಎಲೀಯ, ಜಿಕ್ರಿ ಇವರು ಯೆರೋಹಾಮನ ಪುತ್ರರು.

[28] ಇವರೇ ಕುಟುಂಬಗಳಲ್ಲಿ ಯಜಮಾನರಾಗಿದ್ದು, ತಮ್ಮ ವಂಶಗಳ ಮುಖ್ಯಸ್ಥರಾಗಿ ಯೆರೂಸಲೇಮಿನಲ್ಲಿ ವಾಸವಾಗಿದ್ದರು.

[29] ಗಿಬ್ಯೋನನ ಮೂಲಪುರುಷನಾದ ಯೆಹಿಯೇಲನು ಗಿಬ್ಯೋನಿನಲ್ಲಿ ವಾಸವಾಗಿದ್ದನು. ಅವನ ಹೆಂಡತಿಯ ಹೆಸರು ಮಾಕಳು.

[30] ಅವನ ಚೊಚ್ಚಲ ಮಗನು ಅಬ್ದೋನನು ನಂತರ ಚೂರನು, ಕೀಷನು, ಬಾಳನು, ನೇರನು, ನಾದಾಬನು,

[31] ಗೆದೋರನು, ಅಹಿಯೋನು, ಜೆಕೆರನು.

[32] ಮಿಕ್ಲೋತನು ಶಿಮಾಹನನ್ನು ಪಡೆದನು. ಇವರೂ ಸಹ ಯೆರೂಸಲೇಮಿನಲ್ಲಿ ತಮ್ಮ ಸಹೋದರರ ಸಂಗಡ ವಾಸವಾಗಿದ್ದರು.

[33] ನೇರನು ಕೀಷನನ್ನು ಪಡೆದನು; ಕೀಷನು ಸೌಲನನ್ನು ಪಡೆದನು; ಸೌಲನ ಮಕ್ಕಳು ಯೋನಾತಾನ್, ಮಲ್ಕೀಷೂವ, ಅಬೀನಾದಾಬ್, ಎಷ್ಬಾಳ ಎಂಬವರು.

[34] ಯೋನಾತಾನನ ಮಗನು ಮೆರೀಬ್ಬಾಳನು; ಮೆರೀಬ್ಬಾಳನು ಮೀಕನನ್ನು ಪಡೆದನು.

[35] ಮೀಕನ ಪುತ್ರರು: ಪಿತೋನನು, ಮೇಲಕನು, ತರೇಯನು ಮತ್ತು ಆಹಾಜನು.

[36] ಆಹಾಜನು ಯೆಹೋವದ್ದಾಹನ ತಂದೆ. ಯೆಹೋವದ್ದಾಹನು ಆಲೆಮೆತನನ್ನೂ, ಅಜ್ಮಾವೆತನನ್ನೂ, ಜಿಮ್ರಿಯನ್ನೂ ಪಡೆದನು, ಜಿಮ್ರಿಯು ಮೋಚನನ್ನು ಪಡೆದನು.

[37] ಮೋಚನು ಬಿನ್ನನನ್ನು ಪಡೆದನು. ಅವನ ಮಗನು ರಾಫನು. ಅವನ ಮಗನು ಎಲ್ಲಾಸನು. ಅವನ ಮಗನು ಆಚೇಲನು.

[38] ಈ ಆಚೇಲನಿಗೆ ಆರು ಮಂದಿ ಪುತ್ರರಿದ್ದರು. ಅವರ ಹೆಸರುಗಳು ಅಜ್ರೀಕಾಮನು, ಬೋಕೆರೂ, ಇಷ್ಮಾಯೇಲನು, ಶೆಯರ್ಯನು, ಓಬದ್ಯನು, ಹಾನಾನನು, ಇವರೆಲ್ಲರು ಆಚೇಲನ ಪುತ್ರರು.

[39] ಅವನ ಸಹೋದರನಾದ ಏಷೆಕನ ಪುತ್ರರು: ಅವನ ಚೊಚ್ಚಲಮಗನಾದ ಉಲಾಮನು, ಎರಡನೆಯವನಾದ ಯೆಯೂಷನು, ಮೂರನೆಯವನಾದ ಎಲೀಫೆಲೆಟನು.

[40] ಈ ಉಲಾಮನ ಪುತ್ರರು ಬಿಲ್ಲುಗಾರರಾಗಿ ಯುದ್ಧದಲ್ಲಿ ಪರಾಕ್ರಮಶಾಲಿಗಳಾಗಿದ್ದರು. ಅವರಿಗೆ ಮಕ್ಕಳೂ, ಮೊಮ್ಮಕ್ಕಳೂ 150 ಮಂದಿ ಇದ್ದರು. ಇವರೆಲ್ಲರೂ ಬೆನ್ಯಾಮೀನನ ವಂಶಜರು.

1 ಪೂರ್ವಕಾಲ ವೃತ್ತಾಂತ — Chapters