Skip to content
Opens in a new window
Listen to this chapter • 9:23

[1] ಇಸ್ರಾಯೇಲನ ಪುತ್ರರು: ರೂಬೇನ್, ಸಿಮೆಯೋನ್, ಲೇವಿ, ಯೆಹೂದ, ಇಸ್ಸಾಕಾರ್, ಜೆಬುಲೂನ್,

[2] ದಾನ್, ಯೋಸೇಫ್, ಬೆನ್ಯಾಮೀನ್, ನಫ್ತಾಲಿ, ಗಾದ್ ಮತ್ತು ಆಶೇರ್.

[3] ಯೆಹೂದನ ಪುತ್ರರು: ಏರ್, ಓನಾನ್, ಶೇಲಹ. ಈ ಮೂವರು ಅವನಿಗೆ ಶೂನನ ಮಗಳಾದ ಕಾನಾನ್ ದೇಶದವಳಿಂದ ಹುಟ್ಟಿದರು. ಯೆಹೂದನ ಚೊಚ್ಚಲಮಗನಾದ ಏರನು ಯೆಹೋವ ದೇವರ ಸಮ್ಮುಖದಲ್ಲಿ ಕೆಟ್ಟವನಾದ್ದರಿಂದ, ದೇವರು ಅವನನ್ನು ಮರಣಕ್ಕೆ ಒಪ್ಪಿಸಿದರು.

[4] ಯೆಹೂದನ ಸೊಸೆ ತಾಮಾರಳು ಅವನಿಗೆ ಪೆರೆಚನನ್ನೂ, ಜೆರಹನನ್ನೂ ಹೆತ್ತಳು. ಯೆಹೂದನ ಪುತ್ರರೆಲ್ಲರೂ ಐದು ಮಂದಿ.

[5] ಪೆರೆಚನ ಪುತ್ರರು: ಹೆಚ್ರೋನ್, ಹಾಮೂಲ್.

[6] ಜೆರಹನ ಪುತ್ರರು: ಜಿಮ್ರಿ, ಏತಾನ್, ಹೇಮಾನ್, ಕಲ್ಕೋಲ್ ಮತ್ತು ದಾರಾ, ಒಟ್ಟು ಐದು ಮಂದಿ.

[7] ಕರ್ಮೀಯ ಪುತ್ರರು: ಮೀಸಲಾಗಿಟ್ಟಿದ್ದ ವಸ್ತುಗಳನ್ನು ಕದ್ದುಕೊಂಡು ಇಸ್ರಾಯೇಲರನ್ನು ಆಪತ್ತಿಗೆ ಗುರಿಪಡಿಸಿದ ಆಕಾನನು.

[8] ಏತಾನನ ಮಗನು ಅಜರ್ಯನು.

[9] ಹೆಚ್ರೋನನಿಗೆ ಹುಟ್ಟಿದ ಪುತ್ರರು: ಯೆರಹ್ಮೇಲ್, ರಾಮ್, ಕೆಲೂಬಾಯ್.

[10] ರಾಮನು ಅಮ್ಮೀನಾದಾಬನ ತಂದೆಯಾಗಿದ್ದನು. ಅಮ್ಮೀನಾದಾಬನು ಯೆಹೂದನ ಮಕ್ಕಳಿಗೆ ನಾಯಕನಾದ ನಹಶೋನನ ತಂದೆ.

[11] ನಹಶೋನನು ಸಲ್ಮನನ ತಂದೆಯಾಗಿದ್ದನು, ಸಲ್ಮನ ಬೋವಜನ ತಂದೆ,

[12] ಬೋವಜನು ಓಬೇದನ ತಂದೆ, ಓಬೇದನು ಇಷಯನ ತಂದೆ.

[13] ಇಷಯನು ತನ್ನ ಚೊಚ್ಚಲ ಮಗ ಎಲೀಯಾಬನನ್ನೂ, ಎರಡನೆಯವನಾದ ಅಬೀನಾದಾಬನನ್ನೂ, ಮೂರನೆಯವನಾದ ಶಿಮ್ಮನನ್ನೂ,

[14] ನಾಲ್ಕನೆಯವನಾದ ನೆತನೆಯೇಲನನ್ನೂ, ಐದನೆಯವನಾದ ರದ್ದೈನನ್ನೂ,

[15] ಆರನೆಯವನಾದ ಓಚೆಮನನ್ನೂ, ಏಳನೆಯವನಾದ ದಾವೀದನಿಗೆ ತಂದೆಯಾಗಿದ್ದನು.

[16] ಅವರ ಇಬ್ಬರು ಸಹೋದರಿಯರು ಚೆರೂಯಳು, ಅಬೀಗೈಲಳು. ಚೆರೂಯಳ ಮೂವರು ಮಕ್ಕಳು ಅಬೀಷೈ, ಯೋವಾಬ್, ಅಸಾಯೇಲ್.

