[1] ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನಿಂದ ಬಾಬಿಲೋನಿಗೆ ಸೆರೆ ಒಯ್ಯಲ್ಪಟ್ಟವರಲ್ಲಿ ಯೆರೂಸಲೇಮಿಗೂ ಯೆಹೂದ ಪ್ರಾಂತ್ಯದ ಸ್ವಂತ ಪಟ್ಟಣಗಳಿಗೂ ಸೆರೆಯಿಂದ ಹಿಂತಿರುಗಿ ಬಂದ (ಯೆಹೂದ) ಸಂಸ್ಥಾನದವರ ಜನಗಣತಿ.
[2] ಅವರು ಜೆರುಬ್ಬಾಬೆಲ್, ಯೇಷೂವ, ನೆಹೆಮೀಯ, ಸೆರಾಯ, ರೆಗೇಲಾಯ, ಮೊರ್ದೆಕೈ, ಬಿಲ್ಷಾನ್, ಮಿಸ್ಪಾರ್, ಬಿಗ್ವೈ, ರೆಹೂಮ್ ಮತ್ತು ಬಾಣ ಎಂಬ ನಾಯಕರೊಡನೆ ಹಿಂತಿರುಗಿ ಬಂದವರು:
[3] ಪರೋಷಿನವರು 2,172
[4] ಶೆಫಟ್ಯನವರು 372
[5] ಆರಹನವರು 775
[6] ಪಹತ್ ಮೋವಾಬಿನವರಾದ ಯೇಷೂವ ಮತ್ತು ಯೋವಾಬ್ ಸಂತಾನದವರು 2,812
[7] ಏಲಾಮಿನವರು 1,254
[8] ಜತ್ತೂವಿನವರು 945
[9] ಜಕ್ಕೈಯವರು 760
[10] ಬಾನೀಯವರು 642
[11] ಬೇಬೈಯವರು 623
[12] ಅಜ್ಗಾದಿನವರು 1,222
[13] ಅದೋನೀಕಾಮಿನವರು 666
[14] ಬಿಗ್ವೈಯವರು 2,056
[15] ಆದೀನನವರು 454
[16] ಆಟೇರಿನವರಾದ ಹಿಜ್ಕೀಯನ ಸಂತಾನದವರು 98
[17] ಬೇಚೈಯವರು 323
[18] ಯೋರನವರು 112
[19] ಹಾಷುಮಿನವರು 223
[20] ಗಿಬ್ಬಾರಿನವರು 95
[21] ಬೇತ್ಲೆಹೇಮಿನವರು 123
[22] ನೆಟೋಫ ಊರಿನವರು 56
[23] ಅನಾತೋತ್ ಊರಿನವರು 128
[24] ಅಜ್ಮಾವೆತಿನವರು 42
[25] ಕಿರ್ಯತ್ಯಾರೀಮ್, ಕೆಫೀರ ಮತ್ತು ಬೇರೋತ್ ಊರುಗಳವರು 743
[26] ರಾಮಾ ಮತ್ತು ಗೆಬ ಊರುಗಳವರು 621
[27] ಮಿಕ್ಮಾಸಿನವರು 122
[28] ಬೇತೇಲ್ ಮತ್ತು ಆಯಿ ಎಂಬ ಊರುಗಳವರು 223
[29] ನೆಬೋವಿನವರು 52
[30] ಮಗ್ಬೀಷಿನವರು 156
[31] ಬೇರೆ ಏಲಾಮಿನವರು 1,254
[32] ಹಾರಿಮನವರು 320
[33] ಲೋದ್, ಹಾದೀದ್ ಮತ್ತು ಓನೋ ಎಂಬ ಊರುಗಳವರು 725
[34] ಯೆರಿಕೋವಿನವರು 345
[35] ಸೆನಾಹನವರು 3,630
[36] ಯಾಜಕರಲ್ಲಿ - ಯೆದಾಯನವರಾದ ಯೇಷೂವನ ಮನೆಯವರು 973
[37] ಇಮ್ಮೇರನವರು 1,052
[38] ಪಷ್ಹೂರನವರು 1,247
[39] ಹಾರಿಮನವರು 1,017
[40] ಲೇವಿಯರಲ್ಲಿ: ಹೋದವ್ಯನವರಾದ ಯೇಷೂವ ಮತ್ತು ಕದ್ಮೀಯೇಲ್ ಇವರ ಸಂತಾನದವರು 74
[41] ಗಾಯಕರಲ್ಲಿ: ಆಸಾಫ್ಯರು 128
[42] ದ್ವಾರಪಾಲಕರ ಸಂತಾನದವರು: ಶಲ್ಲೂಮ್ ಸಂತಾನದವರು, ಆಟೇರ್, ಟಲ್ಮೋನ್, ಅಕ್ಕೂಬ್, ಹಟೀಟ ಮತ್ತು ಶೋಬೈ ಇವರು ಒಟ್ಟು 139.
