Skip to content
Opens in a new window
Listen to this chapter • 7:07

[1] ಈಗ ಜನರ ನಾಯಕರು ಯೆರೂಸಲೇಮಿನಲ್ಲಿ ನೆಲೆಸಿದರು. ಉಳಿದ ಜನರೊಳಗೆ ಹತ್ತು ಮಂದಿಯಲ್ಲಿ ಒಂಬತ್ತು ಮಂದಿ ತಮ್ಮ ತಮ್ಮ ಊರುಗಳಲ್ಲಿ ಇದ್ದುಕೊಂಡು, ಹತ್ತರಲ್ಲೊಬ್ಬರು ಪವಿತ್ರ ನಗರವಾದ ಯೆರೂಸಲೇಮಿನಲ್ಲಿ ಬಂದು ವಾಸಿಸಲು ಚೀಟುಹಾಕಿದರು.

[2] ಆಗ ಜನರು ಯೆರೂಸಲೇಮಿನಲ್ಲಿ ವಾಸವಾಗಿರಲು, ಸಮ್ಮತಿಪಟ್ಟವರೆಲ್ಲರನ್ನು ಆಶೀರ್ವದಿಸಿದರು.

[3] ಯೆರೂಸಲೇಮಿನಲ್ಲಿ ವಾಸವಾಗಿದ್ದ ಸಂಸ್ಥಾನಪ್ರಧಾನರು ಯಾರೆಂದರೆ: ಯೆಹೂದದ ಪಟ್ಟಣಗಳಲ್ಲಿ ಇಸ್ರಾಯೇಲರೂ, ಯಾಜಕರೂ, ಲೇವಿಯರೂ, ದೇವಾಲಯದ ಸೇವಕರೂ, ಸೊಲೊಮೋನನ ಸೇವಕರ ಮಕ್ಕಳೂ, ಅವರವರು ತಮ್ಮ ತಮ್ಮ ಪಟ್ಟಣಗಳ ಸ್ವಾಸ್ತ್ಯಗಳಲ್ಲಿ ವಾಸವಾಗಿದ್ದರು.

[4] ಯೆರೂಸಲೇಮಿನಲ್ಲಿ ಯೆಹೂದ ಮಕ್ಕಳಲ್ಲಿಯೂ, ಬೆನ್ಯಾಮೀನ್ಯರಲ್ಲಿಯೂ ಕೆಲವರು ವಾಸವಾಗಿದ್ದರು. ಯೆಹೂದನ ವಂಶಜರಲ್ಲಿ: ಒಬ್ಬನು ಅತಾಯನು, ಇವನು ಉಜ್ಜೀಯನ ಮಗ, ಜೆಕರ್ಯನ ಮಗ, ಅಮರ್ಯನ ಮಗ, ಶೆಫಟ್ಯನ ಮಗ, ಮಹಲಲೇಲನ ಮಗ, ಇವನು ಪೆರೆಚ್ ಸಂತಾನದವನು.

[5] ಇನ್ನೊಬ್ಬನು ಬಾರೂಕನ ಮಗ ಮಾಸೇಯ. ಇವನು ಕೊಲ್ಹೋಜೆಯ ಮಗ, ಇವನು ಹಜಾಯನ ಮಗ, ಇವನು ಅದಾಯನ ಮಗ, ಇವನು ಯೋಯಾರೀಬನ ಮಗ, ಇವನು ಜೆಕರ್ಯನ ಮಗ, ಇವನು ಶೇಲಹನ ಸಂತಾನದವನು.

[6] ಯೆರೂಸಲೇಮಿನಲ್ಲಿ ವಾಸವಾಗಿರುವ ಪೆರೆಚನ ಪುತ್ರರೆಲ್ಲಾ 468 ಮಂದಿ. ಇವರು ಪರಾಕ್ರಮಶಾಲಿಗಳು.