[17] ಅಬೀಗೈಲಳು ಅಮಾಸನ ತಾಯಿ, ಅಮಾಸನ ತಂದೆಯು ಇಷ್ಮಾಯೇಲನ ವಂಶದ ಯೆತೆರನು.

[18] ಹೆಚ್ರೋನನ ಮಗನಾದ ಕಾಲೇಬನು ಅಜೂಬಳಿಂದಲೂ ಯೆರ್ಯೋತಳಿಂದಲೂ ಮಕ್ಕಳನ್ನು ಪಡೆದನು. ಇವಳ ಪುತ್ರರು: ಯೇಷೆರನು, ಶೋಬಾಬನು, ಅರ್ದೋನನು.

[19] ಅಜೂಬಳ ಮರಣದ ನಂತರ, ಕಾಲೇಬನು ಎಫ್ರಾತಳನ್ನು ಮದುವೆಯಾದನು. ಅವಳು ಅವನಿಗೆ ಹೂರನನ್ನು ಹೆತ್ತಳು.

[20] ಹೂರನು ಊರಿಯನ ತಂದೆ; ಊರಿಯನು ಬೆಚಲಯೇಲನ ತಂದೆ.

[21] ತರುವಾಯ ಹೆಚ್ರೋನನು ಅರವತ್ತು ವರ್ಷದವನಾಗಿರುವಾಗ ಗಿಲ್ಯಾದನ ತಂದೆಯಾದ ಮಾಕೀರನ ಮಗಳನ್ನು ಮದುವೆಯಾದನು. ಅವಳು ಅವನಿಗೆ ಸೆಗೂಬ ಎಂಬ ಮಗನನ್ನು ಹೆತ್ತಳು.

[22] ಸೆಗೂಬನು ಯಾಯೀರನ ತಂದೆ, ಇವನಿಗೆ ಗಿಲ್ಯಾದಿನ ದೇಶದಲ್ಲಿ ಇಪ್ಪತ್ತು ಮೂರು ಪಟ್ಟಣಗಳು ಇದ್ದವು.

[23] ಇವನಿಗೆ ಗಿಲ್ಯಾದಿನ ದೇಶದಲ್ಲಿ ಅರುವತ್ತು ಪಟ್ಟಣಗಳು ಇದ್ದವು. ಇದಲ್ಲದೆ ಅವನು ಗೆಷೂರ್ಯರನ್ನೂ, ಅರಾಮ್ಯರನ್ನೂ, ಯಾಯೀರನ ಪಟ್ಟಣಗಳನ್ನೂ, ಕೆನಾತ್ ಮತ್ತು ಅದರ ಪಟ್ಟಣಗಳನ್ನೂ, ಒಟ್ಟು ಅರವತ್ತು ಪಟ್ಟಣಗಳನ್ನು ಗೆದ್ದುಕೊಂಡನು. ಇವುಗಳೆಲ್ಲಾ ಗಿಲ್ಯಾದನ ತಂದೆಯಾದ ಮಾಕೀರನ ವಂಶದವರಿಗೆ ಇದ್ದವು.

[24] ಹೆಚ್ರೋನನು ಕಾಲೇಬ್ ಎಫ್ರಾತದಲ್ಲಿ ಸತ್ತ ತರುವಾಯ ಹೆಚ್ರೋನನ ಹೆಂಡತಿಯಾದ ಅಬೀಯಳು ಅವನಿಗೆ ಅಷ್ಹೂರನನ್ನು ಹೆತ್ತಳು. ಇವನು ತೆಕೋವನ ತಂದೆಯು.

[25] ಹೆಚ್ರೋನನ ಚೊಚ್ಚಲ ಮಗ ಯೆರಹ್ಮೇಲನ ಪುತ್ರರು: ಚೊಚ್ಚಲ ಮಗ ರಾಮ ಮತ್ತು ಬೂನ, ಓರೆನ, ಓಚೆಮ, ಅಹೀಯ.

[26] ಈ ಯೆರಹ್ಮೇಲನಿಗೆ ಮತ್ತೊಬ್ಬ ಹೆಂಡತಿ ಇದ್ದಳು. ಅವಳ ಹೆಸರು ಅಟಾರಳು; ಅವಳು ಓನಾಮನ ತಾಯಿ.

[27] ಯೆರಹ್ಮೇಲನ ಚೊಚ್ಚಲಮಗನಾದ ರಾಮನ ಪುತ್ರರು: ಮಾಚ್, ಯಾಮೀನ್, ಏಕೆರ್.

[28] ಓನಾಮನ ಪುತ್ರರು: ಶಮ್ಮಾಯ, ಯಾದ; ಶಮ್ಮಾಯನ ಪುತ್ರರು: ನಾದಾಬನು, ಅಬಿಷೂರನು.

