ನಮ್ಮ ಮತ್ತು ಕನ್ನಡ ಸಿನಿಮಾ ನಂಟು
09 October 2025

ನಮ್ಮ ಮತ್ತು ಕನ್ನಡ ಸಿನಿಮಾ ನಂಟು

SatisHFaction Kannada Podcast from the US

About

ನಮ್ಮ ಮತ್ತು ಕನ್ನಡ ಸಿನಿಮಾ ನಂಟು


ನಮ್ಮ ಮತ್ತು ನಮ್ಮ ಕನ್ನಡ ಸಿನಿಮಾಗಳ ಬಾಂಧವ್ಯ ಹಲವಾರು ದಶಕಗಳ ವಿಸ್ತಾರವುಳ್ಳದ್ದು.


ನಾವು ಒಂದು ಸಿನಿಮಾ ಅಥವಾ ಸೀರಿಯಲ್ ನೋಡ್ದಾಗ, ನಮಗೆ ಗೊತ್ತೋ ಗೊತ್ತಿಲ್ಲದೆಯೋ ಆಯಾ ಸಿನಿಮಾಗಳ ಕಲಾವಿದರ ನಡುವೆ ಒಂದು ಅವಿನಾಭಾವ ಸಂಬಂಧ ಬೆಳೆದುಕೊಳ್ಳುತ್ತೆ.


ಈ ಒಂದು ಸಂಬಂಧ ಬಹಳ ವಿಶೇಷವಾದದ್ದು. ಆ ಕಾರಣದಿಂದ ನಮ್ಮ ಕನ್ನಡ (ನೇಟಿವ್) ಸಿನಿಮಾಗಳು ನಮಗೆ ಬಹಳ ಆಪ್ತವಾಗುತ್ತವೆ. ಈ ಕೆಳಗಿನ ಯಾವೊಬ್ಬ ಕಲಾವಿದರನ್ನು ನೀವು ನೆನಪಿಸಿಕೊಂಡರೂ ಸಾಕು ನಿಮಗೆ ಅವರ ಸಿನಿಮಾಗಳು, ಅವರ ಪರ್ಸನಾಲಿಟಿ ನೆನಪಿಗೆ ಬರೋದು ಸಹಜ: ಶನಿಮಹಾದೇವಪ್ಪ, ಟೈಗರ್ ಪ್ರಭಾಕರ್, ಕೆ.ಎಸ್. ಅಶ್ವಥ್, ವಜ್ರಮುನಿ, ತೂಗುದೀಪ ಶ್ರೀನಿವಾಸ್, ಉಮಾಶ್ರೀ, ತಾರಾ, ಸುಂದರಕೃಷ್ಣ ಅರಸ್, ಪಂಡರೀಬಾಯಿ, ಇತ್ಯಾದಿ.