[7] ಬೆನ್ಯಾಮೀನನ ವಂಶಜರು: ಸಲ್ಲು, ಇವನು ಮೆಷುಲ್ಲಾಮನ ಮಗ, ಯೆಶಾಯನ ಮಗ, ಇಥಿಯೇಲನ ಮಗ, ಮಾಸೇಯನ ಮಗ, ಕೊಲಾಯನ ಮಗ, ಪೆದಾಯನ ಮಗ, ಯೊವೇದನ ಮಗ,

[8] ಅವನ ತರುವಾಯ ಗಬ್ಬಾಯನು, ಸಲ್ಲಾಯನು, ಮೊದಲಾದ ಮಂದಿ 928.

[9] ಜಿಕ್ರಿಯ ಮಗ, ಯೋಯೇಲನು ಅವರಿಗೆ ಮೇಲ್ವಿಚಾರಕನಾಗಿದ್ದನು. ಹಸ್ಸೆನುವಾಹನ ಮಗ ಯೆಹೂದನು ಪಟ್ಟಣದ ಹೊಸ ಭಾಗದ ಮೇಲೆ ಮೇಲ್ವಿಚಾರಕನಾಗಿದ್ದನು.

[10] ಯಾಜಕರಲ್ಲಿ ಯಾರೆಂದರೆ: ಯೋಯಾರೀಬನ ಮಗ ಯೆದಾಯನು, ಯಾಕೀನನು.

[11] ಅಹೀಟೂಬನ ಮಗ, ಮೆರಾಯೋತನ ಮಗ, ಚಾದೋಕನ ಮಗ, ಮೆಷುಲ್ಲಾಮನ ಮಗ, ಹಿಲ್ಕೀಯನ ಮಗ ಸೆರಾಯನು ದೇವರ ಆಲಯದ ನಾಯಕನಾಗಿದ್ದನು.

[12] ದೇವಾಲಯದ ಕೆಲಸವನ್ನು ನಡೆಸುವ ಅವರ ಸಹೋದರರು 822 ಮಂದಿ ಇದ್ದರು. ಮಲ್ಕೀಯನ ಮಗ, ಪಷ್ಹೂರನ ಮಗ, ಜೆಕರ್ಯನ ಮಗ, ಅಮ್ಚೀಯ ಮಗ, ಪೆಲಲ್ಯನ ಮಗ, ಯೆರೋಹಾಮನ ಮಗ ಅದಾಯನೂ.

[13] ಪಿತೃಗಳಲ್ಲಿ ಮುಖ್ಯಸ್ಥರಾದ ಅವನ ಸಹೋದರರೂ 242 ಮಂದಿಯಾಗಿದ್ದರು. ಇಮ್ಮೇರನ ಮಗ ಮೆಷಿಲ್ಲೇಮೋತನ ಮಗ, ಅಹಜೈಯ ಮಗ, ಅಜರಯೇಲನ ಮಗ ಅಮಾಷಸಾಯಿ.

[14] ಪರಾಕ್ರಮಶಾಲಿಗಳಾಗಿದ್ದ ಅವರ ಸಹೋದರರು 128 ಮಂದಿ ಇದ್ದರು. ಹಗ್ಗೆದೋಲೀಮನ ಮಗನಾದ ಜಬ್ದಿಯೇಲನು ಅವರಿಗೆ ಮೇಲ್ವಿಚಾರಕನಾಗಿದ್ದನು.

[15] ಲೇವಿಯರಲ್ಲಿ ಯಾರೆಂದರೆ: ಬುನ್ನಿಯ ಮಗ, ಹಷಬ್ಯನ ಮಗ, ಅಜ್ರೀಕಾಮನ ಮಗ, ಹಷ್ಷೂಬನ ಮಗ ಶೆಮಾಯನು.

[16] ಲೇವಿಯರ ಮುಖ್ಯಸ್ಥರಲ್ಲಿ ಶಬ್ಬೆತೈನೂ, ಯೋಜಾಬಾದನೂ ದೇವರ ಆಲಯದ ಹೊರಗಿನ ಕೆಲಸವನ್ನು ವಿಚಾರಿಸುವವರಾಗಿದ್ದರು.

