[1] ನಾನು ಗೋಡೆಯನ್ನು ಪುನಃ ಕಟ್ಟಿಸಿ, ಬಾಗಿಲುಗಳನ್ನು ನಿಲ್ಲಿಸಿ, ತರುವಾಯ ಬಾಗಿಲು ಕಾಯುವವರನ್ನು, ಹಾಡುಗಾರರನ್ನು, ಲೇವಿಯರನ್ನು ನೇಮಿಸಿದೆನು.
[2] ಆಮೇಲೆ ನಾನು ನನ್ನ ಸಹೋದರನಾದ ಹನಾನೀ ಮತ್ತು ಅರಮನೆಯ ಅಧಿಪತಿಯಾದ ಹನನ್ಯ ಇವರಿಗೆ ಯೆರೂಸಲೇಮಿನ ಜವಾಬ್ದಾರಿಕೆಯನ್ನು ಒಪ್ಪಿಸಿದೆನು. ಏಕೆಂದರೆ ಇವನು ಸತ್ಯವಂತನಾಗಿಯೂ, ಅನೇಕರಿಗಿಂತ ಹೆಚ್ಚಾಗಿ ದೇವರಿಗೆ ಭಯಪಡುವವನಾಗಿಯೂ ಇದ್ದನು.
[3] ಆಗ ನಾನು ಅವರಿಗೆ, “ಬಿಸಿಲು ಏರುವುದಕ್ಕಿಂತ ಮೊದಲೇ ಯೆರೂಸಲೇಮಿನ ಬಾಗಿಲುಗಳನ್ನು ತೆರೆಯಬಾರದು. ಇದಲ್ಲದೆ ನೀವು ಸಮೀಪದಲ್ಲಿ ನಿಂತಿರುವಾಗ, ಕದಗಳನ್ನು ಮುಚ್ಚಿ ಅಗುಳಿಗಳನ್ನು ಹಾಕಿರಿ. ಯೆರೂಸಲೇಮಿನ ನಿವಾಸಿಗಳಲ್ಲಿ ಪ್ರತಿ ಮನುಷ್ಯನು ತನ್ನ ಮನೆಗೆ ಎದುರಾಗಿ ಕಾವಲಾಗಿರಲು ನೇಮಿಸಿರಿ,” ಎಂದು ಹೇಳಿದೆನು.
[4] ಪಟ್ಟಣವು ವಿಸ್ತಾರವಾಗಿಯೂ, ದೊಡ್ಡದಾಗಿಯೂ ಇತ್ತು. ಆದರೆ ಅದರಲ್ಲಿರುವ ಜನರು ಕೊಂಚವಾಗಿದ್ದರು. ಮನೆಗಳನ್ನು ಇನ್ನೂ ಕಟ್ಟಿರಲಿಲ್ಲ.
[5] ತರುವಾಯ ಅವರು ವಂಶಾವಳಿಯಿಂದ ಲೆಕ್ಕಿಸುವ ಹಾಗೆ ಶ್ರೇಷ್ಠರನ್ನೂ, ಅಧಿಕಾರಸ್ಥರನ್ನೂ, ಸಾಮಾನ್ಯ ಜನರನ್ನೂ ಸಭೆಯಾಗಿಸೇರಲು, ನನ್ನ ದೇವರು ನನ್ನ ಹೃದಯದಲ್ಲಿ ಪ್ರೇರೇಪಿಸಿದರು. ಆಗ ನಾನು ಮೊದಲು ಬಂದವರ ವಂಶಾವಳಿಯ ಪಟ್ಟಿಯನ್ನು ಕಂಡೆನು. ಅದರಲ್ಲಿ ಬರೆದದ್ದೇನೆಂದರೆ:
[6] ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನಿಂದ ಸೆರೆಯಾಗಿ ಹೋಗಿ, ಅನಂತರ ಬಂಧನದಿಂದ ಬಿಡುಗಡೆಯಾಗಿ ಯೆರೂಸಲೇಮಿಗೂ, ಯೆಹೂದಕ್ಕೂ, ತಮ್ಮ ತಮ್ಮ ಪಟ್ಟಣಗಳಿಗೂ
[7] ಜೆರುಬ್ಬಾಬೆಲನ ಸಂಗಡ ಹಿಂದಿರುಗಿದವರು ಯಾರೆಂದರೆ: ಯೇಷೂವ, ನೆಹೆಮೀಯ, ಅಜರ್ಯ, ರಗಮ್ಯ, ನಹಮಾನೀ, ಮೊರ್ದೆಕೈ, ಬಿಲ್ಷಾನ್, ಮಿಸ್ಪೆರೆತ್, ಬಿಗ್ವೈ, ನೆಹೂಮ್, ಬಾಣ. ಇಸ್ರಾಯೇಲ್ ಜನಾಂಗದ ಪುರುಷರ ಸಂಖ್ಯೆ:
[8] ಪರೋಷನ ವಂಶಜರು 2,172 ಮಂದಿ ಇದ್ದರು.