[29] ಅಬಿಷೂರನ ಹೆಂಡತಿಯ ಹೆಸರು ಅಬೀಹೈಲ; ಅವಳು ಅವನಿಗೆ ಅಹ್ಬಾನನನ್ನೂ, ಮೋಲೀದನನ್ನೂ ಹೆತ್ತಳು.

[30] ನಾದಾಬನ ಪುತ್ರರು ಸೆಲೆದ್, ಅಪ್ಪಯಿಮ್; ಸೆಲೆದನು ಮಕ್ಕಳಿಲ್ಲದೆ ಸತ್ತನು.

[31] ಅಪ್ಪಯಿಮ್ ಇವನ ಪುತ್ರರು: ಇಷ್ಷೀಯು; ಇಷ್ಷೀಯನ ಮಗನು ಶೇಷಾನನು; ಶೇಷಾನನ ಮಗನು; ಅಹ್ಲಾಯಿಯನು;

[32] ಶಮ್ಮಾಯನ ಸಹೋದರನಾದ ಯಾದನ ಪುತ್ರರು: ಯೆತೆರನ ಮತ್ತು ಯೋನಾತಾನ್. ಯೆತೆರನು ಮಕ್ಕಳಿಲ್ಲದೆ ಸತ್ತನು;

[33] ಯೋನಾತಾನನ ಪುತ್ರರು: ಪೆಲೆತನು, ಜಾಜನು. ಇವರೇ ಯೆರಹ್ಮೇಲನ ವಂಶಜರು.

[34] ಶೇಷಾನನಿಗೆ ಪುತ್ರರಿರಲಿಲ್ಲ. ಪುತ್ರಿಯರಿದ್ದರು. ಶೇಷಾನನಿಗೆ ಯರ್ಹನೆಂಬ ಹೆಸರುಳ್ಳ ಈಜಿಪ್ಟಿನವನಾದ ಸೇವಕನಿದ್ದನು.

[35] ಶೇಷಾನನು ತನ್ನ ಪುತ್ರಿಯನ್ನು ತನ್ನ ಸೇವಕ ಯರ್ಹನಿಗೆ ಮದುವೆಮಾಡಿಕೊಟ್ಟನು. ಅವಳು ಅವನಿಗೆ ಅತ್ತೈಯನ್ನು ಹೆತ್ತಳು.

[36] ಅತ್ತೈ ನಾತಾನನ ತಂದೆ; ನಾತಾನನು ಜಾಬಾದನ ತಂದೆ.

[37] ಜಾಬಾದನು ಎಫ್ಲಾಲನನ್ನು ಪಡೆದನು; ಎಫ್ಲಾನನು ಓಬೇದನನ್ನು ಪಡೆದನು.

[38] ಓಬೇದನು ಯೇಹುವನ್ನು ಪಡೆದನು; ಯೇಹುವು ಅಜರ್ಯನನ್ನು ಪಡೆದನು.

[39] ಅಜರ್ಯನು ಹೆಲೆಚನನ್ನು ಪಡೆದನು; ಹೆಲೆಚನು ಎಲ್ಲಾಸನನ್ನು ಪಡೆದನು.

[40] ಎಲ್ಲಾಸನು ಸಿಸ್ಮೈಯನ್ನು ಪಡೆದನು; ಸಿಸ್ಮೈಯು ಶಲ್ಲೂಮನನ್ನು ಪಡೆದನು.

[41] ಶಲ್ಲೂಮನು ಯೆಕಮ್ಯಾಹನ ತಂದೆ; ಯೆಕಮ್ಯಾಹನು ಎಲೀಷಾಮನ ತಂದೆ.

[42] ಯೆರಹ್ಮೇಲನ ಸಹೋದರನಾದ ಕಾಲೇಬನ ಪುತ್ರರು: ಅವನ ಚೊಚ್ಚಲ ಮಗನು ಮೇಷನು; ಇವನು ಜೀಫ್ಯನಿಗೆ ತಂದೆಯಾಗಿದ್ದನು. ಹೆಬ್ರೋನನ ತಂದೆಯಾದ ಮಾರೇಷನಿಗೆ ಮಕ್ಕಳು ಜನಿಸಿದರು.

[43] ಹೆಬ್ರೋನನ ಪುತ್ರರು: ಕೋರಹನು, ತಪ್ಪೂಹನು, ರೆಕೆಮನು, ಶೆಮನು.

[44] ಶೆಮನು ರಹಮ್ಯನ ತಂದೆ ರಹಮ್ಯನು ಯೊರ್ಕೆಯಾಮನ ತಂದೆ. ರೆಕೆಮನು ಶಮ್ಮಾಯನನ್ನು ಪಡೆದನು.