[17] ಇದಲ್ಲದೆ ಆಸಾಫನ ಮಗ ಜಬ್ದೀಯ ಮಗ, ಮೀಕನ ಮಗ ಮತ್ತನ್ಯನು ಪ್ರಾರ್ಥನೆಯನ್ನು ಮತ್ತು ಕೃತಜ್ಞತಾಸ್ತುತಿಯನ್ನು ಪ್ರಾರಂಭಿಸಲು ಮುಖ್ಯಸ್ಥನಾಗಿದ್ದನು. ಅವನ ಸಂಗಡಿಗರಲ್ಲಿ ಎರಡನೆಯವನು ಬಕ್ಬುಕ್ಯನು, ಅವನ ಸಂಗಡ ಯೆದುತೂನನ ಮಗ, ಗಲಾಲನ ಮಗ, ಶಮ್ಮೂವನ ಮಗ ಅಬ್ದನು.

[18] ಪರಿಶುದ್ಧ ಪಟ್ಟಣದಲ್ಲಿರುವ ಲೇವಿಯರೆಲ್ಲಾ 284 ಮಂದಿಯಾಗಿದ್ದರು.

[19] ದ್ವಾರಪಾಲಕರು: ಅಕ್ಕೂಬನೂ, ಟಲ್ಮೋನನೂ ಬಾಗಿಲುಗಳನ್ನು ಕಾಯುವವರಾದ ಅವರ ಸಂಗಡಿಗರೂ 172 ಮಂದಿಯಾಗಿದ್ದರು.

[20] ಇಸ್ರಾಯೇಲರ ಮಿಕ್ಕಾದ ಯಾಜಕರೂ, ಲೇವಿಯರೂ ತಮ್ಮ ತಮ್ಮ ಸ್ವಾಧೀನವಾಗಿದ್ದ ಯೆಹೂದದ ಎಲ್ಲಾ ಪಟ್ಟಣಗಳಲ್ಲಿ ವಾಸವಾಗಿದ್ದರು.

[21] ಆದರೆ ದೇವಾಲಯದ ಸೇವಕರು ಓಫೇಲ್ ಗುಡ್ಡದಲ್ಲಿ ವಾಸವಾಗಿದ್ದರು. ಜೀಹನೂ, ಗಿಷ್ಪನೂ ಅವರ ನಾಯಕರು.

[22] ಮೀಕನ ಮಗ, ಮತ್ತನ್ಯನ ಮಗ, ಹಷಬ್ಯನ ಮಗ, ಬಾನೀಯ ಮಗ ಉಜ್ಜೀಯು ಯೆರೂಸಲೇಮಿನಲ್ಲಿರುವ ಲೇವಿಯರ ಮೇಲ್ವಿಚಾರಕನಾಗಿದ್ದನು. ಆಸಾಫನ ವಂಶದಲ್ಲಿರುವ ಹಾಡುಗಾರನಾದ ಉಜ್ಜೀಯನು ದೇವರ ಆಲಯ ಕಾರ್ಯದ ಮೇಲೆ ಅಧಿಕಾರಿಯಾಗಿದ್ದನು.

[23] ಏಕೆಂದರೆ ದಿನದಿನಕ್ಕೆ ಹಾಡುಗಾರರಿಗೋಸ್ಕರ ಪ್ರತಿದಿನ ಕಟ್ಟಳೆ ಇರಬೇಕೆಂದು ಅರಸನು ಅವರನ್ನು ಕುರಿತು ಆಜ್ಞಾಪಿಸಿದ್ದನು.

[24] ಯೆಹೂದನ ಮಗ ಜೆರಹನ ಮಕ್ಕಳಲ್ಲಿ ಒಬ್ಬನಾಗಿರುವ ಮೆಷೇಜಬೇಲನ ಮಗನಾದ ಪೆತಹ್ಯನು ಜನರಿಗೋಸ್ಕರ ಸಕಲ ಕಾರ್ಯಗಳಲ್ಲಿ ಅರಸನ ಪ್ರತಿನಿಧಿಯಾಗಿದ್ದನು.

