Skip to content
Opens in a new window
Listen to this chapter • 8:08

[1] ಯೆಹೂದ ಗೋತ್ರಕ್ಕೆ ಅವರ ಕುಟುಂಬಗಳ ಪ್ರಕಾರ ವಿಭಾಗಿಸಿದ ಮೇರೆ ಯಾವುದೆಂದರೆ: ಕಟ್ಟಕಡೆಗಿರುವ ದಕ್ಷಿಣ ಕಡೆಗೆ ಎದೋಮಿನ ಮೇರೆಯಾದ ಚಿನ್ ಮರುಭೂಮಿಯ ದಕ್ಷಿಣ ಭಾಗ.

[2] ಲವಣ ಸಮುದ್ರದ ಕಡೆಯಲ್ಲಿ ದಕ್ಷಿಣ ಕಡೆಗಿರುವ ಕೊನೆಯಿಂದ,

[3] ಅಕ್ರಬ್ಬೀಮ್ ಎಂಬ ಕಣಿವೆಯ ದಕ್ಷಿಣಮಾರ್ಗವಾಗಿ ಚಿನಿಗೆ ಹೋಗುವದು. ಅಲ್ಲಿಂದ ದಕ್ಷಿಣದಲ್ಲಿರುವ ಕಾದೇಶ್ ಬರ್ನೇಯಕ್ಕೂ ಅಲ್ಲಿಂದ ಹೆಚ್ರೋನನಿಂದ ಅದ್ದಾರವರೆಗೂ ಮುಂದುವರೆದು ಅಲ್ಲಿ ತಿರಿಗಿಕೊಂಡು ಕರ್ಕದವರೆಗೂ ವಿಸ್ತರಿಸಿಕೊಂಡಿತ್ತು,

[4] ಅಲ್ಲಿಂದ ಈಜಿಪ್ಟನ ಅಚ್ಮೋನ ನದಿಗೆ ಬಂದು ಮೆಡಿಟೆರಿಯನ್ ಸಮುದ್ರದವರೆಗೆ ಹೋಗಿ ಸೇರುವುದು. ಇದೇ ಯೆಹೂದದ ದಕ್ಷಿಣ ಮೇರೆ.

[5] ಅದರ ಪೂರ್ವದ ಮೇರೆ, ಯೊರ್ದನ್ ನದಿ ಕೊನೆಯ ಮಟ್ಟಿಗಿರುವ ಲವಣ ಸಮುದ್ರವು. ಉತ್ತರ ಕಡೆಗೆ ಯೊರ್ದನ್ ನದಿ ಮೇರೆ ಕೊನೆ ಹತ್ತಿರ ಸಮುದ್ರದ ಮುಖದ್ವಾರದಿಂದ ಇತ್ತು;

[6] ಅಲ್ಲಿಂದ ಬೇತ್ ಹೊಗ್ಲಾಕ್ಕೂ, ಅಲ್ಲಿಂದ ಉತ್ತರಕ್ಕಿರುವ ಬೇತ್ ಅರಾಬನ್ನು ದಾಟಿ, ರೂಬೇನನ ಮಗ ಬೋಹನನ ಬಂಡೆಯ ವರೆಗೆ ಇತ್ತು.

[7] ಅಲ್ಲಿಂದ ಆಕೋರ್ ತಗ್ಗನ್ನು ಬಿಟ್ಟು ದೆಬೀರಿಗೂ ಉತ್ತರಕ್ಕೆ ನದಿಗೆ ತಿರುಗಿಕೊಂಡು ದಕ್ಷಿಣದಲ್ಲಿರುವ ಅದುಮೀಮಿನ ದಿಬ್ಬೆಗೆ ಎದುರಾಗಿರುವ ಗಿಲ್ಗಾಲಿಗೂ, ಅಲ್ಲಿಂದ ಏನ್ ಷೆಮೆಷ್ ಎಂಬ ಬುಗ್ಗೆಗೂ, ಅಲ್ಲಿಂದ ಏನ್ ರೋಗೆಲ್‌ವರೆಗೂ ಇತ್ತು.