[43] ದೇವಸ್ಥಾನದಾಸರಲ್ಲಿ: ಜೀಹ ಸಂತಾನದವರು ಮತ್ತು ಹಸೂಫ, ಟಬ್ಬಾವೋತ್,
[44] ಕೇರೋಸ್, ಸೀಯಹಾ, ಪಾದೋನ್,
[45] ಲೆಬಾನ, ಹಗಾಬ, ಅಕ್ಕೂಬ್,
[46] ಹಾಗಾಬ, ಶಮ್ಲೈ, ಮತ್ತು ಹಾನಾನ್,
[47] ಗಿದ್ದೇಲನ ಸಂತಾನದವರು, ಗಹರ್, ರೆವಾಯ,
[48] ರೆಚೀನ್, ನೆಕೋದ, ಗಜ್ಜಾಮ್,
[49] ಉಜ್ಜ, ಪಾಸೇಹ, ಬೇಸೈ,
[50] ಅಸ್ನ, ಮೆಗೂನೀಮ್ ಮತ್ತು ನೆಫೀಸೀಮ್,
[51] ಬಕ್ಬೂಕ್ ಸಂತಾನದವರು, ಹಕ್ಕೂಫ, ಹರ್ಹೂರ್,
[52] ಬಚ್ಲೂತ್, ಮೆಹೀದ, ಹರ್ಷ,
[53] ಬರ್ಕೋಸ್, ಸೀಸೆರ, ತೆಮಹ,
[54] ನೆಚೀಹ ಮತ್ತು ಹಟೀಫ.
[55] ಸೊಲೊಮೋನನ ದಾಸರ ಸಂತಾನದವರು; ಸೋಟೈ ಸಂತಾನದವರು, ಹಸ್ಲೋಫೆರೆತ್, ಪೆರೂದ,
[56] ಯಾಲ, ದರ್ಕೋನ್ ಗಿದ್ದೇಲ್,
[57] ಶೆಫಟ್ಯ, ಹಟ್ಟೀಲ್, ಪೋಕೆರೆತ್ ಹಚ್ಚೆಬಾಯೀಮ್ ಮತ್ತು ಆಮಿ.
[58] ಎಲ್ಲಾ ಸಂತಾನದವರನ್ನು ದೇವಸ್ಥಾನದ ಸೇವೆಗಾಗಿ ನೇಮಿಸಿದರು ಮತ್ತು ಸೊಲೊಮೋನನ ದಾಸರೂ ಒಟ್ಟು 392.
[59] ಉಳಿದ ತೇಲ್ಮೆಲಹ, ತೇಲ್ಹರ್ಷ, ಕೆರೂಬ್, ಅದ್ದಾನ್ ಮತ್ತು ಇಮ್ಮೇರ್ ಎಂಬ ಊರುಗಳಿಂದ ಬಂದವರಾಗಿ ತಮ್ಮ ಗೋತ್ರವಂಶಾವಳಿಗಳನ್ನು ತೋರಿಸಿದರು.
[60] ಆದರೂ ತಾವು ಇಸ್ರಾಯೇಲರೆಂಬುದನ್ನು ಸ್ಥಾಪಿಸಿಲಾರದವರಾದ ದೆಲಾಯ, ಟೋಬೀಯ ಮತ್ತು ನೆಕೋದ ಇವರ ಸಂತಾನದವರು 652.
[61] ಯಾಜಕರಲ್ಲಿ: ಹಬಯ್ಯ, ಹಕ್ಕೋಜ್ ಮತ್ತು ಬರ್ಜಿಲ್ಲೈ ಇವರ ಸಂತಾನದವರು. (ಈ ಬರ್ಜಿಲ್ಲೈ ಎಂಬವನು ಗಿಲ್ಯಾದ್ಯನಾದ ಬರ್ಜಿಲ್ಲೈಯ ಹೆಣ್ಣುಮಕ್ಕಳಲ್ಲಿ ಒಬ್ಬಳನ್ನು ಮದುವೆಮಾಡಿಕೊಂಡು ಅವನ ಹೆಸರನ್ನೂ ಇಟ್ಟುಕೊಂಡಿದ್ದನು.)