[9] ಶೆಫಟ್ಯನ ವಂಶಜರು 372 ಮಂದಿ ಇದ್ದರು.
[10] ಆರಹನ ವಂಶಜರು 652 ಮಂದಿ ಇದ್ದರು.
[11] ಯೇಷೂವ, ಯೋವಾಬ್ ಎಂಬವರ ಮಕ್ಕಳಲ್ಲಿ ಪಹತ್ ಮೋವಾಬನ ವಂಶಜರು 2,818 ಮಂದಿ ಇದ್ದರು.
[12] ಏಲಾಮನ ವಂಶಜರು 1,254 ಮಂದಿ ಇದ್ದರು.
[13] ಜತ್ತೂವಿನ ವಂಶಜರು 845 ಮಂದಿ ಇದ್ದರು.
[14] ಜಕ್ಕೈನ ವಂಶಜರು 760 ಮಂದಿ ಇದ್ದರು.
[15] ಬಿನ್ನೂಯನ ವಂಶಜರು 648 ಮಂದಿ ಇದ್ದರು.
[16] ಬೇಬೈನ ವಂಶಜರು 628 ಮಂದಿ ಇದ್ದರು.
[17] ಅಜ್ಗಾದನ ವಂಶಜರು 2,322 ಮಂದಿ ಇದ್ದರು.
[18] ಅದೋನೀಕಾಮಿನ ವಂಶಜರು 667 ಮಂದಿ ಇದ್ದರು.
[19] ಬಿಗ್ವೈ ವಂಶಜರು 2,067 ಮಂದಿ ಇದ್ದರು.
[20] ಅದೀನನ ವಂಶಜರು 655 ಮಂದಿ ಇದ್ದರು.
[21] ಹಿಜ್ಕೀಯನ ಮಗನಾದ ಆಟೇರ್ ವಂಶಜರು 98 ಮಂದಿ ಇದ್ದರು.
[22] ಹಾಷುಮನ ವಂಶಜರು 328 ಮಂದಿ ಇದ್ದರು.
[23] ಬೇಚೈಯ ವಂಶಜರು 324 ಮಂದಿ ಇದ್ದರು.
[24] ಹಾರೀಫನ ವಂಶಜರು 112 ಮಂದಿ ಇದ್ದರು.
[25] ಗಿಬ್ಯೋನನ ವಂಶಜರು 95 ಮಂದಿ ಇದ್ದರು.
[26] ಬೇತ್ಲೆಹೇಮಿನವರೂ ನೆಟೋಫದವರೂ 188 ಮಂದಿ ಇದ್ದರು.
[27] ಅನಾತೋತ್ ಊರಿನವರು 128 ಮಂದಿ ಇದ್ದರು.
[28] ಬೇತ್ ಅಜ್ಮಾವೆತಿನವರು 42 ಮಂದಿ ಇದ್ದರು.
[29] ಕಿರ್ಯತ್ ಯಾರೀಮ್, ಕೆಫೀರಾ, ಬೇರೋತ್ ಎಂಬ ಪಟ್ಟಣದವರು 743 ಮಂದಿ ಇದ್ದರು.
[30] ರಾಮಾ ಗೆಬ ಎಂಬ ಪಟ್ಟಣದವರು 621 ಮಂದಿ ಇದ್ದರು.
[31] ಮಿಕ್ಮಾಷದ ಜನರು 122 ಮಂದಿ ಇದ್ದರು.
[32] ಬೇತೇಲ್ ಮತ್ತು ಆಯಿ ಎಂಬ ಪಟ್ಟಣದವರು 123 ಮಂದಿ ಇದ್ದರು.
[33] ಮತ್ತೊಂದು ನೆಬೋ ಊರಿನವರು 52 ಮಂದಿ ಇದ್ದರು.
[34] ಮತ್ತೊಬ್ಬ ಏಲಾಮನ ವಂಶಜರು 1,254 ಮಂದಿ ಇದ್ದರು.
[35] ಹಾರಿಮನ ವಂಶಜರು 320 ಮಂದಿ ಇದ್ದರು.
[36] ಯೆರಿಕೋವಿನ ವಂಶಜರು 345 ಮಂದಿ ಇದ್ದರು.
[37] ಲೋದ್, ಹಾದೀದ್, ಓನೋ ಎಂಬ ಊರಿನ ಜನರು 721 ಮಂದಿ ಇದ್ದರು.
[38] ಸೆನಾಹನ ವಂಶಜರು 3,930 ಮಂದಿ ಇದ್ದರು.
[39] ಯಾಜಕರು: ಯೇಷೂವನ ಕುಟುಂಬದವರಾದ ಯೆದಾಯನ ವಂಶಜರು 973.