[8] ಅಲ್ಲಿಂದ ಯೆಬೂಸಿಯರು ವಾಸವಾಗಿರುವ ಯೆರೂಸಲೇಮಿಗೆ ದಕ್ಷಿಣಮಾರ್ಗವಾಗಿ ಹಿನ್ನೋಮ್ ತಗ್ಗನ್ನು ದಾಟಿ, ಉತ್ತರಕ್ಕಿರುವ ರೆಫಾಯಿಮ್ ತಗ್ಗಿನ ಕಡೆಯಲ್ಲಿ ಪಶ್ಚಿಮಕ್ಕೆ ಬೆನ್ ಹಿನ್ನೋಮನ ತಗ್ಗಿನ ಮುಂದಿರುವ ಬೆಟ್ಟದ ಶಿಖರದವರೆಗೂ ಹೋಗುತ್ತದೆ.

[9] ಆ ಬೆಟ್ಟದ ಶಿಖರದಿಂದ ನೆಫ್ತೋಹದ ನೀರಿನ ಬುಗ್ಗೆಗೂ ಅಲ್ಲಿಂದ ಎಫ್ರೋನನ ಬೆಟ್ಟದ ಪಟ್ಟಣಗಳಿಗೂ ಅಲ್ಲಿಂದ ಕಿರ್ಯತ್ ಯಾರೀಮ್ ಆದ ಬಾಲಾ ಎಂಬ ಊರಿನವರೆಗೆ ಹೋಗುತ್ತದೆ.

[10] ಬಾಲಾದಿಂದ ಪಶ್ಚಿಮಕ್ಕಿರುವ ಸೇಯೀರ್ ಬೆಟ್ಟವನ್ನು ಸುತ್ತಿ, ಅಲ್ಲಿಂದ ಕೆಸಾಲೋನಿನ ಯಾರೀಮ್ ಬೆಟ್ಟದ ಉತ್ತರಕ್ಕೂ ಅಲ್ಲಿಂದ ಬೇತ್ ಷೆಮೆಷ್ ಕಡೆಗೆ ಇಳಿದು ತಿಮ್ನಾಗೆ ಹೋಯಿತು.

[11] ಅಲ್ಲಿಂದ ಉತ್ತರಕ್ಕಿರುವ ಎಕ್ರೋನಿನ ಗುಡ್ಡಕ್ಕೆ ಹೋಗಿ ಶಿಕ್ಕೆರೋನಿಗೂ, ಅಲ್ಲಿಂದ ಬಾಲಾ ಬೆಟ್ಟವನ್ನು ದಾಟಿ ಯಬ್ನೆಯೇಲಿಗೆ ಹೊರಟು ಸಮುದ್ರ ತೀರದಲ್ಲಿ ಮುಗಿಯುತ್ತದೆ.

[12] ಅದು ಪಶ್ಚಿಮದ ಮೇರೆಯ ಮೆಡಿಟರೇನಿಯನ್ ಮಹಾಸಾಗರವಾಗಿದೆ. ಇದೇ ಯೆಹೂದ ಗೋತ್ರದವರಿಗೆ ಅವರ ಕುಟುಂಬಗಳ ಪ್ರಕಾರ ಉಂಟಾದ ಸುತ್ತಲಿರುವ ಮೇರೆ.

[13] ಇದಲ್ಲದೆ ಯೆಹೋಶುವನು ಯೆಹೋವ ದೇವರ ಅಪ್ಪಣೆಯ ಪ್ರಕಾರ ಯೆಫುನ್ನೆಯ ಮಗ ಕಾಲೇಬನಿಗೆ ಅನಾಕನ ತಂದೆಯ ಕಿರ್ಯತ್ ಅರ್ಬ ಎಂಬ ಹೆಬ್ರೋನನ್ನು ಯೆಹೂದನ ಮಕ್ಕಳ ನಡುವೆ ಸೊತ್ತಾಗಿ ಕೊಟ್ಟನು.

[14] ಆಗ ಕಾಲೇಬನು ಅಲ್ಲಿಂದ ಅನಾಕನ ಮೂವರು ಮಕ್ಕಳಾದ ಶೇಷೈ, ಅಹೀಮನ್, ತಲ್ಮೈರನ್ನು ಹೊರಡಿಸಿಬಿಟ್ಟನು.

[15] ಕಾಲೇಬನು ಅಲ್ಲಿಂದ ಹೊರಟು, ಕಿರ್ಯತ್ ಸೇಫೆರ್ ಎಂದು ಅನ್ನಿಸಿಕೊಳ್ಳುತ್ತಿದ್ದ ದೆಬೀರಿನ ವಾಸಿಗಳ ವಿರೋಧವಾಗಿ ಹೋದನು.

