[1] ಲೇವಿಯ ಪುತ್ರರು: ಗೇರ್ಷೋನ್, ಕೊಹಾತ್, ಮೆರಾರೀ.
[2] ಕೊಹಾತನ ಪುತ್ರರು: ಅಮ್ರಾಮ್, ಇಚ್ಹಾರ್, ಹೆಬ್ರೋನ್, ಉಜ್ಜೀಯೇಲನು.
[3] ಅಮ್ರಾಮನ ಪುತ್ರರು: ಆರೋನನು, ಮೋಶೆಯು, ಮಿರ್ಯಾಮಳು. ಆರೋನನ ಪುತ್ರರು: ನಾದಾಬ್, ಅಬೀಹೂ, ಎಲಿಯಾಜರ್, ಈತಾಮಾರ್.
[4] ಎಲಿಯಾಜರನು ಫೀನೆಹಾಸನನ್ನು ಪಡೆದನು, ಫೀನೆಹಾಸನು ಅಬೀಷೂವನನ್ನು ಪಡೆದನು,
[5] ಅಬೀಷೂವನು ಬುಕ್ಕೀಯನನ್ನು ಪಡೆದನು, ಬುಕ್ಕೀಯನು ಉಜ್ಜೀಯನನ್ನು ಪಡೆದನು,
[6] ಉಜ್ಜೀಯನು ಜೆರಹ್ಯನನ್ನು ಪಡೆದನು, ಜೆರಹ್ಯನು ಮೆರಾಯೋತನನ್ನು ಪಡೆದನು,
[7] ಮೆರಾಯೋತನು ಅಮರ್ಯನನ್ನು ಪಡೆದನು, ಅಮರ್ಯನು ಅಹೀಟೂಬನನ್ನು ಪಡೆದನು,
[8] ಅಹೀಟೂಬನು ಚಾದೋಕನನ್ನು ಪಡೆದನು, ಚಾದೋಕನು ಅಹೀಮಾಚನನ್ನು ಪಡೆದನು,
[9] ಅಹೀಮಾಚನು ಅಜರ್ಯನನ್ನು ಪಡೆದನು, ಅಜರ್ಯನು ಯೋಹಾನಾನನನ್ನು ಪಡೆದನು;
[10] ಯೋಹಾನಾನನು ಅಜರ್ಯನನ್ನು ಪಡೆದನು. ಅಜರ್ಯನು ಯೆರೂಸಲೇಮಿನಲ್ಲಿ ಸೊಲೊಮೋನನು ಕಟ್ಟಿಸಿದ ದೇವಾಲಯದೊಳಗೆ ಯಾಜಕ ಸೇವೆ ಮಾಡುತ್ತಿದ್ದವನು.
[11] ಅಜರ್ಯನು ಅಮರ್ಯನನ್ನು ಪಡೆದನು, ಅಮರ್ಯನು ಅಹೀಟೂಬನನ್ನು ಪಡೆದನು,
[12] ಅಹೀಟೂಬನು ಚಾದೋಕನನ್ನು ಪಡೆದನು, ಚಾದೋಕನು ಶಲ್ಲೂಮನನ್ನು ಪಡೆದನು,
[13] ಶಲ್ಲೂಮನು ಹಿಲ್ಕೀಯನನ್ನು ಪಡೆದನು, ಹಿಲ್ಕೀಯನು ಅಜರ್ಯನನ್ನು ಪಡೆದನು,
[14] ಅಜರ್ಯನು ಸೆರಾಯನನ್ನು ಪಡೆದನು, ಸೆರಾಯನು ಯೆಹೋಚಾದಾಕನನ್ನು ಪಡೆದನು,
[15] ಯೆಹೋವ ದೇವರು ನೆಬೂಕದ್ನೆಚ್ಚರನ ಕೈಯಿಂದ ಯೆಹೂದ, ಯೆರೂಸಲೇಮಿನವರನ್ನು ಸೆರೆಯಾಗಿ ಒಯ್ದಾಗ ಯೆಹೋಚಾದಾಕನು ಸೆರೆಯಾಗಿ ಹೋದನು.
[16] ಲೇವಿಯ ಪುತ್ರರು: ಗೇರ್ಷೋಮ್, ಕೊಹಾತ್, ಮೆರಾರೀ ಎಂಬುವರು.
