Skip to content
Opens in a new window
Listen to this chapter • 7:13

[1] ದ್ವಾರಪಾಲಕರ ವರ್ಗಗಳು: ಕೋರಹಿಯರೊಳಗೆ: ಆಸಾಫನ ಪುತ್ರರಲ್ಲಿ ಒಬ್ಬನಾಗಿರುವ ಕೋರೆಯ ಮಗನಾದ ಮೆಷೆಲೆಮ್ಯನು.

[2] ಮೆಷೆಲೆಮ್ಯನ ಪುತ್ರರು: ಚೊಚ್ಚಲ ಮಗನು ಜೆಕರ್ಯನು; ಎರಡನೆಯವನು ಯೆದೀಯಯೇಲನು; ಮೂರನೆಯವನು ಜೆಬದ್ಯನು; ನಾಲ್ಕನೆಯವನು ಯತ್ನಿಯೇಲನು;

[3] ಐದನೆಯವನು ಏಲಾಮನು; ಆರನೆಯವನು ಯೆಹೋಹಾನಾನನು; ಏಳನೆಯವನು ಎಲಿಹೋಯೇನೈನು.

[4] ಓಬೇದ್ ಏದೋಮನ ಪುತ್ರರು: ಚೊಚ್ಚಲ ಮಗನು ಶೆಮಾಯ; ಎರಡನೆಯವನು ಯೆಹೋಜಾಬಾದ್; ಮೂರನೆಯವನು ಯೋವಾಹ; ನಾಲ್ಕನೆಯವನು ಸಾಕಾರ; ಐದನೆಯವನು ನೆತನೆಯೇಲ್;

[5] ಆರನೆಯವನು ಅಮ್ಮಿಯೇಲ್; ಏಳನೆಯವನು ಇಸ್ಸಾಕಾರ್ ಮತ್ತು ಎಂಟನೆಯವನು ಪೆಯುಲ್ಲೆತೈ. ಓಬೇದ್ ಎದೋಮನು ದೇವರ ಆಶೀರ್ವಾದಕ್ಕೆ ಪಾತ್ರನಾಗಿದ್ದನು.

[6] ಇದಲ್ಲದೆ ತನ್ನ ಮಗನಾದ ಶೆಮಾಯನಿಗೆ ತಮ್ಮ ತಂದೆಯ ಮನೆಯಲ್ಲಿ ಆಳುವ ಪುತ್ರರು ಹುಟ್ಟಿದರು, ಅವರು ಪರಾಕ್ರಮಶಾಲಿಗಳಾಗಿದ್ದರು.

[7] ಶೆಮಾಯನ ಪುತ್ರರು ಯಾರೆಂದರೆ: ಒತ್ನಿಯು, ರೆಫಾಯೇಲನು, ಓಬೇದನು, ಎಲ್ಜಾಬಾದನು; ಇವರ ಸಹೋದರರಾದ ಪರಾಕ್ರಮವುಳ್ಳ ಎಲೀಹುವು, ಸೆಮಕ್ಯನು.

[8] ಇವರೆಲ್ಲರು ಓಬೇದ್ ಏದೋಮನ ಪುತ್ರರು; ಇವರೂ, ತಮ್ಮ ಪುತ್ರರೂ, ತಮ್ಮ ಸಹೋದರರೂ ಸೇವೆಗೆ ಶಕ್ತಿಯುಳ್ಳ ಸ್ಥಿತಿವಂತರು; ಒಬೆದೆದೋಮನವರು ಅರವತ್ತೆರಡು ಮಂದಿಯಾಗಿದ್ದರು.

[9] ಮೆಷೆಲೆಮ್ಯನಿಗೆ ಬಲವುಳ್ಳ ಪುತ್ರರೂ, ಸಹೋದರರೂ ಹದಿನೆಂಟು ಮಂದಿಯಾಗಿದ್ದರು.