[16] ಅಲ್ಲಿ ಕಾಲೇಬನು, “ಕಿರ್ಯತ್ ಸೇಫೆರನ್ನು ದಾಳಿಮಾಡಿ ತೆಗೆದುಕೊಳ್ಳುವವನಿಗೆ ನನ್ನ ಮಗಳಾದ ಅಕ್ಸಾ ಎಂಬಾಕೆಯನ್ನು ಮದುವೆ ಮಾಡಿಕೊಡುತ್ತೇನೆ,” ಎಂದು ಹೇಳಿದ್ದನು.

[17] ಆಗ ಕಾಲೇಬನ ತಮ್ಮನಾದ ಕೆನಾಜನ ಮಗನಾದ ಒತ್ನಿಯೇಲನು ಅದನ್ನು ಹಿಡಿದನು. ಅನಂತರ ಕಾಲೇಬನು ತನ್ನ ಮಗಳಾದ ಅಕ್ಸಾ ಎಂಬಾಕೆಯನ್ನು ಅವನಿಗೆ ಮದುವೆ ಮಾಡಿಕೊಟ್ಟನು.

[18] ಒಂದು ದಿನ ಅಕ್ಷಾ ಒತ್ನಿಯೇಲನೊಂದಿಗೆ ಬರುತ್ತಿರುವಾಗ ತನ್ನ ತಂದೆಯ ಹತ್ತಿರ ಇನ್ನೂ ಒಂದು ಹೊಲವನ್ನು ಕೇಳುವುದಕ್ಕೆ ಅವನನ್ನು ಪ್ರೇರೇಪಿಸಿ, ಕತ್ತೆಯ ಮೇಲಿನಿಂದ ಇಳಿದಳು. ಆಗ ಕಾಲೇಬನು ಅವಳಿಗೆ, “ನಿನಗೆ ಏನು ಬೇಕು?” ಎಂದನು.

[19] ಅದಕ್ಕೆ ಅವಳು ಅವನಿಗೆ, “ನನಗೆ ಒಂದು ಸಹಾಯಮಾಡಬೇಕು. ಮೊದಲು ದಕ್ಷಿಣ ಹೊಲವನ್ನು ಕೊಟ್ಟೆ; ನೀರಿನ ಬುಗ್ಗೆಗಳನ್ನು ಸಹ ನೀನು ನನಗೆ ಕೊಡು,” ಎಂದಳು. ಆಗ ಕಾಲೇಬನು ಅವಳಿಗೆ ಮೇಲಿನ ಹಾಗೂ ಕೆಳಗಿನ ನೀರಿನ ಬುಗ್ಗೆಗಳನ್ನು ಕೊಟ್ಟನು.

[20] ಯೆಹೂದ ಗೋತ್ರಕ್ಕೆ ಅವರ ಕುಟುಂಬಗಳ ಪ್ರಕಾರ ಉಂಟಾದ ಸೊತ್ತಿನ ವಿವರ:

[21] ದಕ್ಷಿಣದ ಕಟ್ಟಕಡೆಗಿರುವ ಎದೋಮಿನ ಮೇರೆಗೆ ಸರಿಯಾಗಿ ಯೆಹೂದ ಗೋತ್ರಕ್ಕೆ ಇರುವ ಪಟ್ಟಣಗಳು. ಅವು: ಕಬ್ಜಯೇಲ್, ಏದೆರ್, ಯಾಗೂರ್,