[17] ಗೇರ್ಷೋಮನ ಪುತ್ರರ ಹೆಸರುಗಳು: ಲಿಬ್ನೀ, ಶಿಮ್ಮೀ.
[18] ಕೊಹಾತನ ಪುತ್ರರು: ಅಮ್ರಾಮ್, ಇಚ್ಹಾರ್, ಹೆಬ್ರೋನ್, ಉಜ್ಜೀಯೇಲ್.
[19] ಮೆರಾರೀಯ ಪುತ್ರರು: ಮಹ್ಲೀ, ಮೂಷೀ. ಲೇವಿಯರ ಸಂತತಿಗಳು ತಮ್ಮ ಪಿತೃಗಳ ಪ್ರಕಾರವಾಗಿ:
[20] ಗೇರ್ಷೋಮಿನವರು: ಅವನ ಮಗ ಲಿಬ್ನೀ, ಅವನ ಮಗ ಯಹತ್, ಅವನ ಮಗ ಜಿಮ್ಮ,
[21] ಅವನ ಮಗ ಯೋವಾಹ, ಅವನ ಮಗ ಇದ್ದೋ, ಅವನ ಮಗನಾದ ಜೆರಹ, ಅವನ ಮಗ ಯೆವತ್ರೈ.
[22] ಕೊಹಾತನ ಪುತ್ರರು: ಅವನ ಮಗ ಅಮ್ಮೀನಾದಾಬ್, ಅವನ ಮಗ ಕೋರಹ, ಅವನ ಮಗ ಅಸ್ಸೀರ್,
[23] ಅವನ ಮಗ ಎಲ್ಕಾನಾ, ಅವನ ಮಗ ಎಬ್ಯಾಸಾಫ್, ಅವನ ಮಗ ಅಸ್ಸೀರ್,
[24] ಅವನ ಮಗ ತಹತ್, ಅವನ ಮಗ ಉರೀಯೇಲ್, ಅವನ ಮಗ ಉಜ್ಜೀಯ, ಅವನ ಮಗ ಸೌಲ್.
[25] ಎಲ್ಕಾನನ ವಂಶಜರು: ಅಮಾಸೈ, ಅಹಿಮೋತ್,
[26] ಅವನ ಮಗ ಎಲ್ಕಾನ, ಅವನ ಮಗ ಚೋಫೈ, ಅವನ ಮಗ ನಹತ್,
[27] ಅವನ ಮಗ ಎಲೀಯಾಬ್, ಅವನ ಮಗ ಯೆರೋಹಾಮ್, ಅವನ ಮಗ ಎಲ್ಕಾನ, ಅವನ ಮಗ ಸಮುಯೇಲ್.
[28] ಸಮುಯೇಲನ ಪುತ್ರರು: ಚೊಚ್ಚಲ ಮಗ ವಷ್ಣಿ ಎಂಬ ಯೋಯೇಲ್ ಮತ್ತು ಎರಡನೆಯ ಮಗ ಅಬೀಯ.
[29] ಮೆರಾರೀಯ ವಂಶಜರು: ಮಹ್ಲೀ, ಅವನ ಮಗ ಲಿಬ್ನೀ, ಅವನ ಮಗ ಶಿಮ್ಮಿ; ಅವನ ಮಗ ಉಜ್ಜ,
[30] ಅವನ ಮಗ ಶಿಮ್ಮಾ, ಅವನ ಮಗ ಹಗ್ಗೀಯ, ಅವನ ಮಗ ಅಸಾಯ.
[31] ಮಂಜೂಷವನ್ನು ನೆಲೆಗೊಳಿಸಿದ ತರುವಾಯ ದಾವೀದನು ಯೆಹೋವ ದೇವರ ಮನೆಯಲ್ಲಿ ವಾದ್ಯಗಾರರನ್ನು ನೇಮಿಸಿದನು.
[32] ಸೊಲೊಮೋನನು ಯೆರೂಸಲೇಮಿನಲ್ಲಿ ಯೆಹೋವ ದೇವರ ಆಲಯವನ್ನು ಕಟ್ಟುವವರೆಗೆ, ಈ ವಾದ್ಯಗಾರರು ಸಭೆಯ ಗುಡಾರದ ನಿವಾಸದ ಮುಂದೆ ಸೇವಿಸುತ್ತಾ ಇದ್ದರು. ಆಗ ಅವರು ತಮ್ಮ ಸೇವೆಯಲ್ಲಿ ಕ್ರಮದ ಪ್ರಕಾರ ಕಾಯುತ್ತಿದ್ದರು.