[40] ಇಮ್ಮೇರನ ವಂಶಜರು 1,052.
[41] ಪಷ್ಹೂರನ ವಂಶಜರು 1,247.
[42] ಹಾರಿಮನ ವಂಶಜರು 1,017.
[43] ಲೇವಿಯರು: ಹೋದವ್ಯನ ಸಂತತಿಯಾದ ಯೇಷೂವನ, ಕದ್ಮಿಯೇಲನ ವಂಶಜರು 74.
[44] ಹಾಡುಗಾರರು: ಆಸಾಫನ 148 ವಂಶಜರು.
[45] ದೇವಾಲಯದ ದ್ವಾರಪಾಲಕರಾದ, ಶಲ್ಲೂಮ್, ಆಟೇರ್, ಟಲ್ಮೋನ್, ಅಕ್ಕೂಬ್, ಹಟೀಟ, ಶೋಬೈ ಮುಂತಾದವರ ಮಕ್ಕಳು 138.
[46] ದೇವಾಲಯದ ಸೇವಕರು: ಜೀಹ, ಹಸೂಫ, ಟಬ್ಬಾವೋತ್,
[47] ಕೆರೋಸ್, ಸೀಯ, ಪದೋನ್,
[48] ಲೆಬಾನ, ಹಗಾಬ, ಶಲ್ಮೈ,
[49] ಹಾನಾನ್, ಗಿದ್ದೇಲ್, ಗಹರ್,
[50] ರೆವಾಯ, ರೆಚೀನ್, ನೆಕೋದ,
[51] ಗಜ್ಜಾಮ್, ಉಜ್ಜ, ಪಾಸೇಹ,
[52] ಬೇಸೈ, ಮೆಯನೀಮ್, ನೆಫೀಸೀಮ್,
[53] ಬಕ್ಬೂಕ್, ಹಕ್ಕೂಫ, ಹರ್ಹೂರ್,
[54] ಬಚ್ಲೂತ್, ಮೆಹೀದ, ಹರ್ಷ,
[55] ಬರ್ಕೋಸ್, ಸೀಸೆರ, ತೆಮಹ,
[56] ನೆಚೀಹ, ಹಟೀಫ, ಇವರ ವಂಶಜರು.
[57] ಸೊಲೊಮೋನನ ಸೇವಕರ ವಂಶಜರು: ಸೋಟೈ, ಸೋಫೆರೆತ್, ಪೆರೀದ,
[58] ಯಾಲ, ದರ್ಕೋನ್, ಗಿದ್ದೇಲ್,
[59] ಶೆಫಟ್ಯ, ಹಟ್ಟೀಲ್, ಪೋಕೆರೆತ್ ಹಚ್ಚೆಬಾಯೀಮ್, ಆಮೋನ್ ಮುಂತಾದವರ ಮಕ್ಕಳು.
[60] ದೇವಾಲಯದ ಸೇವಕರ ಹಾಗೂ ಸೊಲೊಮೋನನ ಸೇವಕರ ವಂಶಜರು ಒಟ್ಟು 392 ಮಂದಿ.
[61] ತೇಲ್ಮೆಲಹ, ತೇಲ್ಹರ್ಷ, ಕೆರೂಬ್, ಅದ್ದಾನ್, ಇಮ್ಮೇರ್ ಎಂಬ ಊರುಗಳಿಂದ ಹೊರಟುಬಂದವರಾಗಿದ್ದು, ತಮ್ಮ ಗೋತ್ರವಂಶಾವಳಿಗಳನ್ನು ತೋರಿಸಿ, ತಾವು ಇಸ್ರಾಯೇಲರೆಂಬುದನ್ನು ರುಜುಪಡಿಸಲಾಗದೇ ಇದ್ದವರು ಯಾರೆಂದರೆ:
[62] ದೆಲಾಯ, ಟೋಬೀಯ, ನೆಕೋದ ಇವರ ಸಂತಾನದವರು ಒಟ್ಟು 642 ಮಂದಿ.
[63] ಯಾಜಕರಲ್ಲಿ, ಹಬಯ್ಯ, ಹಕ್ಕೋಚ್, ಬರ್ಜಿಲ್ಲೈ ಇವರ ಸಂತಾನದವರು. ಈ ಬರ್ಜಿಲ್ಲೈ ಎಂಬವನು ಗಿಲ್ಯಾದ್ಯನಾದ ಬರ್ಜಿಲ್ಲೈಯನ ಪುತ್ರಿಯರಲ್ಲಿ ಒಬ್ಬಳನ್ನು ಮದುವೆಮಾಡಿಕೊಂಡ ಕಾರಣ ಅವನ ಹೆಸರನ್ನು ಇಟ್ಟುಕೊಂಡನು.