[45] ಶಮ್ಮಾಯಿಯ ಮಗನು ಮಾವೋನ್ಯನು; ಈ ಮಾವೋನ್ಯನು ಬೇತ್ ಚೂರನಿಗೆ ತಂದೆಯಾಗಿದ್ದನು.

[46] ಕಾಲೇಬನ ಉಪಪತ್ನಿಯಾದ ಏಫಾಳು ಹಾರಾನ್, ಮೋಚ, ಗಾಜೇಜ ಎಂಬುವರನ್ನು ಹೆತ್ತಳು. ಹಾರಾನನು ಗಾಜೇಜನ ತಂದೆ.

[47] ಯಾದೈಯ ಪುತ್ರರು: ರೆಗೆಮ್, ಯೋತಾಮ್, ಗೇಷಾನ್, ಪೆಲಟ್, ಏಫ್, ಶಾಫ್.

[48] ಕಾಲೇಬನ ಇನ್ನೊಬ್ಬ ಉಪಪತ್ನಿಯಾದ ಮಾಕಳು ಶೇಬರ್, ತಿರ್ಹನ ಎಂಬುವರನ್ನು ಹೆತ್ತಳು.

[49] ಇವಳಲ್ಲಿ ಮದ್ಮನ್ನದವರ ಮೂಲಪುರುಷನಾದ ಶಾಫ್, ಮಕ್‌ಬೇನ ಮತ್ತು ಗಿಬೆಯ ಊರುಗಳವರ ಮೂಲಪುರುಷನಾದ ಶೆವ ಇವರು ಹುಟ್ಟಿದರು. ಕಾಲೇಬನ ಮಗಳು ಅಕ್ಸಾ.

[50] ಇನ್ನುಳಿದ ಕಾಲೇಬನ ವಂಶಜರು: ಕಾಲೇಬನಿಗೆ ಅವನ ಹೆಂಡತಿ ಎಫ್ರಾತಳಿಂದ ಜನಿಸಿದ ಚೊಚ್ಚಲ ಮಗನ ಹೆಸರು ಹೂರ್. ಹೂರನ ಮಗ ಶೋಬಾಲ್ ಕಿರ್ಯತ್ ಯಾರೀಮ್ ಪಟ್ಟಣವನ್ನೂ,

[51] ಅವನ ಇನ್ನೊಬ್ಬ ಮಗ ಸಲ್ಮ ಬೇತ್ಲೆಹೇಮನ್ನೂ, ಅವನ ಮೂರನೆಯ ಮಗ ಹಾರೇಫ್, ಬೇತ್ಗಾದೇರ್ ಪಟ್ಟಣವನ್ನೂ ಕಟ್ಟಿಸಿದರು.

[52] ಕಿರ್ಯತ್ ಯಾರೀಮ್ ಪಟ್ಟಣದ ಸ್ಥಾಪಕ ಶೋಬಾಲನು ಹಾರೋಯೆ ಜನರ, ಮಾನಹತಿಯರ ಅರ್ಧದಷ್ಟು ಜನರ,

[53] ಹಾಗೂ ಕಿರ್ಯತ್ ಯಾರೀಮನವರ ಗೋತ್ರಗಳು: ಯೆತೆರಿಯರು, ಪೂತ್ಯರು, ಶುಮಾತ್ಯರು, ಮಿಷ್ರಾಗ್ಯರು, ಇವರಿಂದ ಚೊರ್‍ರಾತ್ಯರೂ, ಎಷ್ಟಾವೋಲ್ಯರೂ ಹುಟ್ಟಿದರು.

[54] ಸಲ್ಮನ ವಂಶಜರು: ಬೇತ್ಲೆಹೇಮ್, ನೆಟೋಫಾ, ಅಟರೋತ್ ಬೇತ್ಯೋವಾಬ್ ಊರುಗಳವರೂ, ಚೊರ್ಗದಲ್ಲಿ ವಾಸಿಸುವ ಮಾನಹತಿಯರಲ್ಲಿ ಅರ್ಧ ಜನರೂ ಉತ್ಪತ್ತಿಯಾದರು.

[55] ಯಾಬೇಚಿನಲ್ಲಿ ವಾಸಿಸುವ ಬರಹಗಾರರ ಕುಟುಂಬದವರಾದ ತಿರ್ರಾತ್ಯರು, ಶಿಮೆಯಾತ್ಯರು, ಸೂಕಾತ್ಯರು ಇವರು ರೇಕಾಬನ ಮನೆಯವರ ಮೂಲ ಪುರುಷನಾಗಿರುವ ಹಮ್ಮತನಿಂದ ಉತ್ಪನ್ನರಾದ ಕೇನ್ಯರು.

1 ಪೂರ್ವಕಾಲ ವೃತ್ತಾಂತ — Chapters