Skip to content
Opens in a new window
Listen to this chapter • 8:11

[1] ಇಸ್ಸಾಕಾರನ ಪುತ್ರರು: ತೋಲ, ಪೂವ, ಯಾಶೂಬ್, ಶಿಮ್ರೋನ್ ಎಂಬ ನಾಲ್ಕು ಮಂದಿ.

[2] ತೋಲನ ಪುತ್ರರು: ಉಜ್ಜೀ, ರೆಫಾಯ, ಯೆರೀಯೇಲ್, ಯಹ್ಮೈ, ಇಬ್ಸಾಮ್ ಮತ್ತು ಸಮುಯೇಲ್. ಇವರು ತಮ್ಮ ಕುಟುಂಬಗಳಿಗೆ ಯಜಮಾನರಾಗಿದ್ದರು. ಇವರು ತಮ್ಮ ವಂಶಗಳಲ್ಲಿ ಯುದ್ಧದಲ್ಲಿ ಪರಾಕ್ರಮಶಾಲಿಗಳಾಗಿದ್ದರು. ದಾವೀದನ ದಿವಸಗಳಲ್ಲಿ ಅವರ ಲೆಕ್ಕ 22,600 ಮಂದಿ ಆಗಿತ್ತು.

[3] ಉಜ್ಜೀಯನ ಪುತ್ರನು ಇಜರಾಹಿಯಾ. ಇಜರಾಹಿಯಾನ ಪುತ್ರರು: ಮೀಕಾಯೇಲ್, ಓಬದ್ಯ, ಯೋಯೇಲ್ ಮತ್ತು ಇಷೀಯ ಈ ಐದು ಮಂದಿಯೂ ಮುಖ್ಯಸ್ಥರಾಗಿದ್ದರು.

[4] ಇವರ ಸಂಗಡ ಅವರ ವಂಶಗಳ ಪ್ರಕಾರವೂ, ಅವರ ಪಿತೃಗಳ ಮನೆಯ ಪ್ರಕಾರವೂ ಯುದ್ಧಕ್ಕೋಸ್ಕರ 36,000 ಮಂದಿ ಯುದ್ಧವೀರರ ಗುಂಪುಗಳಿದ್ದವು. ಏಕೆಂದರೆ ಅವರ ಹೆಂಡತಿಯರು, ಮಕ್ಕಳು ಬಹಳ ಮಂದಿ ಇದ್ದರು.

[5] ಇಸ್ಸಾಕಾರನ ಕುಟುಂಬಗಳಾಗಿರುವ ಸಹೋದರರೊಳಗೆ ಅವರ ವಂಶಾವಳಿಗಳಲ್ಲಿ ಲೆಕ್ಕಿಸಿದಾಗ ಯುದ್ಧವೀರರೆಲ್ಲರೂ 87,000 ಮಂದಿಯಾಗಿದ್ದರು.

[6] ಬೆನ್ಯಾಮೀನನ ಪುತ್ರರು: ಬೆಳ, ಬೆಕೆರ್, ಯೆದೀಯಯೇಲ್ ಈ ಮೂರು ಮಂದಿ.

[7] ಬೆಳನ ಪುತ್ರರು: ಎಚ್ಬೋನ್, ಉಜ್ಜೀ, ಉಜ್ಜೀಯೇಲ್, ಯೆರೀಮೋತ್ ಮತ್ತು ಈರೀ; ಈ ಐದು ಮಂದಿ ತಮ್ಮ ಪಿತೃಗಳ ಕುಟುಂಬಗಳಲ್ಲಿ ಯಜಮಾನರಾಗಿಯೂ, ಯುದ್ಧದಲ್ಲಿ ಪರಾಕ್ರಮಶಾಲಿಗಳಾಗಿಯೂ ಇದ್ದು, ತಮ್ಮ ವಂಶಾವಳಿಗಳ ಪ್ರಕಾರ 22,034 ಮಂದಿ ದಾಖಲಿಸಿದ್ದರು.

[8] ಬೆಕೆರನ ಪುತ್ರರು: ಜೆಮೀರ, ಯೋವಾಷ್, ಎಲೀಯೆಜೆರ್, ಎಲ್ಯೋವೇನೈ, ಒಮ್ರಿ, ಯೆರೀಮೋತ್, ಅಬೀಯ, ಅನಾತೋತ್, ಆಲೆಮೆತ್ ಇವರೆಲ್ಲರು ಬೆಕೆರನ ಪುತ್ರರು.