[22] ಕೀನಾ, ದೀಮೋನಾ, ಅದಾದಾ,

[23] ಕೆದೆಷ್, ಹಾಚೋರ್, ಇತ್ನಾನ್,

[24] ಜೀಫ್, ಟೆಲೆಮ್, ಬೆಯಾಲೋತ್,

[25] ಹಾಚೋರ್ ಹದತ್ತಾ, ಕಿರ್ಯೋತ್ ಹೆಚ್ರೋನ್, ಎಂಬುವ ಹಾಚೋರ್,

[26] ಅಮಾಮ್, ಶೆಮ, ಮೋಲಾದ,

[27] ಹಜರ್ ಗದ್ದಾ, ಹೆಷ್ಮೋನ್, ಬೇತ್ ಪೆಲೆಟ್,

[28] ಹಚರ್ ಷೂವಾಲ್, ಬೇರ್ಷೆಬ, ಬಿಜ್ಯೋತ್ಯಾ,

[29] ಬಾಲಾ, ಇಯೀಮ್, ಎಚೆಮ್,

[30] ಎಲ್ತೋಲದ್, ಕೆಸೀಲ್, ಹೊರ್ಮಾ,

[31] ಚಿಕ್ಲಗ್, ಮದ್ಮನ್ನಾ, ಸನ್ಸನ್ನಾ,

[32] ಲೆಬಾವೋತ್, ಶಿಲ್ಹೀಮ್, ಆಯಿನ್, ರಿಮ್ಮೋನ್ ಎಂಬವುಗಳೇ ಪಟ್ಟಣಗಳೆಲ್ಲಾ ಇಪ್ಪತ್ತೊಂಬತ್ತು ಮತ್ತು ಅವುಗಳ ಗ್ರಾಮಗಳು.

[33] ಪಶ್ಚಿಮದ ತಗ್ಗಿನ ದೇಶ ಎಷ್ಟಾವೋಲ್, ಚೊರ್ಗಾ, ಅಶ್ಣಾ,

[34] ಜಾನೋಹ, ಏಂಗನ್ನೀಮ್, ತಪ್ಪೂಹ, ಏನಾಮ್,

[35] ಯರ್ಮೂತ್, ಅದುಲ್ಲಾಮ್, ಸೋಕೋ, ಅಜೇಕಾ,

[36] ಶಾರಯಿಮ್, ಅದೀತಯಿಮ್, ಗೆದೇರಾ, ಗೆದೆರೋತಯಿಮ್ ಎಂಬ ಹದಿನಾಲ್ಕು ಪಟ್ಟಣಗಳು ಮತ್ತು ಅವುಗಳ ಗ್ರಾಮಗಳು.

[37] ಚೆನಾನ್, ಹದಾಷಾ, ಮಿಗ್ದಲ್ಗಾದ್,

[38] ದಿಲಾನ್, ಮಿಚ್ಪೆ, ಯೊಕ್ತೇಲ್,

[39] ಲಾಕೀಷ್, ಬೊಚ್ಕತ್, ಎಗ್ಲೋನ್,

[40] ಕಬ್ಬೋನ್, ಲಹ್ಮಾಸ್, ಕಿತ್ಲೀಷ್,

[41] ಗೆದೇರೋತ್, ಬೇತ್‌ದಾಗೋನ್, ನಾಮಾ, ಮಕ್ಕೇದಾ, ಎಂಬ ಹದಿನಾರು ಪಟ್ಟಣಗಳೂ ಅವುಗಳ ಗ್ರಾಮಗಳು.

[42] ಇದಲ್ಲದೆ ಲಿಬ್ನಾ, ಎತೆರ್, ಆಷಾನ್,

[43] ಇಪ್ತಾಹ, ಅಶ್ಣಾ, ನೆಜೀಬ್,

[44] ಕೆಯೀಲಾ, ಅಕ್ಜೀಬ್, ಮಾರೇಷಾ, ಎಂಬ ಒಂಬತ್ತು ಪಟ್ಟಣಗಳೂ ಅವುಗಳ ಗ್ರಾಮಗಳು.

[45] ಎಕ್ರೋನ್ ಅದರ ಪಟ್ಟಣಗಳು ಗ್ರಾಮಗಳು ಸಹ.

[46] ಎಕ್ರೋನಿನ ಪಶ್ಚಿಮ ಸಮುದ್ರದವರೆಗೆ ಅಷ್ಡೋದಿನ ಬಳಿಯಲ್ಲಿರುವ ಸಮಸ್ತ ಗ್ರಾಮಗಳು.

[47] ಅಷ್ಡೋದ್ ಪಟ್ಟಣ ಮತ್ತು ಅದರ ಸುತ್ತಲಿನ ಪಟ್ಟಣಗಳೂ ಗ್ರಾಮಗಳೂ, ಗಾಜಾ, ಅದರ ಪಟ್ಟಣಗಳು, ಅದರ ಗ್ರಾಮಗಳು. ಈಜಿಪ್ಟಿನ ಕಲ್ಲಿನ ನಾಲೆ, ಮೆಡಿಟೆರಿಯನ್ ಸಮುದ್ರ, ಅದರ ಮೇರೆ ಇವುಗಳವರೆಗೂ ಇತ್ತು.

