[1] ಇದಲ್ಲದೆ ದಾವೀದನೂ, ಸೈನ್ಯಾಧಿಪತಿಗಳೂ ಆಸಾಫ್, ಹೇಮಾನ್, ಯೆದುತೂನ್; ಇವರ ಪುತ್ರರಲ್ಲಿ ಕಿನ್ನರಿಗಳಿಂದಲೂ, ವೀಣೆಗಳಿಂದಲೂ, ತಾಳಗಳಿಂದಲೂ ಪ್ರವಾದಿಸಲು ತಕ್ಕವರನ್ನು ಸೇವೆಗೆ ಪ್ರತ್ಯೇಕಿಸಿದರು. ಕೆಲಸದವರ ಲೆಕ್ಕವು ಅವರ ಸೇವೆಯ ಪ್ರಕಾರವಾಗಿತ್ತು.
[2] ಅವರು ಯಾರೆಂದರೆ: ಆಸಾಫನ ಪುತ್ರರಲ್ಲಿ ಜಕ್ಕೂರ್, ಯೋಸೇಫ, ನೆತನ್ಯ, ಅಶರೇಲ; ಇವರು ಆಸಾಫನ ಕೈಕೆಳಗೆ ಪ್ರವಾದಿಸಿದರು. ಇವರು ಅರಸನ ಮೇಲ್ವಿಚಾರಣೆಯಲ್ಲಿದ್ದರು.
[3] ಯೆದುತೂನನ ಪುತ್ರರಲ್ಲಿ ಗೆದಲ್ಯ, ಚೆರೀ, ಯೆಶಾಯ, ಶಿಮ್ಮೀ, ಹಷಬ್ಯ, ಮತ್ತಿತ್ಯ. ಈ ಆರು ಮಂದಿಯು ಯೆದುತೂನನ ಪುತ್ರರು. ತಮ್ಮ ತಂದೆ ಯೆದುತೂನನ ಕೈಕೆಳಗೆ ಕಿನ್ನರಿಗಳನ್ನು ಬಾರಿಸಿ, ಯೆಹೋವ ದೇವರನ್ನು ಕೊಂಡಾಡಿ, ಸ್ತುತಿಸಿ ಪ್ರವಾದಿಸುತ್ತಿದ್ದರು.
[4] ಹೇಮಾನನ ಪುತ್ರರಲ್ಲಿ ಬುಕ್ಕೀಯ, ಮತ್ತನ್ಯ, ಉಜ್ಜೀಯೇಲ್, ಶೆಬೂಯೇಲ್, ಯೆರೀಮೋತ್, ಹನನ್ಯ, ಹನಾನೀ, ಎಲೀಯಾತ್, ಗಿದ್ದಲ್ತಿ, ರೋಮಮ್ತಿಯೆಜೆರ್, ಯೊಷ್ಬೆಕಾಷ, ಮಲ್ಲೋತಿ, ಹೋತೀರ್, ಮಹಜೀಯೋತ್.
[5] ಇವರೆಲ್ಲರು ದೇವರ ಕಾರ್ಯಗಳಲ್ಲಿ ಕೊಂಬು ಊದುವ ಅರಸನ ದರ್ಶಿಯಾದ ಹೇಮಾನನ ಪುತ್ರರು. ದೇವರು ಹೇಮಾನನಿಗೆ ಹದಿನಾಲ್ಕು ಮಂದಿ ಪುತ್ರರನ್ನೂ, ಮೂರು ಮಂದಿ ಪುತ್ರಿಯರನ್ನೂ ಕೊಟ್ಟಿದ್ದರು.
[6] ಯೆಹೋವ ದೇವರ ಆಲಯದಲ್ಲಿ ಆರಾಧನೆ ನಡೆಯುತ್ತಿರುವಾಗ, ಇವರೆಲ್ಲರೂ ತಮ್ಮ ತಂದೆಯ ನೇತೃತ್ವದಲ್ಲಿ ತಾಳ, ಸ್ವರಮಂಡಲ, ಕಿನ್ನರಿ ಇವುಗಳಿಂದ ಗಾಯನ ಮಾಡುತ್ತಿದ್ದರು. ಹೀಗೆ ಆಸಾಫ್, ಯೆದುತೂನ್, ಹೇಮಾನರು ಅರಸನ ಸೇವೆಯಲ್ಲಿದ್ದರು.