[9] ಪ್ರತಿಯೊಬ್ಬರೂ ಪೂರ್ವಜರ ಕುಲದ ನಾಯಕರಾಗಿದ್ದರು. ಅವರ ವಂಶಾವಳಿಯ ದಾಖಲೆಗಳಲ್ಲಿ ಪಟ್ಟಿ ಮಾಡಲಾಗಿರುವಂತೆ ಈ ಕುಲಗಳ ಪ್ರಬಲ ಯೋಧರು ಮತ್ತು ನಾಯಕರ ಒಟ್ಟು ಸಂಖ್ಯೆ 20,200 ಆಗಿತ್ತು.

[10] ಯೆದೀಯಯೇಲನ ಪುತ್ರನು ಬಿಲ್ಹಾನ್. ಬಿಲ್ಹಾನನ ಪುತ್ರರು: ಯೆಯೂಷ್, ಬೆನ್ಯಾಮೀನ್, ಏಹೂದ್, ಕೆನಾನ, ಜೇತಾನ್, ತಾರ್ಷೀಷ್ ಮತ್ತು ಅಹೀಷೆಹರ;

[11] ಇವರೆಲ್ಲರು ಯೆದೀಯಯೇಲನ ಪುತ್ರರು. ಪ್ರತಿಯೊಬ್ಬರೂ ಪೂರ್ವಜರ ಕುಲದ ನಾಯಕರಾಗಿದ್ದರು. ಯುದ್ಧದ ಪರಾಕ್ರಮಶಾಲಿಗಳಾಗಿಯೂ ಯುದ್ಧಕ್ಕೆ ಹೊರಡತಕ್ಕವರು 17,200 ಮಂದಿಯಾಗಿದ್ದರು.

[12] ಅಹೇರನ ಪುತ್ರರಾದ ಈರನೂ, ಹುಶೀಮನೂ ಎಂಬವರ ಮಕ್ಕಳು ಶುಪ್ಪೀಮನೂ, ಹುಪ್ಪೀಮನೂ ಇದ್ದರು.

[13] ನಫ್ತಾಲಿಯ ಪುತ್ರರು: ಯಹಚಿಯೇಲ್, ಗೂನೀ, ಯೇಚೆರ್, ಶಲ್ಲೂಮ್ ಇವರು ಬಿಲ್ಹಳ ಪುತ್ರರು.

[14] ಮನಸ್ಸೆಯ ವಂಶಜರು: ಅರಾಮ್ಯಳಾದ ಮನಸ್ಸೆಯ ಉಪಪತ್ನಿಯಿಂದ ಅಸ್ರೀಯೇಲ್ ಮತ್ತು ಮಾಕೀರನನ್ನು ಮನಸ್ಸೆ ಪಡೆದನು. ಮಾಕೀರನು ಗಿಲ್ಯಾದನ ತಂದೆ.

[15] ಆದರೆ ಈ ಮಾಕೀರನು ಹುಪ್ಪೀಮ್ ಮತ್ತು ಶುಪ್ಪೀಮರ ಸಹೋದರಿಯಾದ ಮಾಕಳನ್ನು ಹೆಂಡತಿಯಾಗಿ ತೆಗೆದುಕೊಂಡನು. ಅವನ ಮೊಮ್ಮಗನ ಹೆಸರು ಚೆಲೊಫಾದನು; ಈ ಚೆಲೋಫಾದನಿಗೆ ಪುತ್ರಿಯರು ಮಾತ್ರ ಇದ್ದರು.

[16] ಮಾಕೀರನ ಹೆಂಡತಿಯಾದ ಮಾಕಳು ಮಗನನ್ನು ಹೆತ್ತು, ಪೆರೆಷ್ ಎಂದು ಹೆಸರಿಟ್ಟಳು. ಅವನ ಸಹೋದರನ ಹೆಸರು ಶೆರೆಷ್. ಇವನಿಗೆ ಊಲಾಮ್, ರೆಕೆಮ್ ಎಂಬ ಇಬ್ಬರು ಪುತ್ರರಿದ್ದರು.