[33] ಸೇವೆಗೆ ಆಯ್ಕೆಯಾದ ವ್ಯಕ್ತಿಗಳು ಮತ್ತು ಅವರ ಪುತ್ರರ ಹೆಸರುಗಳು ಹೀಗಿವೆ: ಕೊಹಾತ್ಯರ ಮಕ್ಕಳಲ್ಲಿ ಸಂಗೀತಗಾರನಾದ ಹೇಮಾನನು. ಅವನು ಯೋಯೇಲನ ಮಗನು, ಅವನು ಸಮುಯೇಲನ ಮಗನು,
[34] ಅವನು ಎಲ್ಕಾನನ ಮಗನು, ಅವನು ಯೆರೋಹಾಮನ ಮಗನು, ಅವನು ಎಲೀಯೇಲನ ಮಗನು, ಅವನು ತೋಹನ ಮಗನು,
[35] ಅವನು ಚೂಫನ ಮಗನು, ಅವನು ಎಲ್ಕಾನನ ಮಗನು, ಅವನು ಮಹತನ ಮಗನು, ಅವನು ಅಮಾಸೈಯ ಮಗನು,
[36] ಅವನು ಎಲ್ಕಾನನ ಮಗನು, ಅವನು ಯೋಯೇಲನ ಮಗನು, ಅವನು ಅಜರ್ಯನ ಮಗನು, ಅವನು ಚೆಫನ್ಯನ ಮಗನು,
[37] ಅವನು ತಹತನ ಮಗನು, ಅವನು ಅಸ್ಸೀರನ ಮಗನು, ಅವನು ಎಬ್ಯಾಸಾಫನ ಮಗನು, ಅವನು ಕೋರಹನ ಮಗನು,
[38] ಅವನು ಇಚ್ಹಾರನ ಮಗನು, ಅವನು ಕೊಹಾತನ ಮಗನು, ಅವನು ಲೇವಿಯನ ಮಗನು, ಅವನು ಇಸ್ರಾಯೇಲನ ಮಗನು.
[39] ಹೇಮಾನನ ಬಲಗಡೆಯಲ್ಲಿ ನಿಲ್ಲುತ್ತಿದ್ದ ಅವನ ಸಹೋದರನಾದ ಆಸಾಫನು ಜೊತೆಸೇವಕನಾಗಿದ್ದನು. ಈ ಆಸಾಫನು ಬೆರೆಕ್ಯನ ಮಗನು, ಅವನು ಶಿಮ್ಮನ ಮಗನು.
[40] ಅವನು ಮೀಕಾಯೇಲನ ಮಗನು, ಅವನು ಬಾಸೇಯನ ಮಗನು, ಅವನು ಮಲ್ಕೀಯನ ಮಗನು,
[41] ಅವನು ಎತ್ನಿಯ ಮಗನು, ಅವನು ಜೆರಹನ ಮಗನು, ಅವನು ಅದಾಯನ ಮಗನು,
[42] ಅವನು ಏತಾನನ ಮಗನು, ಅವನು ಜಿಮ್ಮನ ಮಗನು, ಅವನು ಶಿಮ್ಮಿಯ ಮಗನು,
[43] ಅವನು ಯಹತನ ಮಗನು, ಅವನು ಗೇರ್ಷೋಮನ ಮಗನು, ಅವನು ಲೇವಿಯ ಮಗನು.
[44] ಅವರ ಸಹೋದ್ಯೋಗಿ ಮೆರಾರೀಯ ಪುತ್ರರು ಎಡಗಡೆಯಲ್ಲಿ ನಿಂತಿದ್ದರು. ಏತಾನನು ಕೀಷೀಯ ಮಗನು, ಅವನು ಅಬ್ದೀಯ ಮಗನು, ಅವನು ಮಲ್ಲೂಕನ ಮಗನು,
[45] ಅವನು ಹಷಬ್ಯನ ಮಗನು, ಅವನು ಅಮಚ್ಯನ ಮಗನು, ಅವನು ಹಿಲ್ಕೀಯನ ಮಗನು,
[46] ಅವನು ಅಮ್ಚೀಯ ಮಗನು, ಅವನು ಬಾನೀಯ ಮಗನು, ಅವನು ಶೆಮೆರನ ಮಗನು,
[47] ಅವನು ಮಹ್ಲೀಯ ಮಗನು, ಅವನು ಮೂಷೀಯ ಮಗನು, ಅವನು ಮೆರಾರೀಯ ಮಗನು, ಅವನು ಲೇವಿಯ ಮಗನು.