[48] ಬೆಟ್ಟಗಳಲ್ಲಿರುವ ಪ್ರದೇಶಗಳು: ಶಾಮೀರ್, ಯತ್ತೀರ್, ಸೋಕೋ,

[49] ದನ್ನಾ, ದೆಬೀರ್ ಎಂಬ ಕಿರ್ಯತ್ ಸನ್ನಾ,

[50] ಅನಾಬ್, ಎಷ್ಟೆಮೋ, ಅನೀಮ್,

[51] ಗೋಷೆನ್, ಹೋಲೋನ್ ಮತ್ತು ಗಿಲೋ ಎಂಬ ಹನ್ನೊಂದು ಪಟ್ಟಣಗಳು ಅವುಗಳ ಗ್ರಾಮಗಳು.

[52] ಅರಬ್, ರೂಮಾ, ಎಷಾನ್,

[53] ಯಾನೂಮ್, ಬೇತ್ ತಪ್ಪೂಹ, ಅಫೇಕಾ,

[54] ಹುಮ್ಟಾ, ಹೆಬ್ರೋನೆಂಬ ಕಿರ್ಯತ್ ಅರ್ಬ, ಚೀಯೋರ್ ಎಂಬ ಒಂಬತ್ತು ಪಟ್ಟಣಗಳೂ ಮತ್ತು ಅವುಗಳ ಗ್ರಾಮಗಳು.

[55] ಮಾವೋನ್, ಕರ್ಮೆಲ್, ಜೀಫ್, ಯುಟ್ಟಾ,

[56] ಇಜ್ರೆಯೇಲ್, ಯೊಗ್ದೆಯಾಮ್, ಜಾನೋಹ,

[57] ಕಯಿನ್, ಗಿಬೆಯ, ತಿಮ್ನಾ ಎಂಬ ಹತ್ತು ಪಟ್ಟಣಗಳು, ಅವುಗಳ ಗ್ರಾಮಗಳು.

[58] ಹಲ್ಹೂಲ್, ಬೇತ್ ಚೂರ್, ಗೆದೋರ್,

[59] ಮಾರಾತ್, ಬೇತ್ ಅನೋತ್, ಎಲ್ಟೆಕೋನ್ ಎಂಬ ಆರು ಪಟ್ಟಣಗಳು, ಅವುಗಳ ಗ್ರಾಮಗಳು.

[60] ಕಿರ್ಯತ್ ಯಾರೀಮ್ ಎಂಬ ಕಿರ್ಯತ್ ಬಾಳ್, ರಬ್ಬಾ ಎಂಬ ಎರಡು ಪಟ್ಟಣಗಳು ಮತ್ತು ಅವುಗಳ ಗ್ರಾಮಗಳು.

[61] ಮರುಭೂಮಿಯಲ್ಲಿರುವ ಬೇತ್ ಅರಾಬಾ, ಮಿದ್ದೀನ್, ಸೆಕಾಕಾ,

[62] ನಿಬ್ಷಾನ್, ಉಪ್ಪಿನ ಪಟ್ಟಣವು ಮತ್ತು ಏನ್ಗೆದಿ ಎಂಬ ಪಟ್ಟಣಗಳನ್ನು ಒಳಗೊಂಡ ಆರು ಪಟ್ಟಣಗಳು ಅವುಗಳ ಗ್ರಾಮಗಳು.

[63] ಆದರೆ ಯೆರೂಸಲೇಮಿನಲ್ಲಿ ವಾಸವಾಗಿದ್ದ ಯೆಬೂಸಿಯರನ್ನು ಯೆಹೂದ ಗೋತ್ರದವರಿಂದ ಹೊರಡಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಈ ದಿವಸದವರೆಗೂ ಯೆಬೂಸಿಯರು ಯೆಹೂದ ಗೋತ್ರದವರ ಸಂಗಡ ಯೆರೂಸಲೇಮಿನಲ್ಲಿ ವಾಸವಾಗಿದ್ದಾರೆ.

ಯೆಹೋಶುವ — Chapters