[17] ಊಲಾಮ್ ಮಗನು ಬೆದಾನ್. ಇವರೇ ಮನಸ್ಸೆಯ ಮಗನಾಗಿರುವ ಮಾಕೀರನ ಮಗ ಗಿಲ್ಯಾದನ ಪುತ್ರರು.

[18] ಅವನ ಸಹೋದರಿ ಹಮ್ಮೋಲೆಕೆತಳು ಈಷ್ಹೋದನನ್ನೂ, ಅಬೀಯೆಜೆರನನ್ನೂ, ಮಹ್ಲನನ್ನೂ ಹೆತ್ತಳು.

[19] ಶೆಮೀದನನ ಪುತ್ರರು: ಅಹ್ಯಾನ್, ಶೆಕೆಮ್, ಲಿಕ್ಹೀ, ಅನೀಯಾಮ್.

[20] ಎಫ್ರಾಯೀಮನ ವಂಶಜರು: ಶೂತೆಲಹ, ಅವನ ಮಗನು ಬೆರೆದ್; ಅವನ ಮಗನು ತಹಾತ್; ಅವನ ಮಗನು ಎಲ್ಲಾದ, ಅವನ ಮಗನು ತಹತ್;

[21] ಅವನ ಮಗನು ಜಾಬಾದ್; ಅವನ ಮಗನು ಶೂತೆಲಹ, ಏಜೆರ್, ಎಲಿಯಾದ್. ಆ ದೇಶದಲ್ಲಿ ಹುಟ್ಟಿದ ಗತ್‌ನವರು ಇವರ ಪಶುಗಳನ್ನು ಹಿಡಿದುಕೊಳ್ಳಲು ಇಳಿದು ಬಂದಾಗ, ಇವರನ್ನು ಕೊಂದುಹಾಕಿದರು.

[22] ಅವರ ತಂದೆಯಾದ ಎಫ್ರಾಯೀಮನು ಅನೇಕ ದಿವಸಗಳು ದುಃಖಪಟ್ಟದ್ದರಿಂದ, ಅವನ ಸಹೋದರರು ಅವನನ್ನು ಆದರಿಸಲು ಬಂದರು.

[23] ಅವನು ತನ್ನ ಹೆಂಡತಿಯ ಬಳಿಗೆ ಸೇರಿದಾಗ, ಅವಳು ಗರ್ಭಧರಿಸಿ ಮಗನನ್ನು ಹೆತ್ತಳು. ಆಗ ತನ್ನ ಮನೆಯಲ್ಲಿ ಕೇಡು ಉಂಟಾದದ್ದರಿಂದ ಅವನಿಗೆ ಬೆರೀಯ ಎಂದು ಹೆಸರಿಟ್ಟನು.

[24] ಇವನ ಪುತ್ರಿಯ ಹೆಸರು ಶೇರಳು. ಇವಳು ಕೆಳಗಿನ ಬೇತ್ ಹೋರೋನ್, ಮೇಲಿನ ಬೇತ್ ಹೋರೋನ್ ಮತ್ತು ಉಜ್ಜೇನ್ ಶೇರವನ್ನೂ ಕಟ್ಟಿಸಿದಳು.

[25] ಇವರ ಪುತ್ರರು: ರೆಫಹನ ಮಗನು ರೆಷೆಫನು, ರೆಷೆಫನ ಮಗನು ತೆಲಹನು, ಅವನ ಮಗನು ತಹನನು,

[26] ಅವನ ಮಗನು ಲದ್ದಾನ್, ಅವನ ಮಗನು ಅಮ್ಮೀಹೂದ, ಅವನ ಮಗನು ಎಲೀಷಾಮಾ,

[27] ಅವನ ಮಗನು ನೂನನು, ಅವನ ಮಗನು ಯೆಹೋಶುವ.

[28] ಅವರ ವಶಪಡಿಸಿಕೊಂಡು ನಿವಾಸಮಾಡಿದ ಬೇತೇಲೂ, ಅದರ ಗ್ರಾಮಗಳೂ ಪೂರ್ವದಿಕ್ಕಿನಲ್ಲಿ ನಾರಾನನೂ, ಪಶ್ಚಿಮ ದಿಕ್ಕಿನಲ್ಲಿ ಗೆಜೆರ್, ಅದರ ಗ್ರಾಮಗಳೂ ಒಳಗೊಂಡಿತ್ತು; ಶೆಕೆಮ್, ಅಯ್ಯಾ ಪಟ್ಟಣಗಳೂ ಅದರ ಗ್ರಾಮಗಳೂ ಇವೇ.