[48] ಅವರ ಸಹೋದರರಾದ ಇತರ ಲೇವಿಯರು ದೇವರ ಮನೆಯ ಗುಡಾರದ ಸಮಸ್ತ ಸೇವೆಗೆ ನೇಮಕವಾಗಿದ್ದರು.
[49] ಆದರೆ ಆರೋನನೂ, ಅವನ ಪುತ್ರರೂ ದಹನಬಲಿಯ ಪೀಠದ ಮೇಲೆಯೂ, ಧೂಪವನ್ನು ಪೀಠದ ಮೇಲೆಯೂ ಅರ್ಪಿಸುತ್ತಿದ್ದರು. ದೇವರ ಸೇವಕನಾದ ಮೋಶೆ ಆಜ್ಞಾಪಿಸಿದ ಎಲ್ಲಾದರ ಪ್ರಕಾರ ಅವರು ಮಹಾಪರಿಶುದ್ಧ ಸ್ಥಳದ ಸಮಸ್ತ ಕಾರ್ಯಕ್ಕೂ, ಇಸ್ರಾಯೇಲಿಗೋಸ್ಕರ ಪ್ರಾಯಶ್ಚಿತ್ತ ಮಾಡುವುದಕ್ಕೂ ನೇಮಕವಾಗಿದ್ದರು.
[50] ಆರೋನನ ವಂಶಜರು: ಅವನ ಮಗನು ಎಲಿಯಾಜರನು, ಅವನ ಮಗನು ಫೀನೆಹಾಸನು, ಅವನ ಮಗನು ಅಬೀಷೂವನು,
[51] ಅವನ ಮಗನು ಬುಕ್ಕೀಯು, ಅವನ ಮಗನು ಉಜ್ಜೀ, ಅವನ ಮಗನು ಜೆರಹ್ಯಾಹನು,
[52] ಅವನ ಮಗನು ಮೆರಾಯೋತನು, ಅವನ ಮಗನು ಅಮರ್ಯನು, ಅವನ ಮಗನು ಅಹೀಟೂಬನು,
[53] ಅವನ ಮಗನು ಚಾದೋಕನು, ಅವನ ಮಗನು ಅಹೀಮಾಚನು.
[54] ಕೊಹಾತನ ಗೋತ್ರದ ಆರೋನನ ವಂಶಜರಿಗೆ ನೇಮಕವಾದ ಪ್ರಾಂತ್ಯ ಇದು: ಅವರಿಗೆಂದು ಪ್ರತ್ಯೇಕಿಸಿದ ಪ್ರದೇಶದ ಪ್ರಥಮ ಚೀಟಿನ ಪಾಲನ್ನು ಅವರು ಪಡೆದುಕೊಂಡರು.
[55] ಅವು ಯಾವುವೆಂದರೆ: ಕೊಹಾತ್ಯರ ಕುಟುಂಬಗಳಿಗೆ ಚೀಟು ಬಿದ್ದ ಪ್ರಕಾರ, ಯೆಹೂದ ದೇಶದಲ್ಲಿ ಹೆಬ್ರೋನ್ ಪಟ್ಟಣವೂ, ಅದರ ಸುತ್ತಲಿರುವ ಗೋಮಾಳಗಳೂ ಅವರಿಗೆ ದೊರೆತವು.
[56] ಆದರೆ ಆ ಪಟ್ಟಣದ ಹೊಲಗಳನ್ನೂ, ಅದರ ಗ್ರಾಮಗಳನ್ನೂ, ಯೆಫುನ್ನೆಯ ಮಗ ಕಾಲೇಬನಿಗೆ ಕೊಟ್ಟರು.
[57] ಯೆಹೂದದ ಕುಲಗಳಲ್ಲಿ ಆರೋನನ ಪುತ್ರರಿಗೆ ಕೊಟ್ಟ ಪಟ್ಟಣಗಳು ಯಾವುವೆಂದರೆ: ಆಶ್ರಯ ನಗರವಾದ ಹೆಬ್ರೋನ್, ಲಿಬ್ನವೂ, ಯತ್ತೀರೂ, ಎಷ್ಟೆಮೋವವೂ, ಅವುಗಳ ಉಪನಗರಗಳೂ;
[58] ಹೀಲೇನ್, ದೆಬೀರ್,
[59] ಆಷಾನ್, ಯುತಾಹ ಮತ್ತು ಬೇತ್ ಷೆಮೆಷ್ ಎಂಬ ಗೋಮಾಳ ಸಹಿತವಾದ ಪಟ್ಟಣಗಳು.
