ಎಷ್ಟು ದುಡ್ಡು ಇದ್ರೆ ಒಳ್ಳೇದು? (86)
26 November 2025

ಎಷ್ಟು ದುಡ್ಡು ಇದ್ರೆ ಒಳ್ಳೇದು? (86)

SatisHFaction Kannada Podcast from the US

About

ಎಷ್ಟು ದುಡ್ಡು ಇದ್ರೆ ಒಳ್ಳೇದು?


ಈಗೆಲ್ಲ ಅಮೇರಿಕದಲ್ಲಿ ದೊಡ್ಡ ದೊಡ್ಡ ಕಂಪನಿಗಳು, ಕಾಸ್ಟ್ ಕಟ್ಟಿಂಗ್ ಅನ್ನೋ ಹೆಸರಿನಲ್ಲಿ ಸಾವಿರಾರು ಜನರನ್ನು ಮನೆಗೆ ಕಳಿಸೋದನ್ನ ನೋಡಿದ್ರೆ, ಅಮೇರಿಕದ ಎಂಪ್ಲಾಯ್‌ಮೆಂಟ್ ಸಿಚುವೇಶನ್ ಬದಲಾಗುತ್ತೋ ಇಲ್ಲವೋ ಅನ್ನೋ ಸಂಶಯ ಬರುತ್ತೆ.


ನಮ್ಮ ಕಂಪನಿ ಒಂದರಲ್ಲೇ ಸುಮಾರು 13 ಸಾವಿರ ಜನರು ಒಂದೇ ಕಳೆದುಕೊಳ್ಳಬೇಕಾಗಿ ಬಂದಾಗ ಅವರನ್ನೆಲ್ಲ ನೆನೆದು ಒಂದು ಸರತಿ ಕರುಳು ಚುರುಕು ಅಂತು. ಮತ್ತೆ ಮರುಕ್ಷಣ, ಇದೆಲ್ಲ ಕ್ಯಾಪಿಟಲಿಸಮ್ಮಿನ ಲೀಲೆ. ಇಲ್ಲಿ ಯಾರೂ ಯಾವತ್ತೂ ಶಾಶ್ವತರಲ್ಲ, ಯಾರು indispensible ಅಲ್ಲ, ಅನ್ನೋ ಮಾತು ಕೂಡಾ ನೆನಪಿಗೆ ಬಂತು. ಕೆಲಸ ಕಳೆದುಕೊಂಡವರಿಗೆ, ಆಯಾ ಕಂಪನಿಗಳಲ್ಲಿ, ಅವರವರ ಸರ್ವೀಸಿಗೆ ಸಂಬಂಧ ಪಟ್ಟಂತೆ ಒಂದಿಷ್ಟು severence ಬರುತ್ತೆ. ಆದ್ರೆ, ಎಲ್ಲ ಕಂಪನಿಗಳಲ್ಲೂ ಹಾಗೇ ಬರುತ್ತೆ ಅಂತ ಹೇಳೋಕಾಗಲ್ಲ. ನನಗೆ ಗೊತ್ತಿರೋ ಹಾಗೆ, ಕೆಲವು ಕಂಪನಿಗಳಲ್ಲಿ, ಅದೆಷ್ಟೇ ವರ್ಷ ದುಡಿದ್ರೂ, ಒಂದು ತಿಂಗಳ ಸಂಬಳ ಕೊಟ್ಟು ಕೆಲಸಗಾರರನ್ನು ಮನೆಗೆ ಕಳಿಸಿರೋ ನಿದರ್ಶನಗಳೂ ಇವೆ. ಇನ್ನು ಕೆಲವು ಸಂದರ್ಭಗಳಲ್ಲಿ, ಕಂಪನಿಗಳೇನಾದರೂ ಬ್ಯಾಂಕ್ರಪ್ಟ್ ಆದ್ರೆ, ಇರೋ ಸಂಬಳವನ್ನುಕೊಡದೇ ಇರುವ ಸಾಧ್ಯತೆ ಇದೆ. ಹೀಗೆ, ಕ್ಯಾಪಿಟಲಿಸಮ್ಮಿನ ಕೆಲಸ ಅಂದ್ರೆ, ನೀರಿನ ಮೇಲಿನ ಗುಳ್ಳೆಯ ಹಾಗೆ. ಇದ್ದಾಗ ಮಾಡು, ಇಲ್ಲದಾಗ ಮಡಿ ಅನ್ನುವ ಒಂದು ಮಾತಿನಿಂದ ಇಲ್ಲಿಯ ಸ್ಥಿತಿಗತಿಯನ್ನು ಹೇಳಿಬಿಡಬಹುದು.


***

ಆದರೆ, ಇವತ್ತಿನ ಟಾಪಿಕ್ಕು, ಕೆಲಸದ ಬಗ್ಗೆ ಅಲ್ಲ. ಹೀಗೆ ಕೆಲಸ ಮಾಡಿ ಜನರು ಈ ಕ್ಯಾಪಿಟಲಿಸಮ್ಮಿನ ಪ್ರಪಂಚದಲ್ಲಿ ತಮ್ಮ ವೆಲ್ತ್ ಅನ್ನು ಒಟ್ಟುಗೂಡಿಸಿಕೊಳ್ಳುತ್ತಾರಲ್ಲ. ಅವರನ್ನ ನೋಡಿ ಒಮ್ಮೆ ಆಶ್ಚರ್ಯ ಆಯಿತು. ಒಂದು ಕಡೆ, ಘಂಟೆಗೆ 18 ಡಾಲರ್ ಗೆ ದುಡಿಯುವ ದುಡಿಮೆ, ಮತ್ತೊಂದು ಕಡೆ, ತಿಂಗಳಿಗೆ ಮಿಲಿಯನ್ ಗಟ್ಟಲೆ ದುಡಿಯುವ ಮಹನೀಯರೂ ಸಿಗುತ್ತಾರೆ. ಹೀಗೆ, ಕ್ಯಾಪಿಟಲಿಸಮ್ಮಿನ ಮತ್ತೊಂದು ಮುಖ ಅಂದ್ರೆ ಡಿವಿಜನ್.