[29] ಗಾಜವೂ, ಮನಸ್ಸೆಯ ಸಂತಾನದವರ ಮೇರೆಯಲ್ಲಿರುವ ಬೇತ್ ಷೆಯಾನೂ, ತಾನಕವೂ, ಮೆಗಿದ್ದೋ, ದೋರ್ ಮತ್ತು ಇವುಗಳ ಗ್ರಾಮಗಳು ಇವುಗಳಲ್ಲಿ ಇಸ್ರಾಯೇಲನ ಮಗನಾದ ಯೋಸೇಫನ ಸಂತಾನದವರು ವಾಸವಾಗಿದ್ದರು.

[30] ಆಶೇರನ ಪುತ್ರರು: ಇಮ್ನ, ಇಷ್ವ, ಇಷ್ವೀ, ಬೆರೀಯ, ಅವರ ಸಹೋದರಿಯಾದ ಸೆರಹಳು.

[31] ಬೆರೀಯನ ಪುತ್ರರು: ಹೆಬೆರನು, ಮಲ್ಕೀಯೇಲ್ ಇವನು ಬಿರ್ಜಾಯಿತನ ತಂದೆಯು.

[32] ಹೆಬೆರನು ಯಫ್ಲೇಟನನ್ನೂ, ಶೋಮೇರನನ್ನೂ, ಹೋತಾಮನನ್ನೂ, ಅವರ ಸಹೋದರಿಯಾದ ಶೂವಳನ್ನೂ ಪಡೆದನು.

[33] ಯಫ್ಲೇಟನ ಪುತ್ರರು: ಪಾಸಕನು, ಬಿಮ್ಹಾಲನು, ಅಶ್ವಾತನು ಇವರೇ ಯಫ್ಲೇಟನ ಮಕ್ಕಳು.

[34] ಶೆಮೆರನ ಪುತ್ರರು: ಅಹೀಯು, ರೊಹ್ಗನು, ಹುಬ್ಬನು, ಅರಾಮ್.

[35] ಅವನ ಸಹೋದರನಾದ ಹೆಲೆಮನ ಪುತ್ರರು: ಚೋಫಹನು, ಇಮ್ನನು, ಶೇಲೆಷ್‌ನು, ಆಮಾಲನು.

[36] ಚೋಫಹನ ಪುತ್ರರು: ಸೂಹ, ಹರ್ನೆಫೆರ್, ಶೂಗಾಲ್, ಬೇರೀ, ಇಮ್ರ,

[37] ಬೆಚೆರ್, ಹೋದ್, ಶಮ್ಮ, ಶಿಲ್ಷ, ಇತ್ರಾನ್, ಬೇರನು.

[38] ಯೆತೆರನ ಪುತ್ರರು: ಯೆಫುನ್ನೆ, ಪಿಸ್ಪ, ಅರಾ.

[39] ಉಲ್ಲನ ಪುತ್ರರು: ಆರಹ, ಹನ್ನೀಯೇಲ್, ರಿಚ್ಯ.

[40] ಇವರೆಲ್ಲರು ಆಶೇರನ ಮಕ್ಕಳಾಗಿದ್ದು, ತಮ್ಮ ತಂದೆಯ ಕುಟುಂಬದಲ್ಲಿ ಯಜಮಾನರಾಗಿಯೂ, ಯುದ್ಧ ಪರಾಕ್ರಮಶಾಲಿಗಳಲ್ಲಿ ಮುಖ್ಯಸ್ಥರಾಗಿಯೂ, ಪ್ರಭುಗಳಲ್ಲಿ ಶ್ರೇಷ್ಠರಾಗಿಯೂ ಇದ್ದರು. ಅವರ ವಂಶಾವಳಿಯಲ್ಲಿ ದಾಖಲಿಸಿದ ಲೆಕ್ಕದ ಪ್ರಕಾರ ಯುದ್ಧಕ್ಕೆ ಸಿದ್ಧವಿರುವ 26,000 ಮಂದಿ ಇದ್ದರು.

1 ಪೂರ್ವಕಾಲ ವೃತ್ತಾಂತ — Chapters