[60] ಬೆನ್ಯಾಮೀನನ ಗೋತ್ರದಿಂದ ಕೊಟ್ಟವುಗಳು, ಗಿಬ್ಯೋನ್, ಗೆಬಾ, ಆಲೆಮೆತೂ, ಅನಾತೋತೂ, ಅದರ ಗೋಮಾಳುಗಳು. ಇವರ ಕುಟುಂಬಗಳಿಗೆ ದೊರಕಿದ ಎಲ್ಲಾ ಪಟ್ಟಣಗಳು ಹದಿಮೂರು.
[61] ಆ ಗೋತ್ರದ ಕುಟುಂಬಗಳಲ್ಲಿ ಉಳಿದ ಕೊಹಾತನ ಪುತ್ರರಿಗೂ ಚೀಟುಹಾಕಿ ಮನಸ್ಸೆಯ ಅರ್ಧ ಗೋತ್ರದಿಂದ ಹತ್ತು ಪಟ್ಟಣಗಳು ದೊರೆತವು.
[62] ಗೇರ್ಷೋಮನ ಪುತ್ರರಿಗೆ ತಮ್ಮ ಕುಟುಂಬಗಳ ಪ್ರಕಾರವೇ ಇಸ್ಸಾಕಾರನ ಗೋತ್ರದಿಂದಲೂ, ಆಶೇರನ ಗೋತ್ರದಿಂದಲೂ, ನಫ್ತಾಲಿಯ ಗೋತ್ರದಿಂದಲೂ, ಬಾಷಾನಿನಲ್ಲಿರುವ ಮನಸ್ಸೆಯ ಗೋತ್ರದಿಂದಲೂ ಹದಿಮೂರು ಪಟ್ಟಣಗಳು ದೊರಕಿದ್ದವು.
[63] ಮೆರಾರೀಯ ಪುತ್ರರಿಗೂ ಅವರ ಕುಟುಂಬಗಳ ಪ್ರಕಾರ ಚೀಟುಹಾಕಿ, ರೂಬೇನನ ಗೋತ್ರದಿಂದಲೂ, ಗಾದನ ಗೋತ್ರದಿಂದಲೂ, ಜೆಬುಲೂನನ ಗೋತ್ರದಿಂದಲೂ ಹನ್ನೆರಡು ಪಟ್ಟಣಗಳು ದೊರಕಿದ್ದವು.
[64] ಇಸ್ರಾಯೇಲರು ಲೇವಿಯರಿಗೆ ಈ ಪಟ್ಟಣಗಳನ್ನೂ, ಅವುಗಳ ಉಪನಗರಗಳನ್ನೂ ಕೂಡಾ ಕೊಟ್ಟರು.
[65] ಅವರು ಚೀಟುಹಾಕಿ ಯೆಹೂದ ಸಿಮೆಯೋನ್ ಬೆನ್ಯಾಮೀನ್ ಕುಲಗಳಿಂದ ಮೇಲೆ ಹೆಸರು ಹೇಳಿದ ಪಟ್ಟಣಗಳನ್ನು ಕೊಟ್ಟರು.
[66] ಕೊಹಾತನ ಪುತ್ರರ ಮಿಕ್ಕಾದ ಕುಟುಂಬಗಳಿಗೂ, ಅವರ ಮೇರೆಗಳಲ್ಲಿ ಎಫ್ರಾಯೀಮನ ಗೋತ್ರದೊಳಗೆ ಪಟ್ಟಣಗಳು ದೊರೆತಿದ್ದವು.
[67] ಇದಲ್ಲದೆ ಎಫ್ರಾಯೀಮ್ ಬೆಟ್ಟದಲ್ಲಿರುವ ಶೆಕೆಮ್ ಎಂಬ ಆಶ್ರಯ ನಗರ, ಗೆಜೆರ್ ಮತ್ತು ಅದರ ಉಪನಗರಗಳನ್ನೂ,
[68] ಯೊಕ್ಮೆಯಾಮನ್ನೂ, ಬೇತ್ ಹೋರೋನ್,
[69] ಅಯ್ಯಾಲೋನ್, ಗತ್ ರಿಮ್ಮೋನನ್ನೂ, ಅದರ ಉಪನಗರಗಳನ್ನೂ ಕೊಟ್ಟರು.