[10] ಇದಲ್ಲದೆ ಮೆರಾರೀಯ ಮಕ್ಕಳಲ್ಲಿರುವ ಹೋಸ ಎಂಬವನಿಗೆ ಮಕ್ಕಳಿದ್ದರು. ಮೊದಲನೆಯವನು ಶಿಮ್ರಿಯು; ಅವನು ಚೊಚ್ಚಲ ಮಗನಲ್ಲ; ಆದರೆ ಅವನ ತಂದೆ ಅವನನ್ನು ಮುಖ್ಯಸ್ಥನನ್ನಾಗಿ ಮಾಡಿದನು;

[11] ಎರಡನೆಯವನು ಹಿಲ್ಕೀಯನು; ಮೂರನೆಯವನು ಟೆಬಲ್ಯನು; ನಾಲ್ಕನೆಯವನು ಜಕರೀಯನು. ಹೋಸನ ಸಮಸ್ತ ಪುತ್ರರು ಮತ್ತು ಸಹೋದರರೂ ಹದಿಮೂರು ಮಂದಿಯಾಗಿದ್ದರು.

[12] ಇದರಲ್ಲಿ ದ್ವಾರಪಾಲಕರ ವರ್ಗಗಳು ಯೆಹೋವ ದೇವರ ಆಲಯದಲ್ಲಿ ಸೇವೆ ಮಾಡುವುದಕ್ಕೆ ವರ್ಗಕ್ಕೆದುರಾಗಿ ಮುಖ್ಯಸ್ಥರಲ್ಲಿ ವಿಭಾಗಿಸಲಾಗಿದ್ದವು.

[13] ಅವರು ಕಿರಿಯರು ಹಿರಿಯರ ಹಾಗೆ ತಮ್ಮ ಪಿತೃಗಳ ಮನೆಯ ಪ್ರಕಾರ ಬಾಗಿಲಿಂದ ಬಾಗಿಲಿಗೂ ಚೀಟುಗಳನ್ನು ಹಾಕಿದರು.

[14] ಪೂರ್ವದಿಕ್ಕಿನ ಭಾಗದ ಚೀಟು ಶೆಲೆಮ್ಯನಿಗೆ ಬಿತ್ತು. ಅವನ ಮಗ ಬುದ್ಧಿಯುಳ್ಳ ಆಲೋಚನೆಯವನಾಗಿರುವ ಜೆಕರ್ಯನಿಗೋಸ್ಕರ ಹಾಕಿದ ಚೀಟು ಉತ್ತರ ಭಾಗಕ್ಕೆ ಇತ್ತು.

[15] ಓಬೇದ್ ಏದೋಮನಿಗೆ ದಕ್ಷಿಣ ಭಾಗ ಬಂತು. ಅವನ ಪುತ್ರರಿಗೆ ಉಗ್ರಾಣ ಮನೆ ಬಂತು.

[16] ಶುಪ್ಪೀಮ್, ಹೋಸ ಎಂಬವರಿಗೆ ಪಶ್ಚಿಮದಲ್ಲಿರುವ ಶೆಲ್ಲೆಕೆತ್ ಎಂಬ ಬಾಗಿಲು ಬಂತು. ಅವು ಮೇಲಕ್ಕೆ ಹೋಗುವ ರಾಜಮಾರ್ಗದ ಬಳಿಯಲ್ಲಿ ಒಂದಕ್ಕೊಂದು ಎದುರಾಗಿ ವರ್ಗಗಳಿದ್ದವು.

[17] ಪೂರ್ವ ಕಡೆಯಾಗಿ ಆರು ಮಂದಿ ಲೇವಿಯರಿದ್ದರು. ಉತ್ತರ ಭಾಗವಾಗಿ ದಿನಕ್ಕೆ ನಾಲ್ಕು ಮಂದಿಯೂ, ದಕ್ಷಿಣ ಭಾಗವಾಗಿ ದಿನಕ್ಕೆ ನಾಲ್ಕು ಮಂದಿಯೂ ಉಗ್ರಾಣ ಮಂದಿರದ ಬಳಿಯಲ್ಲಿ ಇಬ್ಬರಿಬ್ಬರಾಗಿಯೂ,

[18] ಪಶ್ಚಿಮ ಭಾಗವಾದ ದೇವಾಲಯದ ಅಂಗಳಕ್ಕೆ ಹೋಗುವ ರಾಜಮಾರ್ಗದಲ್ಲಿ ನಾಲ್ಕು ಮಂದಿಯೂ, ದೇವಾಲಯದ ಅಂಗಳ ಬಳಿಯಲ್ಲಿ ಇಬ್ಬರೂ ಇದ್ದರು.