[7] ಹೀಗೆಯೇ ಅವರ ಲೆಕ್ಕವೂ, ಯೆಹೋವ ದೇವರ ಹಾಡುಗಳಲ್ಲಿ ತರಬೇತುಪಡೆದ ಸಮಸ್ತ ಪ್ರವೀಣರ ಲೆಕ್ಕ, ತಮ್ಮ ಸಹೋದರರ ಸಹಿತವಾಗಿ ಇನ್ನೂರ ಎಂಬತ್ತೆಂಟು ಮಂದಿಯಾಗಿದ್ದರು.
[8] ಇದಲ್ಲದೆ ಹಿರಿಯರು ಕಿರಿಯರ ಹಾಗೆಯೂ, ಶಿಷ್ಯನು ಬೋಧಕನ ಹಾಗೆಯೂ ವರ್ಗಕ್ಕೆ ಎದುರಾಗಿ ವರ್ಗದವರು ಚೀಟುಗಳನ್ನು ಹಾಕಿದರು.
[9] ಆಸಾಫನಿಗೋಸ್ಕರ ಮೊದಲನೆಯ ಚೀಟು ಯೋಸೇಫನಿಗೆ ಬಂತು. ಎರಡನೆಯದು ಗೆದಲ್ಯನಿಗೆ; ಅವನೂ, ಅವನ ಸಹೋದರರೂ, ಅವನ ಪುತ್ರರೂ ಹನ್ನೆರಡು ಮಂದಿ.
[10] ಮೂರನೆಯದು ಜಕ್ಕೂರನಿಗೆ; ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ;
[11] ನಾಲ್ಕನೆಯದು ಇಚ್ರೀಗೆ; ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.
[12] ಐದನೆಯದು ನೆತನ್ಯನಿಗೆ; ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.
[13] ಆರನೆಯದು ಬುಕ್ಕೀಯನಿಗೆ; ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.
[14] ಏಳನೆಯದು ಯೆಸರೇಲನಿಗೆ; ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.
[15] ಎಂಟನೆಯದು ಯೆಶಾಯನಿಗೆ; ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.
[16] ಒಂಬತ್ತನೆಯವನು ಮತ್ತನ್ಯ; ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.
[17] ಹತ್ತನೆಯದು ಶಿಮ್ಮಿಗೆ; ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.
[18] ಹನ್ನೊಂದನೆಯದು ಅಜರಯೇಲನಿಗೆ; ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.
[19] ಹನ್ನೆರಡನೆಯದು ಹಷಬ್ಯನಿಗೆ; ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.
[20] ಹದಿಮೂರನೆಯದು ಶುಬಯೇಲನಿಗೆ; ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.
[21] ಹದಿನಾಲ್ಕನೆಯವನು ಮತ್ತಿತ್ಯ; ಇವನೂ, ಇವನ ಸಹೋದರರೂ, ಮಕ್ಕಳೂ ಕೂಡಿ ಹನ್ನೆರಡು ಮಂದಿ.
[22] ಹದಿನೈದನೆಯದು ಯೆರೆಮೋತನಿಗೆ; ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.
[23] ಹದಿನಾರನೆಯದು ಹನನ್ಯನಿಗೆ; ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.
[24] ಹದಿನೇಳನೆಯದು ಯೊಷ್ಬೆಕಾಷನಿಗೆ; ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.
[25] ಹದಿನೆಂಟನೆಯದು ಹನಾನೀಗೆ; ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.
[26] ಹತ್ತೊಂಬತ್ತನೆಯದು ಮಲ್ಲೋತಿಗೆ; ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.
[27] ಇಪ್ಪತ್ತನೆಯದು ಎಲಿಯಾತನಿಗೆ; ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.
[28] ಇಪ್ಪತ್ತೊಂದನೆಯದು ಹೋತೀರನಿಗೆ; ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.
[29] ಇಪ್ಪತ್ತೆರಡನೆಯದು ಗಿದ್ದಲ್ತಿಗೆ; ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.
[30] ಇಪ್ಪತ್ತಮೂರನೆಯದು ಮಹಜೀಯೋತನಿಗೆ; ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.
[31] ಇಪ್ಪತ್ತನಾಲ್ಕನೆಯದು ರೋಮಮ್ತಿಯೆಜೆರನಿಗೆ; ಅವನೂ, ಅವನ ಪುತ್ರರೂ, ಅವನ ಸಹೋದರರೂ ಹನ್ನೆರಡು ಮಂದಿ.