[25] ಗ್ರಾಮಗಳಲ್ಲಿಯೂ, ಅವುಗಳ ಹೊಲಗಳಲ್ಲಿಯೂ ಇದ್ದವರು ಯಾರೆಂದರೆ: ಯೆಹೂದನ ಮಕ್ಕಳಲ್ಲಿ ಕೆಲವರು ಕಿರ್ಯತ್ ಅರ್ಬ, ಅದರ ಗ್ರಾಮಗಳಲ್ಲಿಯೂ, ದೀಬೋನ್, ಅದರ ಗ್ರಾಮಗಳಲ್ಲಿಯೂ, ಯೆಕಬ್ಜೆಯೇಲ್, ಅದರ ಗ್ರಾಮಗಳಲ್ಲಿಯೂ,

[26] ಯೇಷೂವ ಎಂಬ ಗ್ರಾಮದಲ್ಲಿಯೂ, ಮೋಲಾದ ಗ್ರಾಮದಲ್ಲಿಯೂ, ಬೇತ್ ಪೆಲೆಟ್ ಗ್ರಾಮದಲ್ಲಿಯೂ,

[27] ಹಚರ್ ಷೂವಾಲ್ ಗ್ರಾಮದಲ್ಲಿಯೂ, ಬೇರ್ಷೆಬ ಮತ್ತು ಅವುಗಳ ಗ್ರಾಮಗಳಲ್ಲಿಯೂ

[28] ಚಿಕ್ಲಗ್, ಮೆಕೋನ ಮತ್ತು ಅವುಗಳ ಗ್ರಾಮಗಳಲ್ಲಿಯೂ,

[29] ಏನ್ರಿಮ್ಮೋನ್, ಚೊರ್ಗಾ, ಯರ್ಮೂತ್ ಎಂಬ ಗ್ರಾಮಗಳಲ್ಲಿಯೂ,

[30] ಜಾನೋಹ, ಅದುಲ್ಲಾಮ್ ಮತ್ತು ಇವುಗಳ ಗ್ರಾಮಗಳೂ ಲಾಕೀಷ್ ಊರೂ ಇದರ ಪ್ರಾಂತಗಳೂ ಅಜೇಕವೂ ಅದರ ಗ್ರಾಮಗಳೂ ಯೆಹೂದದವರ ನಿವಾಸಸ್ಥಾನಗಳು. ಅವರು ಬೇರ್ಷೆಬ ಮೊದಲುಗೊಂಡು ಹಿನ್ನೋಮ್ ತಗ್ಗಿನವರೆಗೂ ವಾಸವಾಗಿದ್ದರು.

[31] ಇದಲ್ಲದೆ ಬೆನ್ಯಾಮೀನ್ಯರು ಗೆಬ ಮೊದಲುಗೊಂಡು ಮಿಕ್ಮಾಷಿನವರೆಗೂ ವಾಸವಾಗಿದ್ದರು. ಅಯ್ಯಾ, ಬೇತೇಲ್ ಇವುಗಳ ಗ್ರಾಮಗಳೂ,

[32] ಅನಾತೋತ್, ನೋಬ್, ಅನನ್ಯ,

[33] ಹಾಚೋರ್, ರಾಮಾ, ಗಿತ್ತಯಿಮ್,

[34] ಹಾದೀದ್, ಚೆಬೋಯಿಮ್, ನೆಬಲ್ಲಾಟ್,

[35] ಲೋದ್, ಓನೋ ಮತ್ತು ಗೇಹರಾಷೀಮ್ ಎಂಬ ಕಸಬುಗಾರರ ತಗ್ಗೂ ಇವರಿಗೆ ಇದ್ದವು.

[36] ಯೆಹೂದದ ಲೇವಿಯರ ಕೆಲವು ವರ್ಗಗಳವರು ಬೆನ್ಯಾಮೀನಿನಲ್ಲಿಯೂ ವಾಸಿಸುತ್ತಿದ್ದರು.

ನೆಹೆಮೀಯ — Chapters