[62] ಇವರು ತಮ್ಮ ವಂಶಾವಳಿಯ ಪತ್ರಗಳನ್ನು ಹುಡುಕಿದರೂ ಅವು ಸಿಕ್ಕದ ಕಾರಣ ಅಶುದ್ಧರೆಂದು ಯಾಜಕೋದ್ಯೋಗದಿಂದ ತಿರಸ್ಕರಿಸಲ್ಪಟ್ಟರು.
[63] ಊರೀಮ್ ಮತ್ತು ತುಮ್ಮೀಮುಗಳ ಮೂಲಕ ದೈವನಿರ್ಣಯವನ್ನು ತಿಳಿಸಬಲ್ಲವನಾದ ಯಾಜಕನು ಬರುವ ತನಕ ಇವರು ಮಹಾಪರಿಶುದ್ಧ ಪದಾರ್ಥಗಳಲ್ಲಿ ಭೋಜನ ಮಾಡಬಾರದೆಂಬುದಾಗಿ ದೇಶಾಧಿಪತಿಯು ತೀರ್ಪುಮಾಡಿದನು.
[64] ಸರ್ವಸಮೂಹದವರ ಒಟ್ಟು ಸಂಖ್ಯೆಯು ನಲ್ವತ್ತೆರಡು ಸಾವಿರದ ಮುನ್ನೂರ ಆರವತ್ತು.
[65] ಈ ಸಂಖ್ಯೆಯಲ್ಲಿ ಲೆಕ್ಕಿಸಲ್ಪಡದ ಅವರ ದಾಸದಾಸಿಯರು ಏಳು ಸಾವಿರದ ಮುನ್ನೂರ ಮೂವತ್ತೇಳು ಜನರು. ಅವರಲ್ಲಿ ಗಾಯಕರೂ, ಗಾಯಕಿಯರೂ ಇನ್ನೂರು ಜನರು ಇದ್ದರು.
[66] ಅವರಿಗೆ ಏಳು ನೂರ ಮೂವತ್ತಾರು ಕುದುರೆಗಳೂ, ಇನ್ನೂರ ನಲ್ವತ್ತೈದು ಹೇಸರಗತ್ತೆಗಳೂ,
[67] ನಾನೂರ ಮೂವತ್ತೈದು ಒಂಟೆಗಳೂ, ಆರು ಸಾವಿರದ ಏಳು ನೂರ ಇಪ್ಪತ್ತು ಕತ್ತೆಗಳೂ ಇದ್ದವು.
[68] ಗೋತ್ರಪ್ರಧಾನರಲ್ಲಿ ಕೆಲವರು ಯೆರೂಸಲೇಮಿನಲ್ಲಿ ಯೆಹೋವನ ಆಲಯವಿದ್ದ ಸ್ಥಳಕ್ಕೆ ಬಂದಾಗ ದೇವಾಲಯವನ್ನು ಪುನಃ ಅದರ ಸ್ಥಳದಲ್ಲಿ ಕಟ್ಟುವುದಕ್ಕೋಸ್ಕರ ಕಾಣಿಕೆಗಳನ್ನು ಕೊಟ್ಟರು.
[69] ಅವರು ತಮ್ಮ ಸಾಮರ್ಥ್ಯಕ್ಕನುಸಾರವಾಗಿ ಕಟ್ಟಡದ ಭಂಡಾರಕ್ಕೆ ಕೊಟ್ಟದ್ದು ಅರುವತ್ತೊಂದು ಸಾವಿರ ಬಂಗಾರದ ಪವನುಗಳು, ಎರಡು ಲಕ್ಷದ ಐವತ್ತು ಸಾವಿರ ತೊಲಾ ಬೆಳ್ಳಿ ಮತ್ತು ನೂರು ಯಾಜಕವಸ್ತ್ರಗಳು.
[70] ದೇವಸ್ಥಾನದ ಸೇವೆಗಾಗಿ ಇದ್ದ ಯಾಜಕರು, ಲೇವಿಯರು, ಗಾಯಕರು, ದ್ವಾರಪಾಲಕರು ಮತ್ತು ಸಾಧಾರಣಜನರಲ್ಲಿ ಕೆಲವರು ಅವರವರಿಗೆ ನೇಮಕವಾದ ಪಟ್ಟಣಗಳಲ್ಲಿ ವಾಸಿಸಿದರು; ಬೇರೆ ಎಲ್ಲಾ ಇಸ್ರಾಯೇಲರು ತಮ್ಮ ತಮ್ಮ ಪಟ್ಟಣಗಳಲ್ಲಿ ವಾಸಿಸಿದರು.