[70] ಇದಲ್ಲದೆ ಕೊಹಾತನ ಪುತ್ರರ ಮಿಕ್ಕಾದ ಕುಟುಂಬಕ್ಕೋಸ್ಕರ ಮನಸ್ಸೆಯ ಅರ್ಧ ಗೋತ್ರದಿಂದ ಆನೇರನ್ನೂ, ಅದರ ಉಪನಗರಗಳನ್ನೂ; ಬಿಳ್ಳಾಮ್ ಉಪನಗರಗಳನ್ನೂ ಕೊಟ್ಟರು.
[71] ಮನಸ್ಸೆಯ ಅರ್ಧ ಗೋತ್ರದಿಂದ ಗೇರ್ಷೋಮನ ಪುತ್ರರಿಗೆ ಬಾಷಾನಿನಲ್ಲಿರುವ ಗೋಲಾನೂ, ಅದರ ಉಪನಗರಗಳನ್ನೂ; ಅಷ್ಟಾರೋತ್ ಅದರ ಉಪನಗರಗಳನ್ನೂ;
[72] ಇಸ್ಸಾಕಾರನ ಗೋತ್ರದಿಂದ ಕೆದೆಷ್, ಅದರ ಉಪನಗರಗಳನ್ನೂ; ದಾಬೆರತ್ ಅದರ ಉಪನಗರಗಳನ್ನೂ;
[73] ರಾಮೋತ್ ಅದರ ಉಪನಗರಗಳನ್ನೂ; ಅನೇಮ್, ಅದರ ಉಪನಗರಗಳನ್ನೂ;
[74] ಆಶೇರನ ಗೋತ್ರದಿಂದ ಮಷಾಲ್, ಅಬ್ದೋನ್
[75] ಹೂಕೋಕ್, ಅದರ ಉಪನಗರಗಳನ್ನೂ; ರೆಹೋಬ್, ಅದರ ಉಪನಗರಗಳನ್ನೂ;
[76] ನಫ್ತಾಲಿ ಗೋತ್ರದಿಂದ ಗಲಿಲಾಯದಲ್ಲಿರುವ ಕೆದೆಷ್, ಅದರ ಉಪನಗರಗಳನ್ನೂ; ಹಮ್ಮೋನ್, ಅದರ ಉಪನಗರಗಳನ್ನೂ; ಕಿರ್ಯಾತಯಿಮ್, ಅದರ ಉಪನಗರಗಳೂ ದೊರಕಿದ್ದವು.
[77] ಮೆರಾರೀಯ ಉಳಿದ ಮಕ್ಕಳಿಗೂ, ಜೆಬುಲೂನನ ಗೋತ್ರದಿಂದ ರಿಮ್ಮೋನೋ, ಅದರ ಉಪನಗರಗಳೂ, ತಾಬೋರ್, ಅದರ ಉಪನಗರಗಳೂ;
[78] ರೂಬೇನನ ಗೋತ್ರದಿಂದ ಯೆರಿಕೋವಿನ ಬಳಿಯಲ್ಲಿ ಯೊರ್ದನ್ ನದಿಯ ಪೂರ್ವದಿಕ್ಕಿನ ಮರುಭೂಮಿಯಲ್ಲಿರುವ ಬೆಚೆರ್, ಅದರ ಉಪನಗರಗಳೂ; ಯಹಚ, ಅದರ ಉಪನಗರಗಳೂ;
[79] ಕೆದೇಮೋತ್, ಮೇಫಾತ್ ಅದರ ಉಪನಗರಗಳೂ;
[80] ಗಾದನ ಗೋತ್ರದಿಂದ ಗಿಲ್ಯಾದಿನ ರಾಮೋತ್, ಅದರ ಉಪನಗರಗಳೂ; ಮಹನಯಿಮ್ ಅದರ ಉಪನಗರಗಳೂ;
[81] ಹೆಷ್ಬೋನ್, ಯಜ್ಜೇರ್ ಮತ್ತು ಅದರ ಉಪನಗರಗಳೂ ದೊರೆತವು.