[19] ಕೋರಹೀಯರ ಪುತ್ರರಲ್ಲಿಯೂ, ಮೆರಾರೀಯ ಪುತ್ರರಲ್ಲಿಯೂ ವಿಭಾಗಿಸಿದ ದ್ವಾರಪಾಲಕರ ವರ್ಗಗಳು ಇವೆ.

[20] ಇದಲ್ಲದೆ ಲೇವಿಯರಲ್ಲಿ ಅಹೀಯನು ದೇವರ ಆಲಯದ ಬೊಕ್ಕಸದ ಮೇಲೆಯೂ, ಪ್ರತಿಷ್ಠಿತವಾದವುಗಳ ಬೊಕ್ಕಸಗಳ ಮೇಲೆಯೂ ಅಧಿಕಾರಿಯಾಗಿದ್ದನು.

[21] ಲದ್ದಾನನ ವಂಶಜರು: ಗೇರ್ಷೋನ್ಯನಾದ ಲದ್ದಾನನ ಪುತ್ರರು ಕುಟುಂಬಗಳ ಮುಖ್ಯಸ್ಥರಾಗಿದ್ದರು. ಈ ಗೇರ್ಷೋನ್ಯನಾದ ಲಡಾನನ ಮಗನು ಯೆಹೀಯೇಲನು.

[22] ಯೆಹೀಯೇಲನ ಪುತ್ರರು ಜೇತಾಮನು, ಅವನ ಸಹೋದರನಾದ ಯೋಯೇಲನು; ಇವರು ಯೆಹೋವ ದೇವರ ಆಲಯದ ಬೊಕ್ಕಸಗಳ ಮೇಲೆ ಇದ್ದರು.

[23] ಅಮ್ರಾಮಿಯರಲ್ಲಿಯೂ ಇಚ್ಹಾರರಲ್ಲಿಯೂ ಹೆಬ್ರೋನಿಯರಲ್ಲಿಯೂ ಉಜ್ಜೀಯೇಲರಲ್ಲಿಯೂ ಇವರ ಸಂತಾನದವರಲ್ಲಿ:

[24] ಮೋಶೆಯ ಮೊಮ್ಮಗನೂ, ಗೇರ್ಷೋಮನ ಮಗನೂ ಆಗಿರುವ ಶೆಬೂಯೇಲನು ಬೊಕ್ಕಸಗಳ ಮೇಲೆ ಅಧಿಕಾರಿಯಾಗಿದ್ದನು.

[25] ಇವನ ಸಹೋದರರು, ಎಲೀಯೆಜೆರನ ಮಗನು ರೆಹಬ್ಯನು, ಇವನ ಮಗನು ಯೆಶಾಯನು, ಇವನ ಮಗನು ಯೋರಾಮ, ಇವನ ಮಗನು ಜಿಕ್ರಿಯು, ಇವನ ಮಗನು ಶೆಲೋಮೋತನು.

[26] ಈ ಶೆಲೋಮೋತನೂ ಅವನ ಸಹೋದರರೂ ಅರಸನಾದ ದಾವೀದನೂ ಮುಖ್ಯಸ್ಥರಾದ ಪಿತೃಗಳೂ ಸೈನ್ಯಾಧಿಪತಿಗಳಾದ ಸಹಸ್ರಗಳ ಮೇಲೆಯೂ ಶತ್ರುಗಳ ಮೇಲೆಯೂ ಅಧಿಪತಿಗಳಾದವರೂ ಪ್ರತಿಷ್ಠೆ ಮಾಡಿದ ಪ್ರತಿಷ್ಠಿತವಾದವುಗಳ ಬೊಕ್ಕಸಗಳನ್ನು ಕಾಯುತ್ತಿದ್ದರು.

[27] ಅವರು ಯೆಹೋವ ದೇವರ ಆಲಯವನ್ನು ದುರಸ್ತಿಪಡಿಸುವುದಕ್ಕೆ ಯುದ್ಧಗಳಿಂದಲೂ, ಕೊಳ್ಳೆಯಿಂದಲೂ ಸಂಪಾದಿಸಿದವುಗಳನ್ನು ಪ್ರತಿಷ್ಠೆ ಮಾಡಿದರು.