[64] ಇವರು ತಮ್ಮ ವಂಶಾವಳಿಯ ದಾಖಲಾತಿಗಳಲ್ಲಿ ತಮ್ಮ ಹೆಸರುಗಳನ್ನು ಹುಡುಕಿದರು, ಆದರೆ ಅವು ಸಿಕ್ಕದೆ ಹೋದದ್ದರಿಂದ ಅವರು ಅಶುದ್ಧರೆಂದು ಪರಿಗಣಿಸಿ ಯಾಜಕ ಉದ್ಯೋಗದಿಂದ ಬಹಿಷ್ಕಾರವಾದರು.
[65] ಆದ್ದರಿಂದ ಊರೀಮ್, ತುಮ್ಮೀಮ್ ಮುಖಾಂತರ ದೈವನಿರ್ಣಯವನ್ನು ತಿಳಿಸಬಲ್ಲ ಯಾಜಕನು ದೊರೆಯುವ ತನಕ, ಇವರು ಮಹಾಪರಿಶುದ್ಧವಾದ ಪದಾರ್ಥಗಳನ್ನು ತಿನ್ನಬಾರದೆಂದು ರಾಜ್ಯಪಾಲನು ಆದೇಶಿಸಿದನು.
[66] ಸಭೆ ಸೇರಿದ ಸರ್ವಸಮೂಹದ ಒಟ್ಟು ಸಂಖ್ಯೆ 42,360.
[67] ಅವರ ಹೊರತಾಗಿ ಅವರ ದಾಸರೂ ದಾಸಿಯರೂ 7,337 ಮಂದಿಯೂ, ಅವರ ಹಾಡುಗಾರರೂ, ಹಾಡುಗಾರ್ತಿಯರೂ 245 ಮಂದಿಯೂ ಇದ್ದರು.
[68] ಅವರ 736 ಕುದುರೆಗಳು, ಅವರ 245 ಹೇಸರಕತ್ತೆಗಳು.
[69] 435 ಒಂಟೆಗಳು, 6,720 ಕತ್ತೆಗಳು ಇದ್ದವು.
[70] ಕುಟುಂಬಗಳ ಕೆಲವು ಮುಖ್ಯಸ್ಥರು ಕೆಲಸಕ್ಕೆ ಕಾಣಿಕೆಗಳನ್ನು ಕೊಟ್ಟರು. ರಾಜ್ಯಪಾಲನು ಬೊಕ್ಕಸಕ್ಕೆ 8.4 ಕಿಲೋಗ್ರಾಂ ಬಂಗಾರದ ನಾಣ್ಯಗಳನ್ನೂ, 50 ಪಾತ್ರೆಗಳನ್ನೂ, 530 ಯಾಜಕರ ಅಂಗಿಗಳನ್ನೂ ಕೊಟ್ಟನು.
[71] ಇದಲ್ಲದೆ ಮುಖ್ಯವಾದ ಪಿತೃಗಳಲ್ಲಿ ಕೆಲವರು ಕೆಲಸದ ಬೊಕ್ಕಸಕ್ಕೆ 170 ಕಿಲೋಗ್ರಾಂ ಬಂಗಾರದ ನಾಣ್ಯಗಳನ್ನೂ, 1.2 ಮೆಟ್ರಿಕ್ ಟನ್ ಬೆಳ್ಳಿಯನ್ನು ಕೊಟ್ಟರು.
[72] ಮಿಕ್ಕಾದ ಜನರು ಕೊಟ್ಟದ್ದೇನೆಂದರೆ: 170 ಕಿಲೋಗ್ರಾಂ ಬಂಗಾರದ ನಾಣ್ಯಗಳನ್ನೂ 1.1 ಮೆಟ್ರಿಕ್ ಟನ್ ಬೆಳ್ಳಿಯನ್ನೂ, 67 ಯಾಜಕರ ಅಂಗಿಗಳನ್ನೂ ಕೊಟ್ಟರು.
[73] ಹೀಗೆಯೇ ಯಾಜಕರೂ, ಲೇವಿಯರೂ, ದ್ವಾರಪಾಲಕರೂ, ಹಾಡುಗಾರರೂ, ಸಾಮಾನ್ಯ ಜನರೂ, ದೇವಾಲಯದ ಸೇವಕರೂ, ಸಮಸ್ತ ಇಸ್ರಾಯೇಲರೂ ತಮ್ಮ ತಮ್ಮ ಪಟ್ಟಣಗಳಲ್ಲಿ ವಾಸಿಸುತ್ತಿದ್ದರು. ಏಳನೆಯ ತಿಂಗಳು ಬಂದಾಗ ಇಸ್ರಾಯೇಲರು ತಮ್ಮ ತಮ್ಮ ಪಟ್ಟಣಗಳಲ್ಲಿ ವಾಸಿಸುತ್ತಿದ್ದರು.