[28] ಇದಲ್ಲದೆ ದರ್ಶಿಯಾದ ಸಮುಯೇಲನೂ, ಕೀಷನ ಮಗ ಸೌಲನೂ, ನೇರನ ಮಗ ಅಬ್ನೇರನೂ, ಚೆರೂಯಳ ಮಗ ಯೋವಾಬನೂ ಪ್ರತಿಷ್ಠೆ ಮಾಡಿದ್ದೆಲ್ಲವೂ ಮತ್ತು ಯಾರು ಪ್ರತಿಷ್ಠೆ ಮಾಡಿದ್ದರೋ, ಅದೆಲ್ಲವೂ ಶೆಲೋಮೋತನ ಕೈಕೆಳಗೂ, ಅವನ ಸಹೋದರರ ಕೈಕೆಳಗೂ ಇತ್ತು.

[29] ಇಚ್ಹಾರರಲ್ಲಿ ಕೆನನ್ಯನನ್ನು, ಅವನ ಪುತ್ರರನ್ನು ಪಾರುಪತ್ಯಗಾರರಿಗೋಸ್ಕರವೂ, ನ್ಯಾಯಾಧಿಪತಿಗಳಿಗೋಸ್ಕರವೂ ಇಸ್ರಾಯೇಲಿನ ಮೇಲೆ ಹೊರಗಿನ ಕಾರ್ಯಗಳನ್ನು ನೋಡಲು ನೇಮಿಸಲಾಗಿತ್ತು.

[30] ಹೆಬ್ರೋನಿಯರಲ್ಲಿ ಬಲವುಳ್ಳವರಾದ ಹಷಬ್ಯನೂ, ಅವನ ಸಹೋದರರೂ ಯೆಹೋವ ದೇವರ ಸಮಸ್ತ ಕಾರ್ಯಗಳಲ್ಲಿಯೂ, ಅರಸನ ಸೇವೆಯಲ್ಲಿಯೂ ಸಾವಿರದ ಏಳು ನೂರು ಮಂದಿ ಪಶ್ಚಿಮವಾಗಿ ಯೊರ್ದನ್ ನದಿ ಈಚೆಯಲ್ಲಿ ಇಸ್ರಾಯೇಲರೊಳಗೆ ಅಧಿಪತಿಗಳಾಗಿದ್ದರು.

[31] ಹೆಬ್ರೋನಿಯರಲ್ಲಿ ಯೆರೀಯನು ತನ್ನ ಪಿತೃಗಳ ಸಂತತಿಗಳ ಪ್ರಕಾರ ಹೆಬ್ರೋನ್ಯರಲ್ಲಿ ಮುಖ್ಯಸ್ಥನಾಗಿದ್ದನು. ಇವರು ದಾವೀದನ ಆಳಿಕೆಯ ನಲ್ವತ್ತನೆಯ ವರ್ಷದಲ್ಲಿ ಆಯ್ಕೆಯಾಗಿದ್ದರು. ಆಗ ಗಿಲ್ಯಾದಿನ ಯಜ್ಜೇರಿನಲ್ಲಿ ಅವರೊಳಗೆ ಬಲವುಳ್ಳ ಪರಾಕ್ರಮಶಾಲಿಗಳು ಸಿಕ್ಕಿದರು.

[32] ಇದಲ್ಲದೆ ಬಲವುಳ್ಳವರಾದ ಯೆರೀಯನ ಸಹೋದರರು ಎರಡು ಸಾವಿರದ ಏಳು ನೂರು ಮಂದಿ ಕುಟುಂಬಗಳ ಮುಖ್ಯಸ್ಥರಾಗಿದ್ದರು. ಅರಸನಾದ ದಾವೀದನು ಇವರನ್ನು ದೇವರ ಸಮಸ್ತ ಕಾರ್ಯಗಳ ನಿಮಿತ್ತವಾಗಿಯೂ ರೂಬೇನ್ಯರ ಮೇಲೆಯೂ, ಗಾದ್ಯರ ಮೇಲೆಯೂ, ಮನಸ್ಸೆಯ ಅರ್ಧ ಗೋತ್ರದ ಮೇಲೆಯೂ ಅಧಿಪತಿಗಳಾಗಿ ಮಾಡಿದನು.

1 ಪೂರ್ವಕಾಲ ವೃತ್ತಾಂತ — Chapters